'ನಿಮ್ಮ ಮಗನೇ ನನ್ನ ಪ್ರಪಂಚ, ನನಗೆ ಕೊಟ್ಟಿರೋದಿಕ್ಕೆ ಕೋಟಿ ಧನ್ಯವಾದಗಳೆಂದ' ನಟಿ ರಾಧಿಕಾ ಪಂಡಿತ್'....

15 Apr 2019 1:42 PM | Entertainment
869 Report

ನಿನ್ನೆ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಯಶ್ ಸುಮಲತಾ ಪರ ಪ್ರಚಾರ ಮಾಡುತ್ತಾಮಂಡ್ಯ ಸುತ್ತುತ್ತಿದ್ದಾರೆ. ಯಶ್ ತಂದೆ-ತಾಯಿ ಅಷ್ಟಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಆದರೆ ನಿನ್ನೆ ಮಾತ್ರ  ಯಶ್ ತಂದೆ-ತಾಯಿ ಭಾರೀ ಖುಷಿಯಲ್ಲಿದ್ದರಂತೆ. ಇದೇ ಖುಷಿಯಲ್ಲಿ ಅತ್ತೆ-ಮಾವನಿಗೆ ಸೊಸೆ ರಾಧಿಕಾ ಪಂಡಿತ್ ಹೇಳಿದ ಮಾತು ವೈರಲ್ ಆಗಿದೆ.

ಸ್ಯಾಂಡಲ್ ವುಡ್ನಲ್ಲಿ ಕ್ಯೂಟೆಸ್ಟ್ ಜೋಡಿ ಯಶ್ ಅಂಡ್ ರಾಧಿಕಾ ಮಗಳಿನ ಆಗಮನದಿಂದಾಗಿ ಭಾರೀ ಸಂತಸದಲ್ಲಿದ್ದಾರೆ.ಈ ಸಡಗರದ ನಡುವೆಯೇ  ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ, ಮದುವೆ ವಾರ್ಷಿಕೋತ್ಸವದ ಸಂಭ್ರಮವೂ ಸೇರಿಕೊಂಡಿದೆ. ಹೀಗಾಗಿ ಸೊಸೆ ರಾಧಿಕಾ ಪಂಡಿತ್ ಪ್ರೀತಿಯ ಅತ್ತೆ-ಮಾವನಿಗೆ ಶುಭಕೋರಿದ್ದಾರೆ.ನಟಿ ರಾಧಿಕಾ ಪಂಡಿತ್ ಅವರು ತಮ್ಮ ಅತ್ತೆ-ಮಾವನ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷವಾಗಿ ವಿಶ್ ಮಾಡಿದ್ದಾರೆ. ಶನಿವಾರ ರಾತ್ರಿಯೇ ಯಶ್ ಮತ್ತು ರಾಧಿಕಾ ಕೇಕ್ ತಂದು ಕಟ್ ಮಾಡಿಸಿ ಆಚರಿಸಿದ್ದಾರೆ. ಯಶ್ ಅವರ ಅಪ್ಪ ತಮ್ಮ ಪತ್ನಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ತೆಗೆದು ಅದನ್ನು ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲಾ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ. ನನ್ನ ಜೀವನದಲ್ಲಿ ನಿಮ್ಮಿಬ್ಬರನ್ನು ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನೀವು ನನಗೆ ಕೊಟ್ಟಿರುವ ಉತ್ತಮ  ಉಡುಗೊರೆಯಾಗಿ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಸಾಲದು ನಿಮ್ಮ ನಿಮ್ಮ ಮಗನೇ ನನಗೆ ಪ್ರಪಂಚ” ಎಂದು ಬರೆದು ವಿಶ್ ಮಾಡಿದ್ದಾರೆ.ರಾಧಿಕಾ ಅವರು ವಿಶ್ ಮಾಡಿ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಯಶ್ ಪೋಷಕರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

Edited By

Kavya shree

Reported By

Kavya shree

Comments