ಗೆಳತಿಯ ಸ್ಪೆಷಲ್ ವಿಶ್'ಗೆ ದಿಲ್’ಖುಷ್ ಆದ್ರಂತೆ ಬರ್ತ್ ಡೇ ಗರ್ಲ್ ರಶ್ಮಿಕಾ…!!!

05 Apr 2019 3:48 PM | Entertainment
234 Report

ಇಂದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಬರ್ತ್ ಡೇ ಸಂಭ್ರಮ. ಈಗಾಗಲೇ ಅಭಿಮಾನಿಗಳು ಅವರ ನಿವಾಸಕ್ಕೆ  ಭೇಟಿ ನೀಡಿ  ಅವರಿಗೆ ವಿಶ್ ಮಾಡುತ್ತಿದ್ದಾರೆ. ಕಿರಿಕ್  ಪಾರ್ಟಿ ಇನ್ನೋಸೆಂಟ್ ಹುಡುಗಿ ಸಾನ್ವಿಗೆ ಪ್ರೀತಿಯ ಗೆಳತಿ ಆಶಿಕ ರಂಗನಾಥ್ ಹೇಗೆ ವಿಶ್ ಮಾಡಿದ್ದಾರೆ ಗೊತ್ತಾ. ಆಕೆಯ ಸ್ಪೆಶಲ್ ವಿಶಸ್ ಗೆ ಕ್ಯೂಟ್ ಸಾನ್ವಿ ಫಿದಾ ಆಗಿ ಬಿಟ್ಟರಂತೆ.

23 ನೇ ವಯಸ್ಸಿಗೆ ಕಾಲಿಟ್ಟ ಚಂದನವನದ ಚೆಂದುಳ್ಳಿ ಚೆಲುವೆ ಅತೀ ಕಿರಿಯ ವಯಸ್ಸಿನಲ್ಲೇ ಸಾಲು ಸಾಲು ಹಿಟ್ ಸಿನಿಮಾಗಳ್ನನು ಕೊಟ್ಟು ನಂ.1 ಸ್ಥಾನದಲ್ಲಿದ್ದಾರೆ. ನಟಿ ಆಶಿಕಾ ರಂಗನಾಥ್ ಟ್ವಿಟರ್‌ನಲ್ಲಿ, ತುಂಬಾ ಸ್ಪೆಷಲ್ ಆಗೇ ವಿಶ್ ಮಾಡಿದ್ದಾರೆ. ರಶ್ಮಿಕಾ ಸಿನಿ ಜರ್ನಿಯ ಎಲ್ಲಾ ವಿಭಿನ್ನ ಪಾತ್ರಗಳನ್ನ ಕೋಲಾಜ್ ಮಾಡಿದ ಫೋಟೋ ಅಪ್ಲೋಡ್ ಮಾಡಿ, . ನಿನ್ನ ಸಿನಿ ಜೀವನ ಶುರು ಮಾಡಿ 2 ವರ್ಷ ಆದ್ರೆ, ನಾವಿಬ್ರು ಪರಿಚಯ ಆಗಿ 4 ವರ್ಷ ಕಳೆದಿದೆ. ಈ ಗೆಳೆತನ ಹಾಗೇ ಮುಂದುವರೆದಿದೆ. ಪ್ರೀತಿಯ ಗೆಳತಿಗೆ ಹುಟ್ಟುಹಬ್ಬದ ಶುಭಾಶಯಗಳು ಅಂತಾ ಬರೆದಿದ್ದಾರೆ. ಇದ್ರಿಂದ ದಿಲ್‌ಖುಷ್ ಆದ ರಶ್ಮಿಕಾ, ನಾವಿಬ್ರು ಸಿನಿಮಾ , ಕನಸುಗಳು, ಮುಂದಿನ ಗುರಿ ಬಗ್ಗೆ ಎಷ್ಟು ಮಾತಾಡ್ತಿದ್ವಿ ಅನ್ನೋದು ನೆನಪಿದೆ. ನಿನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಥ್ಯಾಂಕ್ಯೂ ಸೋ ಮಚ್ ಅಂತಾ ಹೇಳಿದ್ದಾರೆ.  ರಶ್ಮಿಕಾ ಗೆ ನಟ ವಿಜಯ್ ದೇವರಕೊಂಡಾ ಕೂಡ ಬರ್ತ್ ಡೇ ವಿಶ್ ಮಾಡಿದ್ದಾರೆ. ವಿಶ್ ಜೊತೆ ಶಾಕ್ ಕೂಡ ಕೊಟ್ಟಿದ್ದಾರಂತೆ  ವಿಜಯ್. ಲಿಪ್ ಲಾಕ್ ವಿಡಿಯೋ ಎಡಿಟ್ ಮಾಡಿ ಸೆಂಡ್ ಮಾಡಿದ್ದಾರೆ. ಈ ವಿಡಿಯೋ ನೋಡಿ ರಶ್ಮಿಕಾ ಕ್ಯೂಟ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ನನ್ನ ಅಭಿಮಾನಿಗಳಿಗೆ ಹೃದಯಘಾತ ಮಾಡಬೇಡ ಎಂದಿದ್ದಾರಂತೆ.

Edited By

Kavya shree

Reported By

Kavya shree

Comments