ಪತಿಗೆ ಬಿಟ್ರೆ, ಈ ಸ್ಟಾರ್ ನಟನಿಗೂ ಗೊತ್ತಂತೆ ಕರೀನಾ ಮೊಬೈಲ್ ಪಾಸ್ವರ್ಡ್..!!

04 Apr 2019 5:19 PM | Entertainment
184 Report

ಬಾಲಿವುಡ್ ಸ್ಟಾರ್ ನಟ ನಟಿಯರು ಇತ್ತಿಚಿಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.. ಬಾಲಿವುಡ್ ನಲ್ಲಿ ಬೇಬೋ ಅಂತಾನೇ ಫೇಮಸ್ ಆಗಿರುವ ಕರೀನಾ ಕಪೂರ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.. ಈಗಾಗಲೇ ಹಲವು ಬಾರಿ ಈ ನಟಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಪ್ರತಿ ಬಾರಿಯೂ ಕೂಡ ಒಂದಲ್ಲ ಒಂದು ವಿಷಯಕ್ಕೆ ಬಿ ಟೌನ್ ಬೆಡಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಮತ್ತೊಂದು ವಿಷಯಕ್ಕೆ ಬೇಬೋ ಸುದ್ದಿಯಾಗಿದ್ದಾರೆ.  ಆ ಸುದ್ದಿ ಕೇಳಿದ್ರೆ ನಿಮಗೆ ಹೌದಾ ಅನಿಸದೇ ಇರದು…  

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್ ಮದುವೆಯಾಗಿದ್ದಾರೆ.. ಅವರಿಗೆ ಒಂದು ಮುದ್ದಾದ ಮಗು ಕೂಡ ಇದೆ. ಸದ್ಯ ಕರೀನಾ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ 'ಗುಡ್ ನ್ಯೂಸ್' ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕರೀನಾ, ಯಾವ ನಟನಿಗೆ ತನ್ನ ಮೊಬೈಲ್ ಪಾಸ್ವರ್ಡ್ ಗೊತ್ತು ಎಂಬುದನ್ನು ತಿಳಿಸಿದ್ದಾರೆ.. ಕರೀನಾ ಹಾಗೂ ಅಕ್ಷಯ್ ಮೊದಲಿನಿಂದಲೂ ಗುಡ್ ಪ್ರೆಂಡ್ಸ್ ಆಗಿದ್ದಾರೆ.. ಶೂಟಿಂಗ್ ವೇಳೆ ಕರೀನಾ ಮೊಬೈಲ್ ತೆಗೆದುಕೊಂಡ ಅಕ್ಷಯ್ ಪಾಸ್ವರ್ಡ್ ಗೆಸ್ ಮಾಡಲು ಶುರು ಮಾಡಿದ್ದರಂತೆ. ಎರಡನೇ ಬಾರಿಯೇ ಸರಿಯಾದ ಪಾಸ್ವರ್ಡ್ ಹಾಕಿದ ಅಕ್ಷಯ್, ತುಂಬಾ ಬುದ್ದಿವಂತ ಎಂದು ಕರೀನಾ ತಿಳಿಸಿದ್ದಾರೆ. ಒಟ್ಟಾರೆಯಾಗಿ ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಇದೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ.

Edited By

Manjula M

Reported By

Manjula M

Comments