ಅಂಬಿಯಣ್ಣನಿಗೆ ಇರೋದು ಒಬ್ಬರೇ ಹೆಂಡ್ತಿ ಅದು ರಾಜ್ಯದ ಜನಕ್ಕೆ ಗೊತ್ತು' : ಖಡಕ್ ಆಗಿ ಯಶ್ ಹೇಳಿದ್ಯಾಕೆ…?!!

09 Apr 2019 4:35 PM | Entertainment
452 Report

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ನಾಯಕರ ಮತ್ತು ಸ್ಟಾರ್ ನಟರ ಮಾತಿನ ವಾಕ್ಸಮರ ಜೋರಾಗುತ್ತಿದೆ.  ಚುನಾವಣೆ ಬಿಸಿಯಲ್ಲಿರುವ ಲೋಕಸಭಾ ಅಭ್ಯರ್ಥಿಗಳ ಮಾತು ಹಿಡಿತ ತಪ್ಪುತ್ತಿದೆ. ಮಾದರಿಯಾಗಿ ನಿಲ್ಲ ಬೇಕಿದ್ದ ನಾಯಕರು ಪರಸ್ಪರ ಮಾತಿನ ಕೆಸರೆರಚಾಟದಲ್ಲಿ ಬ್ಯುಸಿ ಆಗಿದ್ದಾರೆ. ಕ್ಯಾಂಪೇನ್ ನಡುವೆ ಒಬ್ಬರ ಮೇಲೆ ಒಬ್ಬರು ಕಿಡಿಕಾರಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್, ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಎರಡನೇ ಹೆಂಡತಿ ರಾಧಿಕಾ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ, ಅವರನ್ನು ಈ ವಿಚಾರಕ್ಕೆ ಎಳೆದಿದ್ದಾರೆಂದು ಯಶ್ ವಿರುದ್ಧ ನಿಖಿಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ. ಇದಕ್ಕೂ ಮುಂಚೆ ಜೆಡಿಎಸ್ ನಾಯಕರು ಸುಮಲತಾ ಪರ ನಿಂತ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ಬಗ್ಗೆ ಮಾತನಾಡಿದ್ದರು.ಇದೀಗ ಅದೇ ಮಾತಿಗೆ ಮಾತಿನ ಮೂಲಕವೇ ಟಾಂಗ್ ಕೊಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ಮಂಡ್ಯದಲ್ಲಿ ಸುಮಲತಾ ಪರ ಬಿಜೆಪಿ ನಿಂತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.ಜೊತೆಗೆ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್  ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರದಂತೇ ನಿಖಿಲ್ ಮತ್ತು ಜೆಡಿಎಸ್ ನಾಯಕರು ಮಾತಿನ ಮೂಲಕ ವ್ಯಂಗ್ಯವಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಂಡ್ಯದಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಬಾಡಿಗೆ ಕಟ್ಟಲಾಗದವರು ನಮಗೆ ಹೇಳಲು ಬರುತ್ತಿದ್ದಾರೆ, ನಮ್ಮ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಅದ್ಯಾರೋ ಹಿರಿ ಮಗನೋ…ಕಿರಿ ಮಗನೋ ನಾನಂತೂ ಕಾಣೆ. ಅಂತಾ ಯಶ್​​ಗೆ ಟಾಂಗ್ ನೀಡಿದ್ರು. ನಿಖಿಲ್ ಹೇಳಿಕೆಗೆ ದರ್ಶನ್ ಮತ್ತು ಯಶ್ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಯ್ತು. ಬಿಸಿಲು, ಏಸಿ ಬಗ್ಗೆ ಮಾತನಾಡಿ ಸಿನಿಮಾದವರು ಇವರು ಸ್ವಲ್ಪ ಕಷ್ಟ ಅನುಭವಿಸಲೀ ಅಂತಾ ಹೇಳಿ ಟಾಂಗ್ ನೀಡಿದ ಕುಮಾರ ಸ್ವಾಮಿಗೆ ಯಶ್ ಖಡಕ್ ಆಗಿಯೇ ಮಾತನಾಡಿದ್ರು. ಮತ್ತೆ ನಿಖಿಲ್  ಮುಂದುವರೆದು ಬಾಡಿಗೆ ಮನೆಗೆ ಬಾಡಿಗೆ ಕಟ್ಟದವರು ನನ್ನ  ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ವೈಯಕ್ತಿಕವಾಗಿ ಟೀಕೆ ಮಾಡಿದ್ದಕ್ಕೆ, ಯಶ್ ಈ ಬಾರಿ ಹೇಳಿದ್ದೇನು ಗೊತ್ತಾ…?

Image result for yash with nikhil

ಯಶ್, ನನಗೆ ಬಾಡಿಗೆ ಕಟ್ಟೋ ಯೋಗ್ಯತೆ ಇದೆಯೋ? ಆ ವಿಷಯ ಬಿಡಿ, ನಾನು ಏನು ಮಾಡಿದ್ದೇನೆ ಅಂತಾ ರಾಜ್ಯದ ಅದ್ರಲ್ಲೂ ಕೊಪ್ಪಳದ ರೈತರನ್ನು ಕೇಳಿ ಅಂತಾ ಟಾಂಗ್ ನೀಡಿದ್ರು. ಜೊತೆಗೆ, ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಯಶ್, ಮಾಧ್ಯಮವೊಂದಕ್ಕೆ ಮಾತನಾಡುತ್ತಾ ಸುಮಲತಾ ಹೆಸರಿನ ನಾಲ್ವರನ್ನು ಚುನಾವಣೆಗೆ ಇಳಿಸಿರೋ ಬಗ್ಗೆ ಕೂಡ ಹರಿಹಾಯ್ದಿದ್ದಾರೆ. ಜನರಿಗೆ ಕನ್ಫ್ಯೂಸ್ ಮಾಡೋಕೆ ಅವರು ಮಾಡ್ತಿರುವ ಕಸರತ್ತು ಅಷ್ಟಿಷ್ಟಲ್ಲ. ನಾಲ್ವರು ಸುಮಲತಾ ಹೆಸರಿನವರನ್ನು ಕಣಕ್ಕೆ ಇಳಿಸಿದ್ದೇವೆ ಎಂದು ಅವರು ಭಾವಿಸಿದ್ದರೆ ಅದು ಸಾಧ್ಯವಾಗಲ್ಲ. ಯಾಕಂದ್ರೆ ಎಷ್ಟೇ ಜನ ಸುಮಲತಾರನ್ನು ಇವರು ಚುನಾವಣೆಗೆ ಇಳಿಸಿದ್ರೂ, ಅಂಬರೀಶಣ್ಣನಿಗೆ ಇದ್ದಿದ್ದು ಒಬ್ಬರೇ ಹೆಂಡತಿ. ಅವರು ಸುಮಲತಾ ಅಂಬರೀಶ್ ಅಂತಾ ಕೂಡ ತಿರುಗೇಟು ನೀಡಿದ್ದಾರೆ.

 

Edited By

Kavya shree

Reported By

Kavya shree

Comments