ಸ್ಯಾಂಡಲ್ ವುಡ್'ನ ಖ್ಯಾತ ನಟಿಗೆ ಆಕ್ಸಿಡೆಂಟ್...!!!

09 Apr 2019 1:21 PM | Entertainment
762 Report

ಕನ್ನಡದ ಖ್ಯಾತ ನಟಿಮದುವೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕ್ಸಿಡೆಂಟ್ ಆಗಿದೆ. ಬಿಗ್ ಬಾಸ್ ಸ್ಪರ್ಧಿಯು ಕೂಡ ಆಗಿರುವ ಈ ನಟಿ ತಮ್ಮ ಆಪ್ತರ  ಮದುವೆಗೆಂದು ಹೋಗುತ್ತಿದ್ದರೆನ್ನಲಾಗಿದೆ. ಸಿನಿಮಾಗಳಿಂದ ತುಂಬಾ ವರ್ಷಗಳ ಬ್ರೇಕ್ ಪಡೆದು ಆ ನಂತರ ಬಿಗ್ ಬಾಸ್ ಮೂಲಕ ಮತ್ತೆ ಕಾಣಿಸಿಕೊಂಡಿಡಿದ್ದ ನಟಿ ಚಂದ್ರಿಕಾ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ತಮ್ಮ ಹತ್ತಿರದವರ ಮದುವೆಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಅಂಬೇಡ್ಕರ್ ಭವನ ಬಳಿ ಅವರ ಕಾರಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಟಿ ಚಂದ್ರಕಾಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಂದಹಾಗೇ ಸಾಹಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಸಿರುವ ಚಂದ್ರಿಕಾ ಬಿಗ್’ಬಾಸ್ ಸ್ಪರ್ಧಿಯು ಆಗಿದ್ದರು. ಚಂದ್ರಕಾಗೆ ಒಬ್ಬ ಮಗನಿದ್ದಾನೆ.

Edited By

Kavya shree

Reported By

Kavya shree

Comments