ಕೊನೆಗಳಿಗೆಯಲ್ಲಿ ಮಂಡ್ಯ ಚುನಾವಣೆಗೆ ಎಂಟ್ರಿ ಕೊಟ್ಟ ತಿಥಿ ಖ್ಯಾತಿಯ ಸೆಂಚುರಿಗೌಡ.........!!!

17 Apr 2019 1:49 PM | Entertainment
1384 Report

ಮಂಡ್ಯ ಲೋಕಸಭೆ ಚುನಾವಣೆಗೆ ಇದೀಗ ಸೆಂಚುರಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಕೇಳಿದ್ರೆ ಅಚ್ಚರಿಯಾಗುತ್ತೆ ಅಲ್ವಾ....ದಿವಂಗತ ಸೆಂಚುರಿ ಗೌಡ ಎಲ್ಲಿಂದ ಬಂದ್ರು ಅಂತಾ....!! ಮಂಡ್ಯ ಲೋಕ ಸಭೆ ಚುನಾವಣೆ ಕಾವು ಜೋರಾಗುತ್ತಿದ್ದಂತೇ ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ತಿಥಿ ಖ್ಯಾತಿಯ ಸೆಂಚುರಿ ಗೌಡ ಅವರು ನಿಮಗೆ ನೆನಪಿರಬೇಕಲ್ಲವೆ… ಅದರೆ ಇದೀಗ ಕ್ಯಾಂಪೇನ್ ಭರಾಟೆ ಮುಗಿದಿದೆ. ನಾಳೆ ಮತದಾನ ನಡೆಯಲಿದೆ. ಸೆಂಟರ್ ಆಫ್ ಅಟ್ರಾಕ್ಷನ್  ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ನಡುವೆ ದೊಡ್ಡ ಪೈಪೋಟಿಯೇ ಆರಂಭವಾಗಿದೆ. ಆದರೆ ಇವರಿಬ್ಬರ ಮಧ್ಯೆ ಸೆಂಚುರಿ ಗೌಡ ಕೂಡ ಎಲೆಕ್ಷನ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಅದೇಗೆ ಅಂತೀರಾ.. ಸೆಂಚುರಿ ಗೌಡ ಪಾತ್ರ ಮಾಡಿದ ಸಿಂಗ್ರಿಗೌಡ ಅವರು ತಿಥಿಯಲ್ಲಿ ಒಳ್ಳೆ ನಟನೆ ಮಾಡಿ ಫೇಮಸ್ ಆದರು. ಆದರೆ ಸದ್ಯ ಅವರು ಬದುಕಿಲ್ಲ. ಆದರೆ ಅವರು ತಿಥಿ ನಂತರ  ಕೆಲ ಸಿನಿಮಾಗಳನ್ನು ಮಾಡಿದ್ದಾರೆ. ಅದೆಲ್ಲಾ ಓಕೆ... ಎಲೆಕ್ಷನ್' ಗೂ ಸೆಂಚುರಿ ಗೌಡನಿಗೂ ಏನು ಸಂಬಂಧ ಅಂತಾ   ಕೇಳ್ತೀರಾ..? ಹೌದು ಸಂಬಂಧ ವಿದೆ, ಸೆಂಚುರಿಗೌಡ ಅವರು ತಿಥಿ ನಂತರ 'ಒಂಭತ್ತನೇ ಅದ್ಭುತ' ಎನ್ನುವ ಸಿನಿಮಾ ಮಾಡಿದ್ರು. ಒಂಭತ್ತನೆ ಅದ್ಭುತ’ ಗಾಂಧಿನಗರದ ಗಮನ ಸೆಳೆದಿತ್ತು. ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿದೆ. ವಿಚಾರ ಏನಂದ್ರೆ ‘ಒಂಭತ್ತನೇ ಅದ್ಭುತ’ ಟೀಂ ವಿಶಿಷ್ಟವಾದ ಪ್ರಮೋಷನ್ ಮೂಲಕ ಎಲ್ಲರ ಗಮನ ಸೆಳೆದಿದೆ. ಥೇಟ್​ ಎಲೆಕ್ಷನ್​ ಶೈಲಿಯಲ್ಲೇ ಪ್ರಚಾರ ಆರಂಭಿಸಿದ್ದು, ಪಕ್ಷಗಳ ಭಿತ್ತಿಪತ್ರದಂತೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೋಸ್ಟರ್ ನೋಡಿದವರು ತಕ್ಷಣ ಕಣ್ಣಾಯಿಸದೇ ಇರಲಾರರು. ಇದೇನಿದು ಲೋಕ ಸಭೆ ಎಲೆಕ್ಷನ್ ನಲ್ಲಿ ಸೆಂಚುರಿ ಗೌಡ ಎಲ್ಲಿಂದ ಬಂದ್ರು ಅಂತಾ ಕನ್ಪೂಸ್ ಆಗ್ತಾರೆ.  ಆಸ್ಕರ್ ಚಿಹ್ನೆಯಿಂದ ಚುನಾವಣೆಗೆ ಸೆಂಚುರಿ ಗೌಡ ನಿಂತಿದ್ದು, ಆಸ್ಕರ್​ ಗುರುತಿಗೆ ಮತ ಮಂಡ್ಯಕ್ಕೆ ಹಿತ’ ಅಂತಾ ಬರೆಯಲಾಗಿದೆ. ಅಲ್ಲದೇ ಬಾಂಡ್​ ಸ್ಟೈಲಿನಲ್ಲಿ ಕ್ರಮ ಸಂಖ್ಯೆಯನ್ನು 007 ಅಂತ ಇಟ್ಟುಕೊಂಡಿದ್ದಾರೆ. ಒಟ್ಟಾರೆ ಲೋಕ ಸಭೆ ಚುನಾವಣೆಯಲ್ಲಿ ಸೆಂಚುರಿಗೌಡನ ಹೆಸರು ಕೇಳಿ ಬರುತ್ತಿದ್ದು, ಚುನಾವಣೆ ಟೈಮ್ ನಲ್ಲಿ ಸಿನಿಮಾ ಪ್ರಮೋಷನ್ ಮಾಡ್ತಿರುವ ಚಿತ್ರ ತಂಡ ಸಿನಿಮಾ ಸದ್ದಾಗಲೀ ಎಂಬ ಉದ್ದೇಶದಲ್ಲಿ ತೊಡಗಿದ್ದಾರೆ.

Image result for ombathane adbutha kannada cinema

Edited By

Kavya shree

Reported By

Kavya shree

Comments