ನಟಿ ತಾರಾ ವಿರುದ್ಧ ಡಾ. ರಾಜ್ ಅಭಿಮಾನಿಗಳ ಆಕ್ರೋಶ…!!!

02 Apr 2019 10:09 AM | Entertainment
4093 Report

ಅದ್ಯಾಕೋ ಈ ಬಾರಿ ರಾಜ್ ಕುಟುಂಬದವರು ಮತ್ತು ರಾಜ್ ಅವರ ಹೆಸರು ಲೋಕ ಸಭೆ ಚುನಾವಣೆಯಲ್ಲಿ ತಳುಕು ಹಾಕಿಕೊಂಡಿದೆ. ಅಂದಹಾಗೇ ರಾಜ್ ಅವರ ಬಗ್ಗೆ ಮಾತನಾಡಿ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ ನಟಿ ತಾರಾ. ಮೊನ್ನೆಯಷ್ಟೇ ಬಿಜೆಪಿ ನಾಯಕಿ ತಾರಾ ಮೋದಿಯವರ ಪರ ಚುನಾವಣೆಯಲ್ಲಿ ಭಾಗಿಯಾಗಿದ್ದಾಗ ರಾಜ್ ಕುಮಾರ್ ಹೆಸರು ಬಳಕೆ ಮಾಡಿಕೊಂಡಿದ್ದರಿಂದ ರಾಜ್ ಅಭಿಮಾನಿಗಳಿಗೆ ಕೋಪಕ್ಕೆ ತುತ್ತಾಗಿದ್ದಾರೆ.

ಹಾಸನದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ 'ಕರ್ನಾಟಕಕ್ಕೆ ಡಾ ರಾಜ್ ಇದ್ದಂತೇ ದೇಶಕ್ಕೆ ಮೋದಿ ಮಹಾನ್ ನಾಯಕ  ಎಂದು', ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ತಾರಾ ಅವರ ಈ ಹೇಳಿಕೆಯೇ ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದು ರಾಜ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರಾಜ್ ಕುಮಾರ್ ಕುಟುಂಬ ರಾಜಕಾರಣದಿಂದ ದೂರವಿದೆ. ಡಾ. ರಾಜ್ ಗೆ ರಾಜಕೀಯ ಇಷ್ಟವಿರಲಿಲ್ಲ. ಹಾಗಾಗಿ ಯಾವ ಪಕ್ಷದ ಪರವೂ ಪ್ರಚಾರ ನಡೆಸದೇ ಕೇವಲ ಕನ್ನಡ ಭಾಷೆ, ಕಲೆಗೆ ಒತ್ತು ಕೊಟ್ಟ ಮಹಾನ್ ಕಲಾವಿದ. ವಿನಾಕಾರಣ ನಿಮ್ಮ ರಾಜಕೀಯ ತೆವಲುಗಳಿಗೆ ರಾಜ್ ಹೆಸರನ್ನು ಯಾಕೆ ಎಳೆದುತರುತ್ತೀರಾ? ರಾಜ್ ಕುಮಾರ್ ಅವರಿಗೆ ನಿಮ್ಮ ಯಾವ ರಾಜಕೀಯ ನಾಯಕರೂ ಸಮರಾಗಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತಾರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By

Kavya shree

Reported By

Kavya shree

Comments