ಕ್ಯಾಂಪೇನ್ ವೇಳೆ ದರ್ಶನ್ ಏನ್ ಮಾಡಿದ್ರು ಗೊತ್ತಾ..? ವಿಡಿಯೋ ವೈರಲ್ ..!!!

12 Apr 2019 10:49 AM | Entertainment
237 Report

ದರ್ಶನ್ ಕ್ಯಾಂಪೇನ್ ಮಾಡುವ ವೇಳೆ ಒಂದಿಲ್ಲೊಂದು ವಿಚಾರಕ್ಕೆ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಮಂಡ್ಯದಲ್ಲಿ ಕ್ಯಾಂಪೇನ್ ಮಾಡುವ ವೇಳೆ  ಮಹಿಳಾ ಅಭಿಮಾನಿಯೊಬ್ಬಳು, ಸರ್ ಡೈಲಾಗ್ ಹೇಳಿ ಎಂದಿದ್ದಕ್ಕೆ ಸುಮಲತಾ ಅಮ್ಮನನ್ನು ಗೆಲ್ಸಿದ್ರೆ ಡೈಲಾಗ್ ಏನು ಡ್ಯುಯೆಟ್  ಹಾಡ್ತೀನಿ ನಿಮ್ಮ ಜೊತೆ ಎಂದರಂತೆ. ಇನ್ನೊಬ್ಬ ಅಭಿಮಾನಿ ಪಟ್ಟು ಬಿಡದೇ ಯಜಮಾನ ಡೈಲಾಗ್ ಬೇಕೆ ಬೇಕು ಎಂದಾಗ ಕ್ಯಾಟ್ ಬರಿ ಡೈಲಾಗ್ ಹೇಳಿ ರಂಜಿಸಿದ್ರಂತೆ. ಇದಷ್ಟೇ ಅಲ್ಲಾ, ರೋಡ್ ಶೋ ವೇಳೆ ಆಸ್ಪತ್ರೆ ಸಿಕ್ಕಿದ್ರೆ ಪಟಾಕಿ ಹಚ್ಚ ಬೇಡಿ, ಗಲಾಟೆ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಂರೆ.

ಪ್ರಾಣಿ ಪ್ರೀತಿಯನ್ನು ಹೋದ ಕಡೆಯೆಲ್ಲಾ ಮನವರಿಕೆ ಮಾಡಿಕೊಡುತ್ತಿದ್ದರಂತೆ. ಮಂಡ್ಯದ ಕೆ ಆರ್ ಪೇಟೆಯ  ಸೋಮನಹಳ್ಳಿಯಲ್ಲಿ ಕ್ಯಾಂಪೇನ್ ಮಾಡುವ ವೇಳೆ ದರ್ಶನ್  ಆ ಊರಿನ ರೈತರೊಬ್ಬರ ಹಸುವಿನಿಂದ ಹಾಲು ಕರೆದಿದ್ದಾರೆ. ಸದ್ಯ ಹಾಲು ಕರೆದಿರುವ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದೀಗ  ಸುಮಲತಾ ಕೂಡ ದರ್ಶನ್ ರನ್ನು  ಶ್ಲಾಘಿಸಿದ್ದಾರೆ.ಈ ಸುದ್ದಿ ಹರಡುತ್ತಿದ್ದಂತೇ  ತಮ್ಮ ಫೇಸ್ ಬುಕ್ ನಲ್ಲಿ ದರ್ಶನ್ ಹಸುವಿನಿಂದ ಹಾಲು ಕರೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಮಗನೇ ದರ್ಶನ್ ನನಗೆ ಈ ಕಾರಣಕ್ಕೆ ಇಷ್ಟವಾಗುತ್ತೀಯಾ ಎಂದು ಬರೆದುಕೊಂಡಿದ್ದಾರೆ. ದರ್ಶನ್ ಕೆಲಸ ಮೆಚ್ಚಿ ಕೊಂಡಿದ್ದಾರೆ.  ಇನ್ನು ಈ ಕುರಿತಾಗಿ ಡಿ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಮಾಡಿದ ಕೆಲಸವನ್ನು ಮೆಚ್ಚಿ ಕೊಂಡಾಡಿದ್ದಾರೆ.

Edited By

Kavya shree

Reported By

Kavya shree

Comments