'ವೀಕೆಂಡ್ ವಿತ್ ರಮೇಶ್' ನಲ್ಲಿ ಹೈ ಟಿ ಆರ್'ಪಿ ಪಡೆದಿದ್ದು 'ಅವರೊಬ್ಬರ' ಎಪಿಸೋಡ್ ಮಾತ್ರ : ಯಾರದ್ದು ಗೊತ್ತಾ..?

16 Apr 2019 3:01 PM | Entertainment
1482 Report

ಅಂದಹಾಗೇ  ಕಿರುತೆರೆಯ  ಮೋಸ್ಟ್ ಪಾಪ್ಯುಲರ್ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಯಾವ ಸೆಲೆಬ್ರಿಟಿ ಎಪಿಸೋಡ್ ಅತೀ ಹೆಚ್ಚು ಟಿ ಆರ್ ಪಿ ಪಡೆಯಿತು ಎಂದು ನಿಮಗೆ ಗೊತ್ತೇ....ಅಂದಹಾಗೇ ಈಗಾಗಲೇ ನಾಲ್ಕನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಶೋ ಶುರುವಾಗುತ್ತಿದೆ. ಮೂರು ಆವೃತ್ತಿಗಳನ್ನು ಕಂಪ್ಲೀಟ್ ಮಾಡಿರುವ ಶೋ ಸುಮಾರು 64 ಸಾಧಕರ ಪರಿಚಯವನ್ನು ಮಾಡಿಕೊಟ್ಟಿದೆ.

ಯಾವ ವಾಹಿನಿ ಕೂಡ ಶೋ ನಲ್ಲಿ ಬರುವ ಯಾವ ಎಪಿಸೋಡ್ ಹೈಯೆಸ್ಟ್ ಟಿ ಆರ್ ಪಿ ಎಂದು ಬಾಯಿ ಬಿಡುವುದಿಲ್ಲ. ಆದರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಗ್ರ್ಯಾಮ್ ಹೆಡ್ ಆಗಿರುವಂತಹ ರಾಘವೇಂದ್ರ ಹುಣಸೂರು ಅವರೇ ಒಂದು ವಿಚಾರದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅಧಿಕೃತವಾಗಿ ವೀಕೆಂಡ್ ವಿತ್ ರಮೇಶ್ ತಂಡದವರು ಈ ಮಾಹಿತಿಯನ್ನು ಬಿಟ್ಟು ಕೊಡದೇ ಇದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿಯೇ ಚರ್ಚೆ ನಡೀತು. ಕೊನೆಗೆ ಪ್ರೋಗ್ರಾಂ ಹೆಡ್ ಅವರೇ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಕಾಣಿಸಿಕೊಂಡವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಈ ಅದ್ಭುತವಾದ ಟಾಕ್ ಶೋನ ಮೊದಲ ಆವೃತ್ತಿಯಲ್ಲೇ ಬಹುತೇಕ ಸ್ಟಾರ್ ನಟರು ವೀಕೆಂಡ್ ಸಾಧಕರ  Image result for puneeth rajkumar weekend with ramesh

ಸೀಟಿನಲ್ಲಿ ಕೂತಿದ್ದರು. ರವಿಚಂದ್ರನ್, ಅರ್ಜುನ್ ಸರ್ಜಾ, ಯಶ್, ರಾಧಿಕಾ ಪಂಡಿತ್, ಶಿವರಾಜ್ ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಸೇರಿದಂತೆ ಇನ್ನು ಹಲವರ ಸಂಚಿಕೆ ಮೊದಲ ಆವೃತ್ತಿಯಲ್ಲಿ ಪ್ರಸಾರವಾಗಿತ್ತು. ಅದರಲ್ಲಿ ಡಿ ಬಾಸ್ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ ಪಡೆದಿದೆ ಎನ್ನುವ ವಿಚಾರವನ್ನು  ಬಾಯಿ ಬಿಟ್ಟಿದ್ದಾರೆ.

Image result for weekend with ramesh darshan show

ಸ್ವತಃ ವೀಕೆಂಡ್ ವಿತ್ ರಮೇಶ್ ನಿರ್ದೇಶಕ ರಾಘವೇಂದ್ರ ಹುಣುಸೂರ್ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಇದುವರೆಗೂ ದರ್ಶನ್ ಅವರ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ ತಂದುಕೊಟ್ಟಿದೆಯಂತೆ.ಅದೇ ಆವೃತ್ತಿಯಲ್ಲಿ ಘಟಾನುಘಟಿಗಳು ಭಾಗವಹಿಸಿದ್ದರು.

Image result for siddaramaiah weekend with ramesh ದರ್ಶನ್ ಅವರು ಭಾಗವಹಿಸಿದ್ದ ಆವೃತ್ತಿಯಲ್ಲೇ ಹಲವು ಸ್ಟಾರ್ ಗಳು ಭಾಗಿಯಾಗಿದ್ದರು. ಪ್ರೇಮ್ ದಂಪತಿಯಿಂದ ಆರಂಭಿಸಿ, ಅಂಬರೀಶ್, ವಿಜಯ್ ಪ್ರಕಾಶ್, ದುನಿಯಾ ವಿಜಯ್, ದರ್ಶನ್, ಸುದೀಪ್, ರವಿಶಂಕರ್, ಸೃಜನ್ ಲೋಕೇಶ್, ಅನಂತ್ ನಾಗ್, ಸಾಧುಕೋಕಿಲಾ ಸೇರಿದಂತೆ ಹಲವರು ಇದ್ದರು.ಕಳೆದ ಆವೃತ್ತಿಯಲ್ಲಿ ಪ್ರಕಾಶ್ ರಾಜ್, ಜಗ್ಗೇಶ್, ಅರ್ಜುನ್ ಜನ್ಯ, ಭಾರತಿ, ಜಯಂತ್ ಕಾಯ್ಕಿಣಿ, ಹರಿಕೃಷ್ಣ, ಕಾಶಿನಾಥ್, ಎಚ್ ಡಿ ದೇವೇಗೌಡ, ಸಿದ್ದರಾಮಯ್ಯ, ಗಣೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Edited By

Kavya shree

Reported By

Kavya shree

Comments