‘ಟಗರು’ ಡಾಲಿ ಧನಂಜಯ ಕ್ಯಾಂಪೇನ್ ಯಾರ ಪರ…?!!!

11 Apr 2019 10:48 AM | Entertainment
597 Report

ಲೋಕಸಭೆ ಚುನಾವಣೆ ಬಿಸಿ ಸ್ಯಾಂಡಲ್ ವುಡ್ ಸ್ಟಾರ್’ಗಳಲ್ಲಿ ಧಗಧಗ ಅಂತಾ ಹತ್ತಿ ಉರಿಯುತ್ತಿದೆ.  ಮಂಡ್ಯ ಕ್ಷೇತ್ರದಲ್ಲಿ  ಸ್ಟಾರ್ ಕಲಾವಿದರ ಪ್ರಚಾರ ರಂಗೇರುತ್ತಿದೆ. ಒಂದಷ್ಟು ಜನ ಸುಮಲತಾಗೆ ನೇರವಾಗಿ ಸಪೋರ್ಟ್ ಮಾಡಿದ್ರೆ ಮತ್ತಷ್ಟು ಸ್ಟಾರ್ ನಟರು ಅತಿಆಸೆ ಒಳ್ಳೇದಲ್ಲಾ ಅಂಬಿ ಪತ್ನಿಗೆ ಅಂತಾ ಕಾಲೆಳೆದ್ರು. ಏನೇ ಇರಲೀ ಈ ಬಾರಿ ರಾಜ್ ಫ್ಯಾಮಿಲಿ ಯಾರ ಪರ ಪ್ರಚಾರಕ್ಕೂ ಬಂದಿಲ್ಲ. ಇನ್ನೇನು ಎಲೆಕ್ಷನ್  ಹತ್ತಿರ ಬರುತ್ತಿದೆ. ಸ್ಟಾರ್ ನಟ-ನಟಿಯರು ನೇರವಾಗಿ ಅಲ್ದೇ ಇದ್ರೂ ಪರೋಕ್ಷವಾಗಿ ಯಾವುದರ ಮೂಲಕವಾದವರೂ  ಯಾರ ಪರ ಪ್ರಚಾರ ಮಾಡ್ತಾರೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹೇಳಿ-ಕೇಳಿ ನಿಖಿಲ್ ಕುಮಾರ ಸ್ವಾಮಿ , ರಾಜ್ಯದ ಮುಖ್ಯಮಮತ್ರಿ ಮಗ. ನಿಖಿಲ್ ಗೆ ಸಪೋರ್ಟ್ ಮಾಡದೇ ಇದ್ರೂ ಏನೋ ಅಳುಕು. ಆದರೆ ಕೆಲವರು ನೇರವಾಗಿಯೇ, ಖಡಕ್ ಆಗಿಯೇ ನಾನು ಯಾರಿಗೂ ಸಪೋರ್ಟ್ ಮಾಡುವುದಿಲ್ಲವೆಂದು ಹೇಳಿದ್ದಾರೆ. ಟಗರು ಖ್ಯಾತಿಯ ಡಾಲಿ ಧನಂಜಯ ಅವರು ಯಾರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ, ಕರೆದರೂ ನಾನು ಯಾರ ಪರವಾಗಿಯೂ ಕ್ಯಾಂಪೇನ್ ಗೆ ಹೋಗುವುದಿಲ್ಲವೆಂದಿದ್ದಾರೆ. ಇದೂವರೆಗೂ ಯಾರು ನನ್ನ ಬಳಿ ಬಂದಿಲ್ಲ ಎಂದು ಡಾಲಿ ಧನಂಜಯ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಸ್ನೇಹಿತರ ಗುಂಪಿನಲ್ಲಿ ಕಾಣಿಸಿಕೊಂಡ ಧನಂಜಯ ಈ ಬಾರಿ ಸುಮಲತಾ ಪರ ಪ್ರಚಾರಕ್ಕೆ ಬರುತ್ತಾರೆಂಬ ಸುಳಿವು ಇತ್ತು.

Image result for dally dhananjaya with darshanಆದರೆ ಇದರ ಬಗ್ಗೆ ಮೈಸೂರಿನಲ್ಲಿ ನಡೆದ ಸೈಕ್ಲೋಥಾನ್​ ಕಾರ್ಯಕ್ರಮದಲ್ಲಿ  ಸ್ಪಷ್ಟನೆ ನೀಡಿದ್ದಾರೆ. ಇದೂವರೆಗೂ ನಾನು ಯಾವ ಪ್ರಚಾರಕ್ಕೂ ಹೋಗಿಲ್ಲ, ಚುನಾವಣೆಯಲ್ಲಿ ಒಳ್ಳೆ ಪ್ರತಿನಿಧಿ ಆಯ್ಕೆಯಾಗಬೇಕು. ನನಗೂ ರಾಜಕೀಯ ಪ್ರಚಾರಕ್ಕೂ ಸಮಬಂಧವಿಲ್ಲವೆಂದು.

Edited By

Kavya shree

Reported By

Kavya shree

Comments