ತನ್ನ ಬೆತ್ತಲೆಯ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸ್ಟಾರ್ ನಟಿ..!!

03 Apr 2019 9:47 AM | Entertainment
2593 Report

ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಇಡೀ ಟಾಲಿವುಡ್’ನ್ನೇ ನಡುಗಿಸಿದ ನಟಿ ಶ್ರೀ ರೆಡ್ಡಿ ಮತ್ತೆ ಮತ್ತೆ  ಸುದ್ದಿಯಾಗುತ್ತಿದ್ದಾರೆ.. ಟಾಲಿವುಡ್ ನ ಅನೇಕ ಸ್ಟಾರ್ ಗಳ  ಮೇಲೆ ಕಾಸ್ಟಿಂಗ್ ಕೌಚ್  ಆರೋಪವನ್ನು ಮಾಡಿದ್ದರು. ಅಷ್ಟೆ ಅಲ್ಲದೆ ಅರೆ ಬೆತ್ತಲೆ ಧರಣಿಯನ್ನು ಕೂಡ ಮಾಡಿದ್ದರು… ಅದೇ ಶ್ರೀರೆಡ್ಡಿ ಇದೀಗ ಮತ್ತೆ ಬೆತ್ತಲೆಯಾಗಿ ಸುದ್ದಿಯಾಗಿದ್ದಾರೆ. ಟಾಲಿವುಡ್ ನಟಿ ಶ್ರೀರೆಡ್ಡಿ, ಸೋಷಿಯಲ್ ಮಿಡೀಯಾದಲ್ಲಿ ಬೆತ್ತಲೆ ಫೋಟೋ ಹಂಚಿಕೊಂಡಿದ್ದಾರೆ.ನೆಟ್ಟಿಗರಿಗೆ ಶಾಕ್ ನೀಡುವ ಫೋಟೋ ಪೋಸ್ಟ್ ಮಾಡಿರುವ ಶ್ರೀರೆಡ್ಡಿ, ನಾವೇನು ಲೈಂಗಿಕ ಗುಲಾಮರಲ್ಲ, ಸಿನಿಮಾ ರಂಗದಲ್ಲಿ ಕೆಲಸ ಮಾಡಲು ಬಂದಿದ್ದೇವೆ. ಅವಕಾಶಕ್ಕಾಗಿ ಯಾಕೆ ಸೆಕ್ಸ್ ಮಾಡಬೇಕು. ಇಂತಹ ಬೆಳವಣಿಗೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂಬ ಆಸೆಯಿಂದ ಅವಕಾಶ ಕೇಳಿಕೊಂಡು ಸಿನಿಮಾ ಕ್ಷೇತ್ರಕ್ಕೆ ಬರುವ ಯುವತಿಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.. ಶ್ರೀರೆಡ್ಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ. ಆದರೆ, ಅವರು ಪ್ರತಿಭಟನೆಗೆ ಆಯ್ದುಕೊಂಡ ಮಾರ್ಗದ ಬಗ್ಗೆ ಸಾಕಷ್ಟುಟೀಕೆ ವ್ಯಕ್ತವಾಗಿದೆ. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ನಟಿ  ಶ್ರೀರೆಡ್ಡಿ ಮಾತ್ರ ತನ್ನ ಪ್ರತಿಭಟನೆಯನ್ನು ಮುಂದುರೆಸುತ್ತಿದ್ದಾರೆ.  

ನಟಿ ಶ್ರೀ ನಟಿಯ ಬೆತ್ತಲೆ ಪೋಟೋ ಗೆ ಕಾಮೆಂಟ್ ಹಾಕುವವರಿಗೆ  ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದಾರೆ. ಸಿನಿಮಾರಂಗದಲ್ಲಿ ನಟಿಯರಿಗೆ ಆಗಿರುವ ನೋವಿಗೆ ಹೋಲಿಸಿದಾಗ ಈ ಯಾವ ಕಾಮೆಂಟ್’ಗಳು ಕೂಡ ಲೆಕ್ಕಕ್ಕಿಲ್ಲ.. ಚಿತ್ರರಂಗದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿ, ಫೋಟೋ ಬಗ್ಗೆ ಅಲ್ಲ ಎಂದು ತಿಳಿಸಿದ್ದಾರೆ.. ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಧನಿ ಎತ್ತಿ ಮಾತನಾಡಿ ಎಂದಿದ್ದಾರೆ.

Edited By

Manjula M

Reported By

Manjula M

Comments