ರಹಸ್ಯವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಸ್ಟಾರ್ ನಟಿ : ಯಾರ ಪರ ಗೊತ್ತಾ..?!!!

12 Apr 2019 3:01 PM | Entertainment
2542 Report

ಲೋಕಸಭಾ ಚುನಾವಣೆಯ  ಹತ್ತಿರ ಬರುತ್ತಿದ್ದಂತೆ ಸ್ಟಾರ್ ಕ್ಯಾಂಪೇನಿಂಗ್ ಜೋರಾಗುತ್ತಿದೆ. ಅಂದಹಾಗೇ ಈ ಬಾರಿ ಸ್ಟಾರ್ ಹಾವಳಿ ಜೋರಾಗುತ್ತಿದೆ.  ರಾಜ್ಯ ರಾಜಕೀಯದಲ್ಲಿ ಬಾಕ್ಸ್ ಆಫೀಸ್ ಸುಲ್ತಾನರದ್ದೆ ಹವಾ. ಇನ್ನು ಖ್ಯಾತ ನಟಿಯೊಬ್ಬರು ಸದ್ದಿಲ್ಲದೇ ಚುನಾವಣಾ ಪ್ರಚಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮದುವೆ, ಗಂಡ ಅಂತಾ ಬ್ಯುಸಿಯಾಗುತ್ತಿದ್ದ ಕನ್ನಡ ಹುಡುಗಿ, ಬಾಲಿವುಡ್ ಸುಂದರಿ ತಮ್ಮ ನೆಚ್ಚಿನ ಪಕ್ಷದ ಪರ ವೊಟ್ ಮಾಡುವಂತೆ ಕೇಳುತ್ತಿದ್ದ ಫೋಟೋವೊಂದು ಸೀಕ್ರೇಟ್ ಆಗಿಯೇ ರಿವೀಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಮತ್ತು ಆಕೆಯ ಪತಿ ರಾಜಕೀಯ ಪಕ್ಷವೊಂದಕ್ಕೆ ಸಪೋರ್ಟ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಆಕೆ ಬೇರೆ ಯಾರು ಅಲ್ಲಾ, ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತು ಆಕೆಯ ಪತಿ ರಣವೀರ್ ಸಿಂಗ್. ಇಬ್ಬರು ಕೇಸರಿ ಬಣ್ಣದ ಶಾಲು ಹಾಕಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಲಾಗಿದೆ. ಶಾಲ್ ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂದು ಸಹ ಬರೆಯಲಾಗಿದೆ. ಫೋಟೋ ಕೆಳಗಡೆ ‘ಕಮಲದ ಬಟನ್ ಒತ್ತಿ, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಲಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಯಾಗುತ್ತಿದೆ. ಕನ್ನಡತಿ ಬಾಲಿವುಡ್ ನ ನಟಿ, ಬಿಜೆಪಿಗೆ …? ಇಲ್ಲೊಂದು ಅನುಮಾನ ವ್ಯಕ್ತವಾಗುತ್ತಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದೂವರೆಗೂ ಯಾವ ರಾಜಕೀಯ ಪಕ್ಷದ ಪರವಾಗೋ ಅಥವಾ ರಾಜಕೀಯದ ಬಗ್ಗೆಯೋ ಮಾತನಾಡದ ಡಿಪ್ಪಿ ಇದ್ದಕ್ಕಿದ್ದ ಹಾಗೇ ಬಿಜೆಪಿ ಸೇರಿದ್ದಾರೆಂಬುದು ಅನುಮಾನವೇ ಸರಿ. ಆದರೆ ಈ ಪೋಟೋ ನೋಡಿದ್ರೆ ಖಂಡಿತಾ ಏನೋ ನಡೆದಿದೆ ಎಂಬ ಗುಮಾನಿ ಹುಟ್ಟುತ್ತದೆ ಎಂದು ಕೆಲವರು ಕಮೆಂಟ್ ನಲ್ಲಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಈ ಫೋಟೋ ಅಪ್ಲೋಡ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ದೀಪ್‍-ವೀರ್ ಮದುವೆ ಬಳಿಕ ಅಂದರೆ ನವೆಂಬರ್ 2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂಬ ಸಾಲು ಬರೆದು ಕೊಂಚ ಎಡಿಟ್ ಮಾಡಿ ಹರಿಬಿಡಲಾಗಿದೆ. ಆದರೆ ಈ ಹಿಂದೆ ಸಮಾರಂಭದಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ, ರಾಜಕೀಯದಿಂದ ದೂರವಿರುವುದಾಗಿ ಹೇಳಿಕೊಂಡಿದ್ದರು. ಒಂದು ವೇಳೆ ಮಂತ್ರಿಯಾದರೇ ಸ್ವಚ್ಛತೆಯ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದರು. ಆದರೆ ಈ ಪೋಟೋ ನೊಡಿದ ಕೆಲವರು ಮೋದಿಯನ್ನು ಪರೋಕ್ಷವಾಗಿ ದೀಪಿಕಾ ಬೆಂಬಲಿಸ್ತಾ  ಇದ್ದಾರೆ. ರಹಸ್ಯವಾಗಿ ಕ್ಯಾಂಪೇನ್ ಮಾಡ್ತಿರುವ ಫೋಟೋ ಇರಬಹುದು ಎಂದು ಕೂಡ ಕಮೆಂಟ್ ನಲ್ಲಿ ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments