‘ನಿಖಿಲ್ ಎಲ್ಲಿದ್ದೀಯಪ್ಪಾ’ ಚಿತ್ರದಲ್ಲಿ ನಿಖಿಲ್ ಹೀರೋ ಆದ್ರೆ ನಾನು ನಟಿಸೋಕೆ ರೆಡಿ ಎಂದ ಖ್ಯಾತ ನಟಿ…?!!!

12 Apr 2019 12:49 PM | Entertainment
3650 Report

ಅಂದಹಾಗೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ ಸ್ವಾಮಿ ಈ ಬಾರಿ ಹೆಚ್ಚಾಗಿ ಟ್ರೋಲ್ ಗೆ ಒಳಗಾಗಿದ್ದಾರೆ. ನಿಖಿಲ್ ಸಿನಿಮಾ ಜಾಗ್ವಾರ್  ಚಿತ್ರದ ಸಮಾರಂದಲ್ಲಿ ಕುಮಾರಸ್ವಾಮಿ ಮಗನಿಗೆ ವೇದಿಕೆ ಮೇಲೆ ಕರೆದ ಡೈಲಾಗ್ ಈ ಬಾರಿ ಚುನಾವಣಾ ಪ್ರಚಾರದ ವೇಳೆ ಭಾರೀ  ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಇದೀಗ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾ ಮಾಡೋಕೆ ಕನ್ನದ ಚಿತ್ರರಂಗದ ನಿರ್ದೇಶಕರು ಮುಗಿ ಬೀಳುತ್ತಿದ್ದಾರೆ . ತಾ ಮುಂದು ನಾ ಮುಂದು ಸಿನಿಮಾ ಟೈಟಲ್ ಗಾಗಿ ಕ್ಯೂ ನಿಂತಿದ್ದಾರೆ. ಇದೀಗ ಈಟೈಟಲ್ ನಲ್ಲಿ ಸಿನಿಮಾವಾದ್ರೆ ಖಂಡಿತಾ ನಾನು ಅದರಲ್ಲಿ ನಟಿಸುತ್ತೇನೆ ಎಂದಿದ್ದಾರೆ ಖ್ಯಾತ ನಟಿ ತಾರಾ.

ಇಂದು ಬೆಳಗಾವಿಯಲ್ಲಿ ಬಿಜೆಪಿ ಮಾಜಿ ಎಂಎಲ್ಸಿ ತಾರಾ ಮಾಧ್ಯಮಗಳ ಜೊತೆ ಮಾತನಾಡುವಾಗ ಜೆಡಿಎಸ್ ನಾಯಕರ ವಿರುದ್ಧ ಟೀಕಾರೋಪ ಮಾಡಿದ್ರು. ಅಷ್ಟೇ ಅಲ್ಲಾ ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾದಲ್ಲಿ ನಟಿಸೋಕೆ ನಾನ್ ರೆಡಿ ಎಂದು ಹೇಳಿದ್ದಾರೆ.ನನಗೆ ಪಾತ್ರ ಚೆನ್ನಾಗಿ ಅನ್ಸದ್ರೆ ಕಥಾಹಂದರ ಇಷ್ಟ ಆದ್ರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ. ನಿಖಿಲ್ ಎಲ್ಲಿದೀಯಪ್ಪ ಎಂಬ ಟೈಟಲ್ ಇದ್ರೂ ತೊಂದರೆ ಇಲ್ಲ.ಚಿತ್ರಕ್ಕೆ ನಿಖಿಲ್‌ ನಾಯಕ ನಟನಾದರು ನಟನೆ ಮಾಡಲು ನಾನು ಸಿದ್ದ.  ಮೋದಿ ಮತ್ತೆ ಪ್ರಧಾನಿಯಾಗ ಬೇಕು. ಮೋದಿ ಅಲೆ ಇನ್ನು ದೊಡ್ಡದಾಗುತ್ತಾ ಹೋಗುತ್ತದೆ ಎಂದಿದ್ದಾರೆ. ಅವರ ಗೆಲುವು ಖಚಿತ ಎಂದಿದ್ದಾರೆ.ಸುಮಲತಾ ವಿರುದ್ದ ಜೆಡಿಎಸ್ ನಾಯಕರು ಮಾಡಿದ ಆರೋಪಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಎಂದಿದ್ದಕ್ಕೆ ತಾರ, ಅದೆಲ್ಲಾ ಹಳೆಯ ವಿಚಾರ ಬಿಡಿ ಎಂದು ಸುಮ್ಮನಾಗಿದ್ದಾರೆ.

Image result for tara kannada

Edited By

Kavya shree

Reported By

Kavya shree

Comments