ಚಂದನವನದಲ್ಲಿ ಮತ್ತೆ ಶುರುವಾಯ್ತ ಸ್ಟಾರ್​ವಾರ್​: ‘ಆನಂದ್’ ಮುಂದೆ ತೊಡೆ ತಟ್ಟಲಿದ್ದಾರೆ ‘ಪೈಲ್ವಾನ್’..!!

10 Apr 2019 9:42 AM | Entertainment
389 Report

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ಸಾಕಷ್ಟು ತೆರೆ ಮೆಲೆ ಬಂದಿವೆ… ಆದರೆ ಮಲ್ಟಿಸ್ಟಾರ್ ಸಿನಿಮಾಗಳು ಮಾತ್ರ ತೀರ ಅಪರೂಪ..ನಮ್ಮ ಚಂದನವನದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಬರುವುದು ಕಡಿಮೆಯೇ.. ಆದರೂ ಸಾಹಸ ಮಾಡಿ ಆ ರೀತಿಯ ಸಿನಿಮಾಗೆ ಕೈ ಹಾಕಿದರೂ ಅಂದ್ರೆ ಅಲ್ಲಿ ಮತ್ತೆ ಶುರುವಾಗುವುದು ಸ್ಟಾರ್ ವಾರ್.. ಇತ್ತಿಚಿಗೆ ಜೋಗಿ ಪ್ರೇಮ್ ನಿರ್ದೇಶನ ಮಾಡಿದ ದಿ ವಿಲನ್ ಸಿನಿಮಾದಲ್ಲಿ ಕೂಡ ಆಗಿದ್ದು ಇದೆ.. ಅಭಿಮಾನಿಗಳೇ ಸ್ಟಾರ್ ವಾರ್ ಶುರುಮಾಡಿಬಿಟ್ಟರು.. ಅಭಿನಯ ಚಕ್ರವರ್ತಿ ಮತ್ತು ಹ್ಯಾಟ್ರಿಕ್  ಹೀರೋ ನಡುವೆ ಮತ್ತೆ ಸ್ಟಾರ್ ವಾರ್ ಶುರುವಾಗಿದ್ಯ ಎಂಬ ಮಾತುಗಳು ಕೇಳಿ ಬರುತ್ತವೆ..

'ದಿ ವಿಲನ್' ಚಿತ್ರದಲ್ಲಿ ಒಂದಾಗಿ ನಟಿಸಿದ್ದ ಕಿಚ್ಚ ಸುದೀಪ್ ಹಾಗೂ ಶಿವರಾಜ್​ ಕುಮಾರ್ ಅಭಿನಯದ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿದ್ದು, ಮತ್ತೊಮ್ಮೆ ಗಲ್ಲಾಪೆಟ್ಟಿಗೆಯನ್ನು ಧೂಳ್ ಎಬ್ಬಿಸಲಿದೆ ಎನ್ನಲಾಗುತ್ತಿದೆ.. 'ಆಪ್ತಮಿತ್ರ' ಖ್ಯಾತಿಯ ನಿರ್ದೇಶಕರಾದ ಪಿ.ವಾಸು ನಿರ್ದೇಶಿಸುತ್ತಿರುವ 'ಆನಂದ್'​ ಚಿತ್ರದಲ್ಲಿ ಶಿವಣ್ಣ ಅಭಿನಯಿಸುತ್ತಿರುವುದು ಗೊತ್ತಿದೆ. ಈ ಚಿತ್ರವನ್ನು ದ್ವಾರಕೀಶ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಮುಹೂರ್ತದ ಸಂದರ್ಭದಲ್ಲೇ 'ಆನಂದ್' ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆ ಮೇಲೆ ಬರಲಿದೆ ಎಂದು ನಿರ್ಮಾಪಕ ಯೋಗಿ ದ್ವಾರಕೀಶ್ ತಿಳಿಸಿದ್ದರು. ಅದರಂತೆ ಈ ಚಿತ್ರದ ಕೆಲಸಗಳು ಇದೀಗ ಭರದಿಂದ ಸಾಗುತ್ತಿದೆ.


ಮತ್ತೊಂದು ಕಡೆ ನಿರ್ದೇಶಕ ಕೃಷ್ಣ ಹಾಗೂ ಸುದೀಪ್ 'ಪೈಲ್ವಾನ್'​ನಲ್ಲಿ ಒಂದಾಗಿದ್ದಾರೆ. ಈಗಾಗಲೇ ಚಿತ್ರದ ಮುಕ್ಕಾಲು ಭಾಗದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೀಗ ರಿಲೀಸ್ ದಿನಾಂಕವನ್ನು ಪ್ರಕಟಿಸಿದೆ. ನಿರ್ದೇಶಕ ಕೃಷ್ಣ ಸಹ 'ಪೈಲ್ವಾನ್'​ನನ್ನು ವರಮಹಾಲಕ್ಷ್ಮಿ ಹಬ್ಬದಂದು ಅಂದರೆ ಆಗಸ್ಟ್ 9 ರಂದು ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಂದು ಕಡೆ ಶಿವಣ್ಣ, ಮತ್ತೊಂದು ಕಡೆ ಸುದೀಪ್… ಒಟ್ಟಿನಲ್ಲಿ ಒಂದೇ ದಿನದಲ್ಲಿ ಇಬ್ಬರು ಸ್ಟಾರ್ ನಾಯಕರ ಸಿನಿಮಾಗಳು ತೆರೆ ಮೇಲೆ ಬರುತ್ತಿರುವುದರಿಂದ ಮತ್ತೊಮ್ಮೆ ಸ್ಟಾರ್ ವಾರ್ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ.

Edited By

Manjula M

Reported By

Manjula M

Comments