ನನ್ನ ಮೇಲೆ ಆ್ಯಸಿಡ್ ಎರಚಲು ಸಂಚು ನಡೆದಿತ್ತು..!! ಶಾಕಿಂಗ್ ಹೇಳಿಕೆ ಕೊಟ್ಟ ನಟಿ..!!!

04 Apr 2019 10:14 AM | Entertainment
283 Report

ಲೋಕ ಸಮರಕ್ಕ ದಿನಗಣನೆ ಶುರುವಾಗಿರುವ ಹಿನ್ನಲೆಯಲ್ಲಿಯೇ ಪಕ್ಷಗಳ ಮೇಲೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಿದ್ದಾರೆ.. ಇದೀಗ ನನ್ನ ಮೇಲೆ ಆಸಿಡ್ ದಾಳಿ ಸಂಚು ನಡೆದಿತ್ತು ಎಂಬ ಗಂಭೀರ ವಿಷಯವನ್ನು ನಟಿ ಹಾಗೂ ಬಿಜೆಪಿ ಅಭ್ಯರ್ಥಿಯಾದ ಜಯಪ್ರದ ತಿಳಿಸಿದ್ದಾರೆ. ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಜಯಪ್ರದ ಬುಧವಾರ ನಡೆದ ಸಮಾವೇಶವೊಂದರಲ್ಲಿ ಈ ಮಾತನ್ನು ತಿಳಿಸಿದ್ದಾರೆ.

ರಾಂಪುರ ಬಿಟ್ಟು ಹೋಗುವಂತೆ ನನಗೆ ಸಾಕಷ್ಟು ಒತ್ತಡಗಳು ಕೇಳಿಬಂದವು.. ಅಷ್ಟೆ ಅಲ್ಲದೆ ನನ್ನ ಮೇಲೆ ಆಸಿಡ್ ಎರಚಲು ಸಂಚು ನಡೆದಿತ್ತು.  ಆದರೆ ನಾನು ಯಾವುದಕ್ಕೂ ಕೂಡ ಜಗ್ಗಲಿಲ್ಲ.. ನನ್ನ ಜೊತೆ ಬಿಜೆಪಿ ಬೆಂಬಲವಾಗಿ ನಿಂತಿದೆ ಎಂದು ರಾಂಪುರ ಜನತೆಯ ಮುಂದೆ ಜಯಪ್ರದ ತಮ್ಮ ಅಳಲನ್ನು ತೋಡಿಕೊಂಡರು..ಸಮಾಜವಾದಿ ಪಕ್ಷದ ಆಝಂ ಖಾನ್ ಅವರ ವಿರುದ್ದ ಜಯಪ್ರದ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರ ಮದ್ಯೆಯು ಕೂಡ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಸದ್ಯ ರಾಜಕೀಯ ವಲಯದಲ್ಲಿ ಈ ರೀತಿಯ ಮಾತುಗಳು ಸಂಚುಗಳು ನಡೆಯುತ್ತಲೆ ಇರುತ್ತವೆ ಎಂಬುದು ಸಾಕಷ್ಟು ಅಭ್ಯರ್ಥಿಗಳ ಮಾತಾಗಿದೆ.. ಮತಬೇಟೆಗಾಗಿ ಅಭ್ಯರ್ಥಿಗಳು ಈ ರೀತಿ ಮಾತನಾಡುವುದು ಕಾಮನ್ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ.

Edited By

Manjula M

Reported By

Manjula M

Comments