‘ಕಾಂಗ್ರೆಸ್ ನಾಯಕನ ಮೊಮ್ಮಗನ ಜೊತೆ ನಾನ್ ಡೇಟಿಂಗ್ ಮಾಡಿದ್ದೆ’ ತಪ್ಪೇನು..? : ಖ್ಯಾತ ನಟಿ…!

04 Apr 2019 10:07 AM | Entertainment
2136 Report

ಇತ್ತೀಚೆಗೆ ನಟ ಶಾರುಖ್ ಖಾನ್ ಅವರನ್ನು ಅಂಕಲ್ ಎಂದು ಕರೆದು ಭಾರೀ ವಿವಾದಕ್ಕೊಳಗಾಗಿದ್ದ ನಟಿ  ಸಾರಾ ಅಲಿಖಾನ್ ಇದೀಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಸಿನಿಮಾ, ಕ್ರಿಕೆಟ್, ರಾಜಕೀಯದವರು ಒಂದಿಲ್ಲೊಂದು ಸಂಬಂಧದಲ್ಲಿ ಬೆಸೆದುಕೊಂಡಿರುತ್ತಾರೆ. ಈಗ ಅದೇ ನಟಿ,ಶಾರುಖ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸಾರಾ ಕಾಂಗ್ರೆಸ್ ನಾಯಕನ ಮೊಮ್ಮಗನ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಬಾಯಿ ಬಿಟ್ಟಿದ್ದಾಳೆ. ಆ ಲೀಡರ್ ಯಾರು ಅಂತಾ ಗೊತ್ತಾ...?

Image result for sara alikhan with veer pahariya

ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಗೆದ್ದ ನಟಿ ಸಾರಾ ಅಲಿಖಾನ್’ಗೆ ಕೈ ತುಂಬಾ ಸಿನಿಮಾ ಅವಕಾಶಗಳು ಬರುತ್ತಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಲಲ್ಲಿ ಸದಾ ಸಕ್ರೀಯವಾಗಿರುವ ಈಕೆ  ನಿಯತಕಾಲಿಕೆಯ ಸಂದರ್ಶನವೊಂದರಲ್ಲಿ ಭಾಗಿಯಾಗಿದದ್ದರು. ವೋಗ್ ನಿಯತಕಾಲಿಕೆಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮನಸ್ಸು ಬಿಚ್ಚಿ ಸಾರಾ ಮಾತನಾಡಿದ್ದಾಳೆ. ಯಾವುದೇ ಭಯವಿಲ್ಲದೆ, ನಗ್ತಾ ನಗ್ತಾ ಎಲ್ಲ ಪ್ರಶ್ನೆಗಳಿಗೆ ಸಾರಾ ಉತ್ತರ ನೀಡಿದ್ದಾಳೆ.

Image result for sara alikhan with veer pahariya

ಕೊನೆಯದಾಗಿ ಗೂಗಲ್ ನಲ್ಲಿ ಏನು ಹುಡುಕಿದ್ರಿ ಎಂಬ  ಸಂದರ್ಶಕರ ಪ್ರಶ್ನೆಗೆ, ಬೆಳಗಿನ ಜಾವ 3 ಗಂಟೆಗೆ ಮುಂಬೈನ ಮನೋರಿಗೆ ಹೋಗುವುದು ಹೇಗೆ ಎಂಬುದನ್ನು ಸರ್ಚ್ ಮಾಡಿದ್ದೆ. ನಾನಿದ್ದ ಪ್ರದೇಶದಿಂದ ಅದು 1.5 ಕಿಲೋಮೀಟರ್ ದೂರದಲ್ಲಿತ್ತು ಎಂದಿದ್ದಾಳೆ ಸಾರಾ. ಮದುವೆ, ಲವ್, ಡೇಟಿಂಗ್ ವಿಚಾರವಾಗಿ ಹಂಚಿಕೊಳ್ಳಲು ಇಷ್ಟ ಪಡುತ್ತೀರಾ ಎಂದು ಕೇಳಿದ್ರೆ, ಯಾಕಿಲ್ಲ ಖಂಡಿತ ಶೇರ್ ಮಾಡ್ಕೊಳ್ತೀನಿ ಎಂದಿದ್ದಾರೆ.ಕಾಂಗ್ರೆಸ್ ನಾಯಕರ ಮೊಮ್ಮಗನ ಜೊತೆ ಡೇಟಿಂಗ್ ಮಾಡಿದ್ದೇನೆಂದು ಸಾರಾ ಹೇಳಿದ್ದಾಳೆ. ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ವೀರ್ ಪಹಾರಿಯಾ ಜೊತೆ ಡೇಟಿಂಗ್ ಮಾಡಿರೋದನ್ನು ಸಾರಾ ಒಪ್ಪಿಕೊಂಡಿದ್ದಾಳೆ. ಅದರಲ್ಲಿ ತಪ್ಪೇನಿದೆ..ಅಥವಾ ಮುಚ್ಚಿಡೊದೇನಿದೆ ವಿಚಾರ ಬಗ್ಗೆ ಬಿ ಟೌನ್ ನಲ್ಲಿ ಸುದ್ದಿಯಾಗಿತ್ತು.

Edited By

Kavya shree

Reported By

Kavya shree

Comments