ಕುಡಿದು ಕಾರು ಚಲಾಯಿಸಿ , ಪೊಲೀಸರ ಮೇಲೆ ಹಲ್ಲೆ ನಡೆಸಿದ ಖ್ಯಾತ ನಟಿ..!!!

02 Apr 2019 1:51 PM | Entertainment
639 Report

ಕುಡಿದು  ಕಾರು ಚಲಾಯಿಸಿದ್ದಲ್ಲದೇ , ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಕೆನ್ನೆಗೆ ಬಾರಿಸಿದ ಆರೋಪದ ಮೇಲೆ ನಟಿ, ಮಾಡೆಲ್  ರೂಹಿ ಸಿಂಗ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಟಿ ರೂಹಿ, ಗೆಳೆಯರಾದ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ನಟಿಗೆ ನೊಟೀಸ್ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

Image result for actress ruhi singh

ಸೋಮವಾರ ರಾತ್ರಿ ರೂಹಿ ಸಿಂಗ್ ತನ್ನ ನಾಲ್ವರು ಗೆಳೆಯರೊಂದಿಗೆ ಮುಂಬೈನ ಪಬ್ವೊಂದರಿಂದ  ಮನೆಗೆ ಹಿಂದಿರುಗಿತ್ತಿದ್ದರು. ತಡರಾತ್ರಿ ಬಾಂದ್ರಾದಲ್ಲಿರುವ ಮಾಲ್ ಬಳಿ ಕಾರ್ ನಿಲ್ಲಿಸಿದ್ದಾರೆ. ಶೌಚಾಲಯ ಬಳಸಬೇಕೆಂದು ಮಾಲ್ ಒಳಗಡೆ ಹೋಗಲು ಪ್ರಯತ್ನಿಸಿದ್ದಾರೆ. ತಡರಾತ್ರಿಯಾದ ಹಿನ್ನೆಲೆಯಲ್ಲಿ ಮಾಲ್ ಭದ್ರತಾ ಸಿಬ್ಬಂದಿ ನಟಿಗೆ ಪ್ರವೇಶ ನಿರಾಕರಿಸಿದ್ದಾರೆ. ಪ್ರವೇಶ ನಿರಾಕರಿಸಿದ್ದರಿಂದ ನಟಿ ಮತ್ತು ಸಿಬ್ಬಂದಿ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಭದ್ರತಾ ಸಿಬ್ಬಂದಿಯ ಮೇಲೆ ರಾಹುಲ್ ಮತ್ತು ಆತನ ಗೆಳೆಯ ವಾಗ್ವಾದಕ್ಕಿಳಿದಿದ್ದಾರೆ. ಇವರನ್ನು ನಿಯಂತ್ರಿಸಕ್ಕಾಗದ ಸಿಬ್ಬಂದಿಯವರು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಂತೇ ಅವರ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ. ಅಧಿಕಾರಿಗಳ ಮೇಲೆ ಕೈ ಮಾಡಿರುವ ವಿಡಿಯೋ ಮಾಲ್ ಮುಂಬಾಗ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಪೊಲೀಸರು ನಟಿ ರೂಹಿ ಮತ್ತು ಇಬ್ಬರು ಗೆಳೆಯರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಿ, ರಾಹುಲ್ ಹಾಗೂ ಸ್ವಪ್ನಿಲ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ಹತ್ತುತ್ತಿದ್ದಂತೇ ನಟಿ ರೂಹಿ ಅಲ್ಲಿಯೇ ನಿಲ್ಲಿಸಲಾಗಿದ್ದ ವಾಹಕ್ಕೆ ಡಿಕ್ಕಿ ಹೊಡೆದರೆನ್ನಲಾಗಿದೆ.. ಈ ಸಂಬಂಧ ಅತಿ ವೇಗ ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪರಮಜಿತ್ ಸಿಂಗ್ ತಿಳಿಸಿದ್ದಾರೆ.ಅಂದಹಾಗೇ ಈ ಕುರಿತು ಸ್ಪಷ್ಟನೆ ನೀಡಿರುವ ರೂಹಿ ಸಿಂಗ್ ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅಲ್ಲಿದ್ದ ಮಹಿಳೆ ನನ್ನ ಹೆಸರು ಬಳಸಿಕೊಂಡಿದ್ದಾರೆ. ನಾನು ಯಾವುದೇ ಪಬ್ ಗೆ ಹೋಗಿಲ್ಲ. ವಿಡಿಯೋದಲ್ಲಿ ಇರುವುದು ನಾನಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ತಮ್ಮ ಪೇಸ್ ಬುಕ್ ಮುಖಾಂತರ ಹೇಳಿಕೊಂಡಿದ್ದಾರೆ.

Edited By

Kavya shree

Reported By

Kavya shree

Comments