‘’ಪ್ಲೀಸ್ ನಿಲ್ಸಿ, ಇಲ್ಲಾ ಅಂದ್ರೆ ನನ್ನ ಮಗ ಕುರುಡನಾಗ್ತಾನೆ’’…!!!

15 Apr 2019 10:33 AM | Entertainment
270 Report

ಇತ್ತೀಚಿಗಷ್ಟೇ ತಮ್ಮ ಮೊದಲ ಪತ್ನಿಯ ಮಗಳ ಕಾಂಟ್ರೋವರ್ಸಿಯ್ಲಲಿ ಸುದ್ದಿಯಾದ ಸೈಫ್ ಅಲಿಖಾನ್ ಮತ್ತೆ ಸಿಟ್ಟಾಗಿದ್ದಾರೆ. ಎರಡನೇ ಪತ್ನಿಗ ಮಗ ತೈಮೂರ್ ವಿಚಾರಕ್ಕೆ. ಅಂದಹಾಗೇ ನನ್ನ ಮಗ ಕುರುಡನಾಗ್ತಾನೆ, ಪ್ಲೀಸ್ ಇದನ್ನು ಇಲ್ಲಿಗೆ ನಿಲ್ಲಿಸಿ ಸಾಕು ಎಂದು ಖ್ಯಾತ ನಟ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಸೆಲೆಬ್ರಿಟಿಗಳಷ್ಟೇ ಅವರ ಮಕ್ಕಳು ಮತ್ತು ಫ್ಯಾಮಿಲಿ ಸುದ್ದಿಯಾಗುತ್ತಾರೆ. ಹೇಳಿ ಕೇಳಿ ಸೈಫ್ ಮತ್ತು ಕರೀನಾ ಇಬ್ಬರು ಸ್ಟಾರ್ ಜೋಡಿ ಅಪ್ಪ ಅಮ್ಮನಷ್ಟೇ ಖ್ಯಾತಿಗಳಿಸಿ ಅತೀ ಚಿಕ್ಕ ವಯಸ್ಸಿಗೆಯೇ ಅಪಾರ ಅಭಿಮಾನಿಗಳ ಬಳವನ್ನು ಕಟ್ಟಿಕೊಂಡಿರುವ ತೈಮೂರ್ ಫೋಟೋ ತೆಗೆಯಲು ಮುಂಬೈ ನಿಲ್ದಾಣದಲ್ಲಿ ಮಾಧ್ಯಮದವರು,  ಕ್ಯಾಮರಾಮ್ಯಾನ್ ಗಳು ಮುಗಿ ಬೀಳುತ್ತಿದ್ದರು. ಒಬ್ಬರಂತೇ ಒಬ್ಬರು ಪಟ ಪಟ ಅಂತಾ  ತೈಮೂರ್ ಫೋಟೋ ಕ್ಲಿಕ್ಕಿಸಲು ಮುಂದಾದಾಗ ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗ್ತಾನೆ ಎಂದು ಗರಂ ಆಗಿದ್ದಾರೆ ನಟ ಸೈಫ್ ಅಲಿಖಾನ್ .

ಮುಂಬೈ ನಲ್ಲಿರುವ ತಮ್ಮ ಹಿರಿಯರೊಬ್ಬರ ಮನೆಗೆ ಆಗಮಿಸುವ ವೇಳೆ ಸೈಫ್ ತಮ್ಮ ಮಗ ತೈಮೂರ್ ನನ್ನು ಹೆಗಲ ಮೇಲೆ ಒತ್ತುಕೊಂಡು ನಡೆದು ಬರುತ್ತಿದ್ದರು. ಈ ವೇಳೆ ಹೆಗಲ  ಮೇಲೆ ಕೂತಿದ್ದ ತೈಮೂರ್ ಕ್ಯಾಮೆರಾ ಮ್ಯಾನ್ ಗಳನ್ನು ನೋಡಿ ಕೈ ಬೀಸಿದ್ದಾನೆ.ಆತನ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಸೈಫ್ ಕೋಪದಿಂದ ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗುತ್ತಾನೆ ಎಂದು ಹೇಳಿದರು.ಸೈಫ್ ಹಾಗೂ ತೈಮೂರ್ ಜೊತೆ ಕರೀನಾ ಕಪೂರ್ ಕೂಡ ಬರುತ್ತಿದ್ದರು. ಆಗ ಛಾಯಾಗ್ರಾಹಕರು ಫೋಟೋಗೆ ಪೋಸ್ ನೀಡಲು ಕೇಳಿದರು. ಈ ವೇಳೆ ಸೈಫ್ “ನಿಮಗೆ ಫೋಟೋ ಬೇಕೆಂದರೆ ಕ್ಲಿಕ್ಕಿಸಿಕೊಳ್ಳಿ, ಅದನ್ನು ಬಿಟ್ಟು ಪೋಸ್ ಎಂದು ಹೇಳಬೇಡಿ. ಪೋಸ್ ಕೊಡುವುದು ಸ್ವಲ್ಪ ವಿಚಿತ್ರ ಎಂದು ಅನಿಸುತ್ತದೆ” ಎಂದು ಪ್ರತಿಕ್ರಿಯಿಸಿದರು.

Edited By

Kavya shree

Reported By

Kavya shree

Comments