‘ಒಂದು ರಾತ್ರಿ ಕಾಂಪ್ರಮೈಸ್ ಮಾಡ್ಕೋ’ ಎಂದವನಿಗೆ ನಟಿ ಕೊಟ್ಟ ರಿಯಾಕ್ಷನ್ ಹೇಗಿತ್ತು ಗೊತ್ತಾ..? ಆತ ದಂಗಾಗಿ ಬಿಟ್ನಂತೆ..!!!

05 Apr 2019 3:41 PM | Entertainment
549 Report

ಕಾಸ್ಟಿಂಗ್ ಕೌಚ್ ಸಿನಿಮಾ ಫೀಲ್ಡ್ ನಲ್ಲಿ ಕಾಮನ್ ಎಂದು ಕೆಲ ನಟಿಯರು ಮೂಗು ಮುರಿದ್ರೂ ಕೆಲವೊಂದಷ್ಟು ಮಂದಿ ಮೀಟೂ ಹೆಸರಲ್ಲಿ ಕೆಲ ನಟರ, ನಿರ್ದೇಶಕರ ಎದೆಯಲ್ಲಿ ನಡುಕ ಹುಟ್ಟಿಸಿದ್ರು. ಇದೀಗ ಇಂತಹದ್ದೇ ಸಂದರ್ಭವನ್ನು ಎದುರಿಸಿದ ನಟಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಒಂದು ದಿನ ಕಾಂಪ್ರಮೈಸ್ ಮಾಡಿಕೋ ಎಂದು  ಹೇಳಿದ ನಿರ್ಮಾಪಕನಿಗೆ ನಟಿಯೊಬ್ಬರು ಕೊಟ್ಟ ಪ್ರತಿಕ್ರಿಯೆ ಈಗ ಎಲ್ಲರ ಮೆಚ್ಚುಗೆ ಗಳಿಸಿದೆ.

ಮರಾಠಿ ಚೆಲುವೆ, ನಟಿ ಶೃತಿ ಮರಾಠೆ ಅವರು ಸಿನಿಮಾ ಒಂದರ ಅಡಿಷನ್ ಗೆ ಹೋದಾಗ ಆದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂ ನಲ್ಲಿ ಶೃತಿ ಭಾಗವಹಿಸಿದ್ದರಂತೆ. ಈ ವೇಳೆ ನಿರ್ಮಾಪಕ ಕಾಂಪ್ರಮೈಸ್ ಹಾಗೂ ಒಂದು ರಾತ್ರಿ ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರಂತೆ. ಮಾತಿನ ಮಧ್ಯೆ ಆತ ದಿಕ್ಕು ತಪ್ಪುತ್ತಿದ್ದುದ್ದು ನಟಿಗೆ ಗೊತ್ತಾಗಿದೆ.ಅವನ ಮಾತನ್ನು ಅರ್ಥ ಮಾಡಿಕೊಂಡ ಶೃತಿ, ಬುದ್ಧಿವಂತಿಕೆಯಿಂದ ಹ್ಯಾಂಡಲ್ ಮಾಡಿದ್ದಾಳೆ. ಶೃತಿ ಕೊಟ್ಟ ರಿಯಾಕ್ಷನ್ ಗೆ ನಿರ್ಮಾಪಕನೇ ದಂಗಾಗಿ ಬಿಟ್ಟಿದ್ದಾನೆ. ಅಂದಹಾಗೇ ನಟಿ, ನಿರ್ಮಾಪಕನಿಗೆ ನಾನು ನಿಮ್ಮ ಜೊತೆ ಮಲಗಬೇಕೆಂದರೆ, ನೀವು ನಾಯಕ ನಟನನ್ನು ಯಾರ ಜೊತೆ ಮಲಗಿಸುತ್ತಿದ್ದೀರಾ? ಎಂದು ಮರುಪ್ರಶ್ನೆ ಕೇಳಿದ್ದಾರೆ.  ಈಕೆಯ ಬೋಲ್ಡ್ ಪ್ತತಿಕ್ರಿಯೆಗೆ ನಿರ್ಮಾಪಕನ ಬಾಯಲ್ಲಿ ಮತ್ತೆ ಮಾತು ಬರಲೇ ಇಲ್ವಂತೆ. ಈ ವಿಚಾರವನ್ನು ಅಲ್ಲಿಗೆ ಸುಮ್ಮನೇ ಬಿಡದೇ ಆ ನಿರ್ಮಾಪಕ ಮಾತನಾಡಿದ್ದನ್ನು  ಅಲ್ಲಿದ್ದವರಿಗೆ ತಿಳಿಸಿದ್ದಾಳೆ. ಬಳಿಕ ಚಿತ್ರತಂಡ ಆ ವ್ಯಕ್ತಿಯನ್ನು ಚಿತ್ರದಿಂದ ಹೊರ ನಡೆಯಲು ತಿಳಿಸಿದ್ದಾರೆ. ಆ ದಿನ ನಾನು ಧೈರ್ಯವಾಗಿ ಇರಲು ನನಗೆ ಒಂದು ನಿಮಿಷ ಸಾಕಾಗಿತ್ತು. ಆ ದಿನ ನಾನು ನನ್ನ ಒಬ್ಬಳಿಗಾಗಿ ಧ್ವನಿ ಎತ್ತಿಲಿಲ್ಲ. ನಾನು ಪ್ರತಿ ಮಹಿಳೆಯರಿಗಾಗಿ ಧ್ವತಿ ಎತ್ತಿದೆ ಎಂದು ನಟಿ ಶ್ರುತಿ ಹೇಳಿದ್ದಾರೆ.ಮರಾಠಿ ಸಿನಿಮಾಗಳಷ್ಟೇ ಬಾಲಿವುಡ್ ನಲ್ಲೂ ಶೃತಿ ಅಭಿನಯಿಸಿದ್ದಾರೆ.

Edited By

Kavya shree

Reported By

Kavya shree

Comments