ನಿಖಿಲ್ ಆಯ್ತು.. ಇದೀಗ ಚಂದನವನಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ರಾಜಕಾರಣಿ ಮಗ..!!

19 Apr 2019 9:26 AM | Entertainment
195 Report

ಬಣ್ಣದ ಲೋಕಕ್ಕೆ ಯಾರು ಯಾವಾಗ ಬೇಕಾದ್ರೂ ಎಂಟ್ರಿ ಕೊಡಬಹುದು... . ಆದರೆ ಬಣ್ಣದ ಜಗತ್ತು ಕೈ ಹಿಡಿಯೋದು ಕೆಲವರನ್ನು ಮಾತ್ರ... ಅದೃಷ್ಟದ ಜೊತೆಗೆ ಅಂದ, ಚಂದ, ನಟನೆಯ ಕೌಶಲ್ಯ ಇದ್ದವರಿಗೆ ಬಣ್ಣದ ಲೋಕ ಹೇಳಿ ಮಾಡಿಸಿದ್ದು.. ಬಣ್ಣದ ಗೀಳು ತಲೆಗೆ ಹಚ್ಚಿಕೊಂಡರೆ ಮುಗಿತು.. ಹೇಗಾದರೂ ಮಾಡಿ ಅಲ್ಲಿಗೆ ಹೋಗಬೇಕು ಅನಿಸುತ್ತಿರುತ್ತದೆ. ಇದೀಗ ರಾಜಕಾರಣಿಗಳು ಮಕ್ಕಳೂ ಕೂಡ ಸ್ಯಾಂಡಲ್ ವುಡ್ ಎಂಟ್ರಿ ಕೊಡುತ್ತಿದ್ದಾರೆ.

ಸಚಿವ ಜಮೀರ್ ಅಹಮದ್ ಖಾನ್ ಅವರ ಮಗ ಜಾಹಿದ್ ಖಾನ್ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಆದರೆ ಇದೀಗ ಅವರು ಸ್ಯಾಂಡಲ್ ವುಡ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆಯಲಿದ್ದಾರೆ.. 'ಬೆಲ್ ಬಾಟಮ್' ಚಿತ್ರದ ನಿರ್ದೇಶಕ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಗ ಜಾಹಿದ್ ಖಾನ್ ಬಣ್ಣ ಹ. ಜಾಹಿದ್ ಖಾನ್ ಬಣ್ಣ ಹಚ್ಚಲಿದ್ದಾರೆ..

ಅವರಿಗೆ ಸೂಟ್ ಆಗುವಂತಹ ಚಿತ್ರಕಥೆಯನ್ನು ಜಯತೀರ್ಥ ಈಗಾಗಲೇ ಸಿದ್ದ ಪಡಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜಾಹಿದ್ ಖಾನ್ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ. ಜಾಹಿದ್ ಖಾನ್ ಮುಂಬೈನಲ್ಲಿ ನಟನಾ ತರಬೇತಿ ಪಡೆದುಕೊಂಡಿದ್ದಾರೆ. ಸಖತ್ ಸ್ಟೈಲಿಶ್ ಆಗಿರುವ ಅವರು ಸ್ಯಾಂಡಲ್ ವುಡ್ ಮೂಲಕವೇ ಅದೃಷ್ಟ ಪರೀಕ್ಷೆಗೆ ಇಳಿಯಲು ಸಿದ್ದವಾಗಿದ್ದಾರೆ.. ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿರುವ ಜಾಹಿದ್ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕನಾಗಿ ಉಳಿದುಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments