‘ಐರಾವತ’ ನಾಯಕಿಯ ಹಾಟ್ ಪೋಟೋ ಶೂಟ್ ನೋಡಿದ್ರೆ ಶಾಕ್ ಆಗ್ತೀರಾ..!!?

09 Apr 2019 9:39 AM | Entertainment
404 Report

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟ ನಟಿಯರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ..  ಅದರಲ್ಲೂ ನಟಿಯರು ಅಂತೂ ತಮ್ಮ ಹಾಟ್ ಪೋಟೊಗಳ ಮೂಲಕವೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಇತ್ತಿಚಿಗೆ ಸಾಕಷ್ಟು ನಟಿಯರು ತಮ್ಮ ಹಾಟ್ ಪೋಟೋಗಳನ್ನು ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು.. ಇದೀಗ ಮತ್ತೊಬ್ಬ ನಾಯಕಿಯು ಶವರ್ ಕೆಳಗೆ ನಿಂತಿರುವ ಹಾಟ್ ಪೋಟೋವೊಂದನ್ನು ಹಾಕಿ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದಾಳೆ..ಅರೇ ಹೌದಾ ಯಾರಪ್ಪ ಅದು ಅಂತೀರಾ.. ಮುಂದೆ ಓದಿ..

ಸ್ಯಾಂಡಲ್ ವುಡ್ ನಲ್ಲಿ ಈಕೆ ನಟಿಸಿರೋದು ಒಂದೇ ಸಿನಿಮಾ.. ಅದು ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ಸ್ಕ್ರೀನ್ ಷೇರ್ ಮಾಡಿದ್ದಾರೆ.  ‘ಐರಾವತ’ ಚಿತ್ರದ ನಟಿ ಊರ್ವಶಿ ರೌಟೇಲಾ ಶವರ್ ಕೆಳಗೆ ನಿಂತು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಷೇರ್ ಮಾಡಿದ್ದಾರೆ. ಊರ್ವಶಿ ಅವರ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ನಿಯಾನ್ ಪಿಂಕ್ ಲೇಸ್ ಉಡುಪು ಧರಿಸಿ ಶವರ್ ಕೆಳಗೆ ನಿಂತಿದ್ದಾರೆ. ಈ ಡ್ರೆಸ್‍ಗೆ ಅವರು ಹಾಟ್ ಕೆಂಪು ಬಣ್ಣದ ಒಳ ಉಡುಪು ಧರಿಸಿದ್ದು, ಕ್ಯಾಮರಾನೇ ನಾಚುವಂತೆ ಫೋಟೋಗೆ ಪೋಸ್ ನೀಡಿದ್ದಾರೆ. ಊರ್ವಶಿ ಇನ್‍ಸ್ಟಾಗ್ರಾಂನಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಈ ಪೋಟೋ ನೋಡಿದವರು ಶಾಕ್ ಆಗೋದು ಗ್ಯಾರೆಂಟಿ.

ಅಲ್ಲದೆ ತಮ್ಮ ಹೊಸ ಫೋಟೋಶೂಟ್‍ನ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಊರ್ವಶಿಯ ಈ ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಊರ್ವಶಿ ರೌಟೇಲಾ ಈಗ ನಟ ಜಾನ್ ಅಬ್ರಹಾಂ ಜೊತೆ ‘ಪಾಗಲ್‍ಪಂತಿ ಇನ್ ಲಂಡನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಈ ವರ್ಷ ಬಿಡುಗಡೆ ಆಗಲಿದೆ. ಈ ಹಿಂದೆ ಊರ್ವಶಿ ‘ಹೇಟ್ ಸ್ಟೋರಿ 4’ ಚಿತ್ರದಲ್ಲಿ ನಟಿಸಿದ್ದರು.ಒಟ್ಟಾರೆಯಾಗಿ ನಟಿ ಮಣಿಯರು ಹಾಟ್ ಪೋಟೋ ಶೂಟ್ ನಲ್ಲಿ ನಾ ಮುಂದು, ತಾ ಮುಂದು ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ. 

Edited By

Manjula M

Reported By

Manjula M

Comments