ಅಭಿನಯ ಚಕ್ರವರ್ತಿಗೆ ಈ ಇಬ್ಬರು ನಟರನ್ನು ಕಂಡರೆ ಸಿಕ್ಕಾಪಟ್ಟೆ ಭಯವಂತೆ..!! ಯಾರದು..?

19 Apr 2019 10:49 AM | Entertainment
4156 Report

ಸ್ಯಾಂಡಲ್'ನಲ್ಲಿ ಬಹು ಬೇಡಿಕೆಯ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು... ಸ್ಯಾಂಡಲ್'ವುಡ್ ನ ಕಿಚ್ಚನಿಗೆ ಅಭಿಮಾನಿಗಳ ಬಳಗ ದೊಡ್ಡದೇ ಇದೆ..ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡ ಕಿಚ್ಚನನ್ನು ಇಷ್ಟ ಪಡುತ್ತಾರೆ.. ಚಂದನವನದಲ್ಲಿ ಮಾತ್ರವಲ್ಲದೆ ಪರ ಭಾಷೆಯಲ್ಲಿಯೂ ಕೂಡ ಕಿಚ್ಚ ಪುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಚಂದನವನದ ಸ್ಟೈಲಿಶ್ ಸ್ಟಾರ್ ಅಂದ್ರೆ ಅದು ಸುದೀಪ್.. ಕಿಚ್ಚ ಯಾರಿಗೂ ಕೂಡ ಹೆದರುವುದೇ ಇಲ್ಲ... ತನ್ನ ಆದ ಮನೋಜ್ಙ ಅಭಿನಯದಿಂದ ಸಾಕಷ್ಟು ಹೆಸರು ಮಾಡಿದ್ದಾರೆ..

ಸ್ಯಾಂಡಲ್ ವುಡ್ ನ ಕೆಚ್ಚೆದೆಯ ಆರಡಿ ಕಟೌಟ್ ಕಿಚ್ಚ ಅಂದರೆ ಪ್ರಾಣ ಕೊಡುವ ಅದೆಷ್ಟೋ ಅಭಿಮಾನಿಗಳಿದ್ದಾರೆ . ಆದರೆ ಕಿಚ್ಚ ಸುದೀಪ್ ಅವರು ಭಯ ಪಡೋದು ಈ ಇಬ್ಬರಿಗೆ ಮಾತ್ರವಂತೆ... ಆಗಾದರೆ ಆ ಇಬ್ಬರು ವಿಶೇಷ ವ್ಯಕ್ತಿಗಳು ಯಾರು ಎಂದು ಯೋಚನೆ ಮಾಡುತ್ತಿದ್ದೀರಾ..?, ಅವರು ಮತ್ಯಾರು ಅಲ್ಲ... ಡಾ. ವಿಷ್ಣು ವರ್ಧನ್, ಹಾಗೂ ಪ್ರಕಾಶ್ ರೈ.. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರೀಕರಣದ ಸಂಧರ್ಭದಲ್ಲಿ ಡಾ.ವಿಷ್ಣುವರ್ಧನ್ ಸರ್ ಮುಂದೆ ಹೆದರಿಕೊಂಡೆ ಕಿಚ್ಚ ಅಭಿನಯ ಮಾಡಿದ್ದರಂತೆ.. ಇನ್ನೂ ರನ್ನ ಚಿತ್ರೀಕರಣದ ಸಮಯದಲ್ಲಿ ಪ್ರಕಾಶ್ ರೈ ಅವರಿಗೆ.

ಈ ಮಾತು ಹೇಳಿದ್ದು ಸ್ವತಹ ಸುದೀಪ್ ಅವರೇ.. , ಪ್ರಕಾಶ್ ರೈ ಬರೆದ ಇರುವುದೆಲ್ಲವ ಬಿಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಆಗಮಿಸಿದ್ದ ಸುದೀಪ್ ಅವರು ಈ ಮಾತುಗಳನ್ನು ಆಡಿದ್ದಾರೆ. ನಾನು ಪ್ರಕಾಶ್ ರೈ ಅವರೊಟ್ಟಿಗೆ ಅಭಿನಯಿಸಲು ಬಹಳ ಸಮಯದಿಂದ ಕಾದಿದ್ದೆ. ಆ ಅವಕಾಶ ಒದಗಿದ್ದು ರನ್ನ ಚಿತ್ರದಲ್ಲಿ. ಅವರು ಎದುರಿದ್ದರೆ ಅಭಿನಯಿಸುವುದು ಬಹಳ ಕಷ್ಟ, ಅವರು ಮಾತನಾಡುತ್ತಿದ್ದಾರೆ ಎಕೋ ಒಡಿಯುತ್ತೆ. ಅವರು ನಟಿಸುವಾಗ ನಾನು ಮಾತನಾಡಲೇ ಇಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ.. ಒಬ್ಬೊಬ್ಬರಿಗೆ ಒಬ್ಬೊಬ್ಬರ ಮೇಲೆ ಪ್ರೀತಿ ವಿಶ್ವಾಸ ಇದ್ದೆ ಇರುತ್ತದೆ. ಅದೇ ಸ್ಯಾಂಡಲ್ ವುಡ್ ನ ಬೆಳವಣಿಗೆಗೂ ಕೂಡ ಕಾರಣವಾಗುವುದು ಎಂದಿದ್ದಾರೆ.

Edited By

Manjula M

Reported By

Manjula M

Comments