ಓಟ್ ಮಾಡಿದ ಮೇಲೆ ಸುದೀಪ್ ಹೇಳಿದ್ದೇನು ಗೊತ್ತಾ..?

18 Apr 2019 11:41 AM | Entertainment
20242 Report

ಅಭಿನಯ  ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಮತದಾನ ಮಾಡಿದ್ದಾರೆ. ಬೆಂಗಳೂರಿನ ಜೆಪಿ ನಗರದ ಮತಗಟ್ಟೆಗೆ ಆಗಮಿಸಿದ ಸುದೀಪ್ ಮತ್ತು ಪ್ರಿಯಾ ಓಟ್ ಮಾಡಿದ ನಂತರ  ಮಾಧ್ಯವದವರೊಂದಿಗೆ ಮಾತನಾಡಿದ್ದಾರೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಇಂದು ಕೂಡ ಓಟ್ ಮಾಡದೇ ಮನೆಯಲ್ಲಿ ಕುಳಿತವರಿಗೆ ಆ ದೇವರು ಒಳ್ಳೆಯದು ಮಾಡಲಿ ಎಂದರು.

ಇದನ್ನು ಯಾರು ಹೇಳ ಬೇಕಿಲ್ಲ…. ತಮ್ಮ ಜವಬ್ದಾರಿಯನ್ನು ನಿರ್ವಹಿಸ ಬೇಕು ಎಂದು ಹೇಳಿದ್ದಾರೆ.ನಾನು ಈ ಬಾರಿ ಪ್ರಚಾರಕ್ಕೆ ಹೋಗಿಲ್ಲ. 2 ವರ್ಷಗಳ ಹಿಂದೆಯೇ ಚುನಾವಣೆ ಪ್ರಚಾರಕ್ಕೆ ಹೋಗದಿರಲು ನಿರ್ಧಾರ ಕೈಗೊಂಡಿದ್ದೇನೆ. ಹಾಗೆಂದು ನನ್ನ ಬೆಂಬಲ ಇಲ್ಲವೆಂದಲ್ಲ. ನಾನು ಅಲ್ಲಿ ಇಲ್ಲದಿದ್ದರೂ ಬೆಂಬಲ ಇರುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರ ಈ ಹೇಳಿಕೆಯಿಂದ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೇ ಅವರು ಮಂಡ್ಯದ ಅಭ್ಯರ್ಥಿ ಸುಮಲತಾಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ, ಆದರೆ ಕುಮಾರ ಸ್ವಾಮಿ ಅವರ  ಆತ್ಮೀಯರು ಆಗಿದ್ದಾರೆ. ಆದಾಗ್ಯೂ ಅವರ ಈ ಹೇಳಿಕೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಪರವೇ ಎಂಬುದು ಖಚಿತವಾಗಿದೆ ಎಂದು ಕೆಲ ಬಲ್ಲ ಮೂಲಗಳು ತಿಳಿಸಿವೆ.

Edited By

Kavya shree

Reported By

Kavya shree

Comments