ಮಾಜಿ ಪ್ರಿಯಕರನೊಂದಿಗೆ ರೊಮ್ಯಾನ್ಸ್ ಮಾಡೋಕೆ ನಾನ್ ರೆಡಿ ಎಂದ ಡಿಪ್ಪಿ...!

01 Apr 2019 11:17 AM | Entertainment
2683 Report

ಅಂದಹಾಗೇ  ನಟಿ ದೀಪಿಕಾ ಪಡುಕೋಣೆ ಕೆಲವು ದಿನ ಮೆಂಟಲಿ ಡಿಸ್ಟರ್ಬ್ ಆಗಿದ್ದ ವಿಚಾರ ಗೊತ್ತೇ ಇದೆ, ಅದೇನೆ ಇರಲಿ. ಕನ್ನಡದಿಂದ ಆಗ ತಾನೇ ಬಾಲಿವುಡ್ ಗೆ ಎಂಟ್ರಿ ಕೊಟ್ಟ ದೀಪಿಕಾ ಕೆಲವೇ ದಿನಗಳಲ್ಲಿ ಖ್ಯಾತಿಯ ತುತ್ತ ತುದಿಗೆ ಏರಿದಳು. ಸದ್ಯ ಟ್ರೆಂಡಿಂಗ್ ಹೀರೋಯಿನ್, ಡಿಮ್ಯಾಂಡ್ ನಾಯಕಿ ಸದ್ಯ ಮದುವೆಯಾಗಿ ಸುಂದರವಾದ ಜೀವನ ನಡೆಸುತ್ತಿದ್ದಾರೆ. ಆದರೆ ಇದೇನಿದು ಹೊಸ ವಿಚಾರ, ಡಿಪ್ಪಿ ಮದುವೆಯಾದ ಗಂಡನನ್ನು ಬಿಟ್ಟು  ಮಾಜಿ ಪ್ರಿಯಕರನೊಂದಿಗೆ ರೊಮ್ಯಾನ್ಸ್ ಮಾಡೋಕೆ ಶುರುವುಟ್ಟುಕೊಂಡಳಾ..? ಹೀಗೊಂದು ಸುದ್ದಿ ಬಾಲಿವುಡ್ ಹಬ್ಬಿದೆ.

Image result for ranbir kapoor with deepikaಮದುವೆಗೂ ಮುನ್ನ ಕ್ಯೂಟಿ ಬ್ಯೂಟಿ ದೀಪಿಕಾ ಪಡುಕೋಣೆ- ರಣಬೀರ್​ ಜೊತೆ  ಸುತ್ತಾಡುತ್ತಿದ್ದ ವಿಚಾರ ಏನು ಗುಟ್ಟಾಗಿ ಉಳಿದಿರಲಿಲ್ಲ. ಲವ್ ಡೇಟಿಂಗ್ ಅಂತಾ ಸಿಕ್ಕಾಪಟ್ಟೆ ಸುತ್ತಾಡುತ್ತಿದ್ದ ಈ ಕಪಲ್ ಒಂದಷ್ಟು ದಿನ ,ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದರು. ಇಬ್ಬರ ಮಧ್ಯೆ ಕುಚ್ ಕುಚ್ ನಡೀತಿದೆ ಎಂದು ಬಹಿರಂಗವಾಗಿದ್ರೂ ಇಬ್ರೂ ಮಾತ್ರ ಇದನ್ನು  ಒಪ್ಪಿಕೊಳ್ಳಲು ರೆಡಿಯಿರಲಿಲ್ಲ. ಫ್ರೆಂಡ್ಸ್ ಅಂತಾನೇ ಹೇಳಿಕೊಂಡಿದ್ದರು. ಆನ್ ಸ್ಕ್ರೀನ್ ನಲ್ಲಿ ಲವ್ವಿ-ಡವ್ವಿ ಅಂತಾ  ಶುರುವಿಟ್ಟುಕೊಂಡಿದ್ದ ಈ ಕಪಲ್  ಆಫ್ ಸ್ಕ್ರೀನ್ ನಲ್ಲಿ ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಅದೂ ಗಟ್ಟಿಯಾಗುವ ಮೊದಲೇ ಇಬ್ಬರು ದೂರ ದೂರವಾದರು. ಲವ್ ಬ್ರೇಕಪ್ ಆಯ್ತು ಎಂಬ ಸುದ್ದಿ ಬಿ ಟೌನ್ ನಲ್ಲಿ ಜೋರು ಸದ್ದು ಮಾಡಿತ್ತು. ಡಿಪ್ಪಿ ಮನಸು ರಣವೀರ್​​ಗೆ ಯಾವಾಗ ಸೋತು ಹೋಯಿತೋ ಆಗ ರಣಬೀರ್ ದೇವದಾಸ್​ ಆಗಿದ್ದು ಗೊತ್ತೆ ಇದೆ.

Image result for ranbir kapoor with deepika padukone

'ತಮಾಷಾ' ಚಿತ್ರದಲ್ಲಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡು ರೋಮ್ಯಾನ್ಸ್ ಮಾಡಿ ರಂಜಿಸಿದ್ದ ಈ ಜೋಡಿ ಮತ್ತೆ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಇಬ್ಬರ ಕೆಮಿಸ್ಟ್ರಿಗೆ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದರು. ಇವರಿಬ್ಬರ ಕಾಂಬಿನೇಷನ್ ನ ರೊಮ್ಯಾನ್ಸ್  ಮಿಸ್ ಮಾಡ್ಕೊಳ್ತಿದ್ದ ಅಭಿಮಾನಿಗಳಿಗೆ ಈ ಸ್ಟಾರ್ ಗಳು ಗುಡ್ ನ್ಯೂಸ್ ವೊಂದನ್ನು ಕೊಟ್ಟಿದ್ದಾರೆ.ಮಾಜಿ ಪ್ರಿಯಕರನ ಜೊತೆ ಡಿಪ್ಪಿ ಮತ್ತೆ ಸ್ಕೀನ್ ಶೇರ್ ಮಾಡ್ತಿದ್ದಾರೆ. ಸತತ ಮೂರು ವರ್ಷಗಳ ನಂತರ ಈ ಜೋಡಿ ತೆರೆ ಮೇಲೆ ರೊಮ್ಯಾನ್ಸ್​ ಮಾಡಲು ಸಜ್ಜಾಗಿದೆ ಅನ್ನೋದು ಬಿಟೌನ್​ ಅಂಗಳದ ಲೇಟೆಸ್ಟ್ ಸಮಾಚಾರ. ಆದರೆ ಈ ವಿಚಾರ ಬಹಳಷ್ಟು ಕನ್ಫರ್ಮ್ ಆಗಿದ್ರೂ ಈ ಸ್ಟಾರ್ ಗಳು ಮಾತ್ರ ತುಟಿಕ್ ಪಿಟಿಕ್ ಎಂದು  ಹೇಳ್ತಿಲ್ಲ. ಆದರೆ  ಬಿ ಟೌನ್ ನ ಜಗತ್ತಿನಲ್ಲಿ ಲವ್, ಬ್ರೇಕಪ್, ಪ್ಯಾಚಪ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಸದ್ಯಕ್ಕಂತೂ ಈ ಸುದ್ದಿ ಕೇಳಿ ಡಿಪ್ಪಿ ಅಭಿಮಾನಿಗಳು  ದಿಲ್ ಖುಷ್ ಆಗಿದ್ದಾರೆ.

Edited By

Kavya shree

Reported By

Kavya shree

Comments