ಬಿಜೆಪಿ ರಿಲೀಸ್ ಮಾಡಿದ್ದು ಫೇಕ್ ಪ್ರಣಾಳಿಕೆ, ಅಸಲಿ ಪ್ರಣಾಳಿಕೆ ಇಲ್ಲಿದೆ ನೋಡಿ : ರಮ್ಯಾ ಟ್ವೀಟ್…..!!!

09 Apr 2019 2:59 PM | Entertainment
288 Report

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದು ನಿಮ್ಮ ಯಾಮಾರಿಸಲಿಕ್ಕೆ. ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದ ಅಸಲಿ  ಪ್ರಣಾಳಿಕೆ ಇಲ್ಲಿದೆ ನೋಡಿ ಎಂದು ಟ್ವೀಟ್ ಮಾಡಿದ್ದಾರೆ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ. ಸರಣಿ ಟ್ವೀಟ್ ಮಾಡುವುದರ ಮೂಲಕ ಬಿಜೆಪಿ ಅಸಲಿ ಮುಖ ಅನಾವರಣಗೊಳಿಸಿದ್ದೇನೆ ಎಂದರು. ಬಿಜೆಪಿ ಪ್ರಣಾಳಿಕೆ ಸಂಪೂರ್ಣವಾಗಿ 2014 ರ ಕಾಪಿಯಾಗಿದೆ, ಆದರೆ ಅದರ ಅಸಲಿ ಪ್ರಣಾಳಿಕೆ ಏನ್ ಗೊತ್ತಾ..? ಎಂದಿದ್ದಾರೆ.

ಬಿಜೆಪಿಯನ್ನು ಮೇಲಿಂದ ಮೇಲೆ ವಾಗ್ದಾಳಿ ಮಾಡುತ್ತಲೇ ಬಂದಿರುವ ರಮ್ಯಾ ಸಾಕಷ್ಟು ಭಾರೀ ವಿವಾದಕ್ಕು ಒಳಗಾಗಿದ್ದರು. ಅವರು ಈ ಬಾರಿ ಬೇರೆಯೇ ಥರನಾದ ಆರೋಪ ಹೊರಿಸಿದ್ದಾರೆ. ಅವರು ಹೊರಡಿಸಿರುವ ಪ್ರಣಾಳಿಕೆ ಬಗ್ಗೆ ವ್ಯಂಗ್ಯವಾಡಿದ ರಮ್ಯಾ, ಪ್ರಧಾನಿ ಮೋದಿ ವಿರುದ್ಧ ಟೀಕಾರೋಪ ಮಾಡಿದ್ದಾರೆ.

* ಪ್ರಜಾಪ್ರಭುತ್ವ ಬದಲು ಸರ್ವಾಧಿಕಾರಿ ಧೋರಣೆ ಹೇರುವುದು ಬಿಜೆಪಿಯವರ ಪ್ರಣಾಳಿಕೆಯ ಮೊದಲ ಅಂಶ,

* ಕೋಮು ಶಕ್ತಿಗಳ ಧ್ರುವೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಲಾಗುವುದು.

* ಮಹಿಳೆ ಸುರಕ್ಷತೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ

* ವಂಚನೆ ಮಾಡುವವರಿಗೆ ರಕ್ಷಣೆ, ಚೌಕಿದಾರ ಹೆಸರಿನಲ್ಲಿ ನಿರುದ್ಯೋಗ ಸೃಷ್ಟಿ ಮಾಡುವುದೇ ನಮ್ಮ ಗುರಿ

* 70 ವರ್ಷಗಳ ನಿರುದ್ಯೋಗ ಸಮಸ್ಯೆ ಎಂದು ಸುಳ್ಳು ಹೇಳಿಕೆ

* ಸಾಲಮನ್ನಾ ಎಂಬ ಸುಳ್ಳು ಅಶ್ವಾಸನೆ, ನೋಟ್ ಬ್ಯಾನ್ ಮಾಡುವ ಹುನ್ನಾರ

* ಲೋಕಪಾಲ ಸ್ಥಾಪನೆ ಆಗಿಲ್ಲ, ಅರ್ ಟಿಐ ಅರ್ಜಿ ಸ್ವೀಕರಿಸಿ, ಉತ್ತರಿಸಿಲ್ಲ.

* ದೇಶ 2018ರಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ರೈತ ಪ್ರತಿಭಟನೆ ಕಂಡಿತು.

* 2 ಕೋಟಿ ಉದ್ಯೋಗ ಸೃಷ್ಟಿ ಎಂಬ ಸುಳ್ಳು ಆಶ್ವಾಸನೆ

Edited By

Kavya shree

Reported By

Kavya shree

Comments