'ಅಣ್ಣ-ತಂಗಿ ಪಾತ್ರ ಮಾಡಿ ಕಿಸ್ ಮಾಡೋಕೆ ಹೇಗೆ ಮನಸ್ಸು ಬಂತು' : ಕಲಾವಿದರ ಮೇಲೆ ಅಭಿಮಾನಿಗಳ ಆಕ್ರೋಶ..!!!

05 Apr 2019 11:30 AM | Entertainment
3043 Report

ಸಿನಿಮಾದಲ್ಲಿ ಅಥವಾ ಧಾರವಾಹಿಗಳಲ್ಲಿ ಕಲಾವಿದರು ಮಾಡುವ ಪಾತ್ರ ಎಷ್ಟು ಪರಿಣಾಮಕಾರಿಯಾಗುತ್ತದೆ ಎಂದರೆ...ಅಭಿಮಾನಿಗಳು ಕೆಲ ಕಲಾವಿದರನ್ನು ಪಾತ್ರದ ಹೆಸರಿನಂದಲೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಅವರ ಮನವೊಕ್ಕಿ ಬಿಡುತ್ತದೆ. ಇನ್ನು ಅಣ್ಣ-ತಂಗಿ ಕ್ಯಾರೆಕ್ಟರ್ ಮಾಡಿದ್ದಂತಹವರು ಗಂಡ-ಹೆಂಡತಿ ಆಗಿ ತೆರೆ ಮೇಲೆ ಬಂದರೆ ನೋಡಲು ಇಚ್ಛಿಸುವುದಿಲ್ಲ ಅಭಿಮಾನಿಗಳು. ಆದರೆ ಇಲ್ಲೊಂದು ಯುವ ಜೋಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

Image result for parth samthaan and pooja banerjee web series

ಸಿನಿಮಾ ಅಷ್ಟೇ ಅಲ್ಲಾ, ಕಿರುತೆರೆಯ ಕಲಾವಿದರು ಒಂದಿಲ್ಲೊಂದು ಗಾಸಿಪ್ ಗೆ ಒಳಗಾಗುತ್ತಿದ್ದಾರೆ. ಈ ಬಾರಿ ಇಂತದ್ದೇ ಟ್ರೊಲ್ ಗೆ ಒಳಗಾದವರು ಯಾರು ಅಂತಾ ಕೇಳ್ತೀರಾ… ಏಕ್ತಾ ಕಪೂರ್ ಶೋ ಕಸೋಟಿ ಜಿಂದಗಿ ಕಿ-2ನಲ್ಲಿ ಸಹೋದರ - ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಾರ್ಥ ಸಮರ್ಥ್ (ಅನುರಾಗ್) ಹಾಗೂ ಪೂಜಾ ಬ್ಯಾನರ್ಜಿ (ನಿವೇದಿತಾ) ಅವರು ಒಂದು ವೆಬ್ ಸೀರಿಸ್ ನಲ್ಲಿ  ಅಭಿನಯಿಸ್ತಾ ಇದ್ದಾರೆ.  ಕಹನೇಕೋ ಹಮ್ ಸಫರ್ ಹೇ 2 ನಲ್ಲಿ ಇಬ್ಬರು ನಟಿಸುತ್ತಿದ್ದಾರೆ ಅಂದಹಾಗೇ ಟಿವಿ ಸೀರಿಯಲ್ ನಲ್ಲಿ ಅಣ್ಣ ತಂಗಿಯಾಗಿದ್ದ ಈ ಜೋಡಿ ಈ ವೆಬ್ ಸೀರಿಸ್ ನಲ್ಲಿ ಲಿಪ್-ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

Image result for parth samthaan and pooja banerjee web series

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.ಏಕ್ತಾ ಕಪೂರ್ ಧಾರಾವಾಹಿಯಲ್ಲಿ ಸಹೋದರ-ಸಹೋದರಿ ಪಾತ್ರ ಮಾಡಿದವರು ಅವ್ರ ವೆಬ್ ಸರಣಿಯಲ್ಲಿ ಪ್ರೇಮಿಗಳಾಗಿ ಲಿಪ್ ಲಾಕ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.ಈ ಟ್ರೋಲಿಗರ ಕಮೆಂಟ್ ಗೆ ರಿಯಾಕ್ಟ್ ಮಾಡಿರುವ ಪೂಜಾ ನನಗೆ ಗೊತ್ತಿತ್ತು ಜನರು ಈ ಪ್ರಶ್ನೆ ಎತ್ತುತ್ತಾರಂತೆ. ಇದು ನನ್ನ ಮೊದಲ ಕಿಸ್ಸಿಂಗ್ ದೃಶ್ಯ. ಇದನ್ನು ನೋಡಿ ಅಭಿಮಾನಿಗಳು ಪ್ರಶ್ನೆ ಮಾಡೋದು ಸಹಜ. ಧಾರಾವಾಹಿಯಲ್ಲಿ ಪಾರ್ಥ ನನ್ನ ಸಹೋದರ. ನಿಜ ಜೀವನದಲ್ಲಿ ಅಲ್ಲ. ನಮ್ಮಿಬ್ಬರ ಮಧ್ಯೆ ಒಳ್ಳೆ ಹೊಂದಾಣಿಕೆಯಿದೆ ಎಂದಿದ್ದಾಳೆ.

Edited By

Kavya shree

Reported By

Kavya shree

Comments