ನಿಖಿಲ್ ಕುಮಾರ ಸ್ವಾಮಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಹುಡುಗಿ ಈಗ ಯಾರನ್ನ ಮದುವೆಯಾಗ್ತಿದ್ದಾರೆ ಗೊತ್ತಾ..?!!!

04 Apr 2019 1:21 PM | Entertainment
17507 Report

 ಮುಖ್ಯಮಂತ್ರಿ ಕುಮಾರ ಸ್ವಾಮಿ ಮಗ ನಿಖಿಲ್ ಕುಮಾರ ಸ್ವಾಮಿಗೆ ಇನ್ನು ಮದುವೆಯಾಗಿಲ್ಲ. ಇತ್ತೀಚಿಗೆ ಮಂಡ್ಯದಲ್ಲಿ  ಮಾತನಾಡಿದ ಅವರು ಮಂಡ್ಯದಲ್ಲಿ ನನಗೇನಾದರು ಹುಡುಗಿ ಸಿಕ್ಕರೇ ಮದುವೆಯಾಗುತ್ತೇನೆ ಎಂದು ನೀಡಿದ ಹೇಳಿಕೆ ಬಹಳವೇ ವೈರಲ್ ಆಗಿತ್ತು. ಅದಕ್ಕೂ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಹುಡುಗಿಯೊಬ್ಬಳ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆಂಬ ಸುದ್ದಿ ಬಯಲಾಗಿತ್ತು. ಅಲ್ಲದೇ ಫೋಟೋ, ವಿಡಿಯೋ ಕೂಡ ವೈರಲ್ ಆಗಿತ್ತು. ಆಕೆ ಬೇರೆ ಯಾರು ಅಲ್ಲಾ, ನಿಖಿಲ್ ಅವರ ಪ್ರೇಯಸಿಯಾಗಿದ್ದ ಸ್ವಾತಿ ಗೌಡ. ಸದ್ಯ ಆಕೆ ಏನು ಮಾಡುತ್ತಿದ್ದಾರೆ ಗೊತ್ತಾ..?

Image result for swathi gowda engagement

ನಿಖಿಲ್ ಮತ್ತು ಸ್ವಾತಿಗೌಡ ಇಬ್ಬರ ನಿಶ್ಚಿತಾರ್ಥ ಕೂಡ ಭರ್ಜರಿಯಾಗಿಯೇ ನಡೆದಿತ್ತು. ಆದರೆ ಯಾವ ಕಾರಣದಿಂದ ಇಬ್ಬರ ಸಂಬಂಧ ಮುರಿದು ಬಿತ್ತೋ ಗೊತ್ತಿಲ್ಲ. ಸದ್ಯ ನಿಖಿಲ್ ಬೇರೊಬ್ಬ ಹುಡುಗಿಯ ಸರ್ಚಿಂಗ್ ನಲ್ಲಿದ್ದಾರೆ. ತಮ್ಮ ಹಳೆಯ ನಿಶ್ಚಿತಾರ್ಥ ಮತ್ತುಹಳೆಯ ಲವ್  ಬಗ್ಗೆ ನಿಖಿಲ್ ಕುಮಾರ’ಸ್ವಾಮಿ ಅಥವಾ ಸ್ವಾತಿ ಕುಟುಂಬ ಎಲ್ಲೂ ಬಾಯಿ ಬಿಟ್ಟಿಲ್ಲ. ಇನ್ನು ಸ್ವಾತಿ ಗೌಡ ಕನ್ನಡ ಚಿತ್ರರಂಗದ ನಿರ್ಮಾಪಕರಾಗಿರುವ ಕೆಸಿಎನ್ ಗೌಡ ಅವರ ಮೊಮ್ಮಗಳು. ಈಕೆ ಇದೀಗೆ ಬೇರೊಬ್ಬನ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ.

ಆತನ್ಯಾರು ಗೊತ್ತಾ..? ಮಾಜಿ ಮಂತ್ರಿ ಶ್ರೀಕಂಠಯ್ಯ ನವರ ಮೊಮ್ಮಗನಾಗಿರುವ ನಿಹನೇಶ್ ರವಿಕುಮಾರ್ ಜೊತೆ ನಿಖಿಲ್ ಅವರ ಮಾಜಿ ಪ್ರೇಯಸಿ ಸ್ವಾತಿ ಮದುವೆಯಾಗುತ್ತಿದ್ದಾರೆ. ಹೋದ ವರ್ಷ ಇಬ್ಬರ ಎಂಗೇಜ್ ಮೆಂಟ್ ಜೋರಾಗಿಯೇ ನಡೆದಿದೆ, ಪುನೀತ್ ರಾಜ್ ಕುಮಾರ್ ಕೂಡ  ಸ್ವಾತಿ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರಂತೆ. ಚಿತ್ರರಂಗದ ಅನೇಕ ಗಣ್ಯರು  ನಿಶ್ಚಿತಾರ್ಥಕ್ಕೆ ಆಗಮಿಸಿದ್ದಾರೆ. ಇನ್ನು ಈ ವರ್ಷ ಇಬ್ಬರು ಸಪ್ತಪದಿ ತುಳಿಯಲಿದ್ದಾರೆಂಬ ಮಾಹಿತಿ ಬಂದಿದೆ.

Edited By

Kavya shree

Reported By

Kavya shree

Comments