ದೀಪಿಕಾ ಪಡುಕೋಣೆ ನಿಜಕ್ಕೂ ಗರ್ಭಿಣಿನಾ…? : ಸತ್ಯ ಏನೆಂದು ಬಾಯಿ ಬಿಟ್ಟ ರಣವೀರ್ ಮಡದಿ..?!!!

16 Apr 2019 1:57 PM | Entertainment
426 Report

ಅಂದಹಾಗೇ ದೀಪಿಕಾ ಅಮ್ಮ ಆಗ್ತಿದ್ದಾರಂತೆ…? ಅಯ್ಯೋ ಇದು ಗಾಸಿಪ್ಪಾ.....ಹೀಗಂತಾ ಎಷ್ಟೇ ಹೇಳಿದ್ರು ಖುದ್ದು ದೀಪಿಕಾನೇ ಬಾಯಿ ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್'ರೊಂದಿಗೆ ಕೆಲ ತಿಂಗಳುಗಳ ಹಿಂದಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ದಾಂಪತ್ಯ ಸುಖವಾಗಿದ್ದು, ಒಬ್ಬರನೊಬ್ಬರು ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ಸದಾ ಸುದ್ದಿಯಲ್ಲಿರುವ ಜೋಡಿಯ ಜೊತೆ ಮತ್ತೊಬ್ಬ ಅತಿಥಿ ಸೇರಿಕೊಳ್ಳಲಿದ್ದಾರೆಂಬ ಮಾತು ಕೂಡ ಕೇಳಿ ಬಂತು.

ಇತ್ತೀಚಿಗೆ ದೀಪಿಕಾರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.  ಅದರಲ್ಲಿ ಡಿಪ್ಪಿಯ ಬೇಬಿ ಬಂಪ್ ಥರಾ ಫೋಟೋಗಳನ್ನ ನೋಡಿ ಡಿಪ್ಪಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಅಮ್ಮ ಆಗ್ತಿದ್ದಾರೆಂಬ ಕ್ಯಾಪ್ಶನ್ ಬರೆದು ಶೇರ್ ಮಾಡ ತೊಡಗಿದ್ರು. ಒಟ್ಟಿನಲ್ಲಿ ಆ ಫೋಟೋಗಳು ಎಷ್ಟರ ಮಟ್ಟಿಗೆ ಶೇರ್ ಆಗಿದ್ದವು ಎಂದರೆ ಡಿಪ್ಪಿನೇ ನೇರವಾಗಿ ಪ್ರತಿಕ್ರಿಯೆ ಮಾಡುವಂತೆ ಮಾಡಿದ್ದವು. ದೀಪಿಕಾ ತಮ್ಮ ಮದುವೆ,ಲವ್ ವಿಚಾರವನ್ನು ಎಲ್ಲವನ್ನು ಫ್ಯಾನ್ಸ್'ರೊಟ್ಟಿಗೆ ಹಂಚಿಕೊಳ್ಳುತ್ತಿದ್ದರು, ತಾನು ತಾಯಿಯಾಗ್ತಿರುವ ವಿಚಾರವನ್ನೇಕೆ ನಮ್ಮೊಂದಿಗೆ ಹೇಳಿಲ್ಲ ಎಂದು ಫ್ಯಾನ್ಸ್ ಬೇಸರಿಸಿಕೊಂಡಿದ್ರು. ಆದರೆ ಕೊನೆಗೂ ಡಿಪ್ಪಿ ತನ್ನ ಪೋಟೋ ಬಗ್ಗೆ ಮಾತನಾಡಿದ್ದಾರೆ. ಅದು ಫೋಟೋ ಗಾಸಿಪ್ ಆಗಿ ಲೀಕ್ ಆದ ನಂತರ ಕಾರ್ಯಕ್ರಮವೊಂದರಲ್ಲಿ  ಸ್ವಲ್ಪ ರಾಂಗ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ . ಆಕೆ ಏನ್ ಮಾತನಡಿದ್ದಾರೆ ಎಂದು ಕೇಳ್ತೀರಾ..?

Image result for deepika padukone

ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ದೀಪಿಕಾಳನ್ನು ನಿರೂಪಕಿಯೊಬ್ಬಳು, ನಿಮ್ಮ ತಾಯ್ತನದ ನಿರ್ಧಾರದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಅದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದಾಗ ಯಾವಾಗ ಆಗಬೇಕೋ ಆಗ ಆಗುತ್ತದೆ. ಎಲ್ಲದಕ್ಕೂ ಸಮಯವಿದೆ. ನನ್ನ ಪ್ರಕಾರ ಒಬ್ಬ ಮಹಿಳೆಯನ್ನು ಅಥವಾ ಕಪಲ್'ಗಳನ್ನು ಮಕ್ಕಳು ಮಾಡಿಕೊಳ್ಳುವುದಕ್ಕೆ ಯಾವತ್ತೂ ಒತ್ತಾಯ ಮಾಡಬಾರದು’ ಎಂದು ದೀಪಿಕಾ ಹೇಳಿದ್ದಾರೆ. ಅಷ್ಟೇ ಅಲ್ಲಾ, ಸುಖಾ ಸುಮ್ಮನೇ ಫೋಟೋ ನೋಡಿದ ಮೇಲೆ ನಾನು ಗರ್ಭಿಣಿ ಎಂದು ಯಾಕೆ ಅನ್ಕೊತ್ತೀರೋ ಗೊತ್ತಿಲ್ಲ. ನಾನು ರೆಸ್ಟ್ ಮಾಡುತ್ತಿದ್ದೇನೆ, ಸ್ವಲ್ಪ ದಪ್ಪಗಾಗಿದ್ದೇನೆ, ಅದಕ್ಕಾಗಿಯೇ ನನ್ನ ಹೊಟ್ಟೆ ಉಬ್ಬಿದಂತೆ ಕಂಡು,  ನಾನು ಗರ್ಭಿಣಿ ಹಾಗೇ ಕಾಣುತ್ತಿರಬಹುದು. ಅಷ್ಟಕ್ಕೂ  ನಾವು ಈಗ ಫ್ರೀ ಎಂದು ತಾವಿಬ್ಬರು  ಇನ್ನು ಮಗುವಿನ ನಿರೀಕ್ಷೆಯಲ್ಲಿ ಇಲ್ಲವೆಂಬುದನ್ನು ಹೇಳಿದ್ದಾರೆ.

Edited By

Kavya shree

Reported By

Kavya shree

Comments