'ಖ್ಯಾತ ನಟಿಯನ್ನೇ ಚಿತ್ರರಂಗದಿಂದಲೇ ಬ್ಯಾನ್ ಮಾಡುವಂತೆ ಅಭಿಮಾನಿಗಳ ಆಗ್ರಹ' : ಮೋದಿಗೂ ಆಕೆಗೂ ಏನು ಸಂಬಂಧ..!!!

11 Apr 2019 5:14 PM | Entertainment
2032 Report

ಅಂದಹಾಗೇ ತಾವು ಆರಾಧಿಸುತ್ತಿದ್ದ ಖ್ಯಾತ ನಟಿಯನ್ನೇ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ ತಮಿಳರು. ಕಾರಣ, ಮೋದಿ ಅವರ ಹೆಸರು ಹೇಳಿದ್ದಕ್ಕೆ. ನಟಿಯ ಬಾಯಿಂದ ಆ ಮಾತು ಕೇಳಿ ಸಿಡಿದೆದ್ದ ಜನ ಆಕೆ ನಮ್ಮೂರಿಗೆ ಬರುವುದು ಬೇಡವೆಂದರಂತೆ. ಆ ಖ್ಯಾತ ನಟಿ ಎಂದರೆ ಪ್ರಾಣ ಬಿಡುತ್ತಿದ್ದ ಅಭಿಮಾನಿಗಳು, ಅವರ ಸಿನಿಮಾಗಳನ್ನು ಹುಚ್ಚೆದ್ದು ನೋಡುತ್ತಿದ್ದವರು ಇದೀಗ ಆಕೆಯನ್ನು ಬ್ಯಾನ್ ಮಾಡಿ ಎಂದು ಆಗ್ರಹ ಪಡಿಸುತ್ತಿದ್ದಾರೆ. ತನ್ನದೇ ಆ್ಯಕ್ಟಿಂಗ್ ಮೂಲಕ ಕ್ಯೂಟ್ ಚೆಲುವೆ ತಮಿಳು ಮತ್ತು ತೆಲುಗು ಅಭಿಮಾನಿಗಳ ಹೃದಯ ಕದ್ದ ಚೆಲುವೆ. ಆದರೆ ಇದೀಗ ಮೋದಿ ಫೇವರ್ ಆಗಿ ಮಾತನಾಡಿದ್ದಕ್ಕೆ ತಮಿಳರ ವಿರೋಧ ಕಟ್ಟಿಕೊಂಡಿದ್ದಾರೆ ಈ ಮುಂಬೈ ಬೆಡಗಿ.

ಯಾರು ಅಂತಾ ಕೇಳ್ತೀರಾ, ರಾಮ್ ಚರಣ್ ಜೊತೆ ಡ್ಯುಯೆಟ್ ಮಾಡಿಕೊಂಡು ಸೂಪರ್ ಹಿಟ್ ಸಿನಿಮಾ ಕೊಟ್ಟ ನಟಿ, ಪ್ರಭಾಸ್ ಡಾರ್ಲಿಂಗ್ ಕಾಜಲ್ ಅಗರ್ವಾಲ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದವರು ಇಗೀಗ ಆಕೆಯ ಮೇಲೆ ಆಕ್ರೋಶಿತರಾಗಿದ್ದಾರೆ. ತಮಿಳುನಾಡಿನ ಮಂದಿ ಇನ್ನುನಮ್ಮೂರಿಗೆ ಬರೋವಾಗಿಲ್ಲ ಎಂದು ಕೋಪಗೊಂಡಿದ್ದಾರಂತೆ ಕಾಜಲ್ ಮೇಲೆ. ಅಂದಹಾಗೇ ಮೋದಿ ಮತ್ತು ಕಾಜಲ್ ಗೂ ಏನು ಸಂಬಂಧ ಅಂತೀರಾ……ಸದ್ಯ ಬಾಲಿವುಡ್​​ನಲ್ಲಿ ಕಮಾಲ್ ಮಾಡಿರುವ ಕಾಜಲ್ಗೆ ಬಿಟೌನ್ ನಲ್ಲಿ ಹಲವಾರು ಜನ ಫ್ರೆಂಡ್ಸ್ ಇದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಸಿನಿಮಾ ಬರ್ತಿದೆ.. ಕಾಜಲ್ ಸ್ನೇಹಿತ ಓಬಿರಾಯ್ ಮೋದಿ ಗೆಟಪ್​ನಲ್ಲಿ ಕ್ಯಾಮೆರಾಗೆ ಕೈ ಮುಗಿದಿದ್ದಾರೆ.. ತಮ್ಮ ಸ್ನೇಹಿತ ವಿವೇಕ್​ ಓಬಿರಾಯ್ ನಟಿಸಿರೋ ಈ ಚಿತ್ರವನ್ನ ಬೆಂಬಲಿಸಿ ನಟಿ ಕಾಜಲ್ ಅಗರ್​ವಾಲ್, ಟ್ವೀಟ್ ಮಾಡಿದ್ರು..ಜೈ ಮೋದಿ ಎಂದು ಬರೆದು ಕೊಂಡಿದ್ದಾರೆ. ಪಿಎಂ ಮೋದಿ ಚಿತ್ರಕ್ಕಾಗಿ ಕಾತರದಿಂದ ಕಾಯ್ತಿರೋದಾಗಿ ಬರೆದುಕೊಂಡಿದ್ರು.. ಇದೇ ಈಗ ತಮಿಳು ತಂಬಿಗಳ ಕೋಪಕ್ಕೆ ಕಾರಣವಾಗಿದೆ.. ಕಾಲಿವುಡ್​ನಿಂದ್ಲೇ ಆಕೆಯನ್ನ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಮೊದಲಿನಿಂದಲೂ ಬಿಜೆಪಿ ಅಂದ್ರೆ, ಮೋದಿ ಅಂದ್ರೆ ತಮಿಳುನಾಡಿನಲ್ಲಿ ಅಷ್ಟಕಷ್ಟೆ.. ಅಂತಹವರನ್ನ, ಅವರ ಕುರಿತಾದ ಸಿನಿಮಾವನ್ನ ಬೆಂಬಲಿಸಿರೋ ಕಾಜಲ್ ಅಗರ್​ವಾಲ್ ಮೇಲೆ ನೆಟ್ಟಿಗರು ಪ್ರತಾಪ ತೋರಿಸಿದ್ದಾರೆ..

Edited By

Kavya shree

Reported By

Kavya shree

Comments