ತಮಿಳು ಸಿನಿಮಾಕ್ಕಾಗಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡ  ಬಿಗ್ ಬಿ..!!

03 Apr 2019 4:44 PM | Entertainment
379 Report

ಬಾಲಿವುಡ್ ನ ಸೂಪರ್ ಸ್ಟಾರ್ ಎಂದರೆ ಪಟ್ ಅಂತಾ ನೆನಪಾಗೋದು ಅಮಿತಾಬ್ ಬಚ್ಚನ್.. ಬಿಗ್ ಬಿ ಈಗಲೂ ವಯಸ್ಸಿನ ಹುಡುಗನಂತೆ ನಟನೆ ಮಾಡುತ್ತಾರೆ. ಅವರ ನಟನೆಯನ್ನು ನೋಡಿ ಯುವ ನಾಯಕರು ತಲೆ ತಗ್ಗಿಸಲೇ ಬೇಕು ಬಿಡಿ.. ಆ ರೀತಿ ನಟನೆ ಮಾಡುತ್ತಾರೆ. ಇದೀಗ ಬಿಗ್ ಬಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಮಿತಾಬ್, ಸಿನಿಮಾದಲ್ಲಿ ನಟಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮಿಳು ಸಿನಿಮಾದ ಪಾತ್ರ ಮಾಡಿದ ಎರಡು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಬಿಗ್ ಬಿ ವಯಸ್ಸಾದಂತೆ ನಿಮ್ಮನ್ನ ಗುರುತಿಸುವವರ ಸಂಖ್ಯೆಯೂ ಸಹ ಕಡಿಮೆ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ. ತಮಿಳು ಸಿನಿಮಾಕ್ಕಾಗಿ ಅಮಿತಾಬ್ ಬಚ್ಚನ್ 40 ದಿನಗಳ ಕಾಲ್ ಶೀಟ್ ಕೊಟ್ಟಿದ್ದರು. ಅದರೆ ಇದೀಗ ಅದಕ್ಕಿಂತ ಮುಂಚೆ ಬಚ್ಚನ್ ನಟನೆಯ ಭಾಗ ಭಾಗಶಃ ಮುಗಿಯುತ್ತಾ ಬಂದಿದೆ ಎನ್ನಲಾಗಿದೆ.. ತಮಿಳು ಸಿನಿಮಾದಲ್ಲಿ ಅಮಿತಾಬ್ ಪಂಚೆ ಧರಿಸಿದ್ದಾರೆ. ಹಣೆಯ ತುಂಬ ವಿಭೂತಿ, ಅದರ ಮಧ್ಯೆ ಶ್ರೀಗಂಧವನ್ನು ಹಚ್ಚಿಕೊಂಡು ಸಾಂಪ್ರದಾಯಿಕ ತಮಿಳು ನಟನ ಹಾಗೆ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ನಟ ಎಸ್.ಜೆ. ಸೂರ್ಯ ಸಹ ಅಮಿತಾಬ್ ಬಚ್ಚನ್ ಜೊತೆ ನಟನೆ ಮಾಡುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಾನು ತಮಿಳು ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಬರುವ ಮುಂಚೆ ಅಮಿತಾಬ್ ರ ಜೊತೆ ನಟಿಸುವ ಕನಸು ಕಂಡಿದ್ದೆ, ಅದು ಇಂದು ಕೈಗೂಡಿದೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಅಮಿತಾಬ್ ಕನ್ನಡದಲ್ಲಿಯೂ ಕೂಡ ಸಿನಿಮಾ ಮಾಡಿದ್ದಾರೆ.. ಅಮಿತಾಬ್ ಅಷ್ಟು ಎತ್ತರದ ಹೀರೋ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಯಾರು ಇಲ್ಲ ಎನ್ನಬಹುದು.  ಇದೀಗ ಬಿಗ್ ಬಿ ತಮಿಳಿನಲ್ಲಿಯೂ ಕೂಡ ಕಮಾಲ್ ಮಾಡಲು ಮುಂದಾಗಿದ್ದಾರೆ. ಅವರ ನಟನೆಗೆ ಪಿಧಾ ಆಗದವರೆ ಇಲ್ಲ ಎನ್ನಬಹುದು.

Edited By

Manjula M

Reported By

Manjula M

Comments