ಬಿಜೆಪಿ ಶಾಸಕನಿಗೆ ಟಾಂಗ್ ಕೊಟ್ಟ ಶಿವರಾಜ್'ಕುಮಾರ್..!!

12 Apr 2019 1:56 PM | Entertainment
992 Report

ಸ್ಯಾಂಡಲ್ ವುಡ್ ಗೂ ರಾಜಕೀಯಕ್ಕೂ ಕೂಡ ಒಂಥರಾ ಅವಿನಾಭಾವ ಸಂಬಂಧದ ರೀತಿ ಆಗಿ ಬಿಟ್ಟಿದೆ.. ಸ್ಯಾಂಡಲ್ ವುಡ್ ಸ್ಟಾರ್ ನಾಯಕರು ರಾಜಕೀಯದತ್ತ ಒಲವು ತೋರಿಸುತ್ತಿದ್ದಾರೆ.. ಪ್ರಚಾರಕ್ಕೋ ಅಥವಾ ಅಖಾಡಕ್ಕೋ ಒಟ್ಟಾರೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ ಒಂದಿಷ್ಟು ಸ್ಟಾರ್ ನಾಯಕರು.. ಈಗಾಗಲೇ ಆ ಸ್ಟಾರ್ ನಾಯಕರಲ್ಲೆ ಒಬ್ಬರಿಗೊಬ್ಬರು ಟಾಂಗ್ ಕೊಡಲು ಸಿದ್ದವಾಗಿಬಿಟ್ಟಿದ್ದಾರೆ. ಇದೀಗ ಅದೇ ಸಾಲಿಗೆ ಶಿವಣ್ಣ ಕೂಡ ಸೇರಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ತಮ್ಮ ಅಭಿನಯದ 'ಕವಚ' ಚಿತ್ರದ ಪ್ರಚಾರ ಹೆಸರಿನಲ್ಲಿ ಕವಚ ಹಾಕಿಕೊಂಡು ರಾಜಕೀಯ ಮಾಡಲು ಶಿವಮೊಗ್ಗಕ್ಕೆ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಕಿಡಿಕಾರಿದ್ದರು. ಶಿವರಾಜ್‌ಕುಮಾರ್‌ಗೆ ಒಂದು ವೇಳೆ ರಾಜಕೀಯ ಮಾಡುವ ಆಸೆ ಇದ್ದರೆ ಧರಿಸಿರುವ ಕವಚ ತೆಗೆದಿಟ್ಟು ರಾಜಕೀಯ ಮಾಡಲಿ. ಅದು ಬಿಟ್ಟು ಸಿನಿಮಾವನ್ನು ಮುಂದಿಟ್ಟುಕೊಂಡು ಅದರ ಪ್ರಚಾರ ಮಾಡುತ್ತೇನೆಂದು ರಾಜಕೀಯ ಪ್ರಚಾರ ಮಾಡುವುದು ಬೇಡ' ಎಂದು ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಮಾರ್ ಅದು ಅವರ ಅಭಿಪ್ರಾಯ ಅಷ್ಟೇ. ನಾನು ಯಾರ ಮಾತಿಗೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಅಭಿಮಾನಿಗಳೇ ಕವಚ. ಕರ್ನಾಟಕವೇ ನನಗೆ ಕವಚ. ಕನ್ನಡ ಇಂಡಸ್ಟ್ರಿ ನನಗೆ ಕವಚವಾಗಿದೆ ಅಂತ ಹೇಳುವ ಮೂಲಕ ನಾನು ಕವಚ ಸಿನಿಮಾದ ಪ್ರಚಾರಕ್ಕೆ ಹೋಗಿದ್ದು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ರಾಜಕೀಯದಲ್ಲಿ ಒಬ್ಬರಿಗೆ ಒಬ್ಬರು ಟಾಂಗ್ ಕೊಡುವುದೆ ಆಗಿ ಬಿಟ್ಟಿದೆ. ಲೋಕಸಮರ ಬರುವುದರೊಳಗೆ ಯಾರು ಯಾರು ದ್ವೇಷ ಕಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ....

Edited By

Kavya shree

Reported By

Manjula M

Comments