ಅರ್ಧ ಗಂಟೆಯಲ್ಲಿ ವಾಪಸ್ ಬರುವುದಾಗಿ ಹೇಳಿ ಹೋಗಿದ್ದ ಮಾಡೆಲ್ ಶವವಾಗಿ ಪತ್ತೆ…!!!

01 Apr 2019 10:10 AM | Entertainment
960 Report

ದೇಶದ ವಿವಿಧೆಡೆ ನಿಗೂಢವಾಗಿ ಒಂದಷ್ಟು ಜನ ಮಾಡೆಲ್ ಗಳು ಸಾವನಪ್ಪಿರುವುದರ ಬಗ್ಗೆ ನಾವು ನೋಡಿದ್ದೇವೆ, ಕೇಳಿದ್ದೇವೆ. ಇಂತಹ  ಪ್ರಕರಣಗಳ ಬೆನ್ನಲ್ಲೇ ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ಆಕೆ ಯಾರು, ಎಲ್ಲಿಯವಳು ಎಂದು ವಿಚಾರಿಸಿದಾಗ ಮಾಡೆಲ್ ಎಂದು ಗೊತ್ತಾಗಿದೆ. ಮನೆಯಲ್ಲಿಯೇ ಇದ್ದವಳನ್ನು ಕರೆಸಿ ಕೊಲೆ ಮಾಡಲಾಗಿದೆ.

ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ  ಮಾಡಲ್ ಶವ ಕೆರೆಯಲ್ಲಿ ಪತ್ತೆಯಾದ ಘಟನೆ  ಜಾರ್ಖಾಂಡ್ ನ ದಂಥಾರಿ ಜಿಲ್ಲೆಯಲ್ಲಿ  ನಡೆದಿದೆ. ದಂಥಾರಿ ನಿವಾಸಿ  ಅಂಚಲ್ ಯಾದವ್ (32) ಮಾಡೆಲಿಂಗ್ ಜೊತೆ ವಿಮಾ ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು ಆದರೆ ಆಕೆಗೆ ಏನಾಯ್ತು ಎಂದು ಗೊತ್ತಿಲ್ಲ   ಕೆಲ ಸಮಯ ಕಣ್ಮರೆಯಾಗಿದ್ದ ಅಂಚಲ್ ದಿಢೀರ್ ಅಂತಾ ಶವವಾಗಿ ಪತ್ತೆಯಾಗಿದ್ದಾಳೆ. ನಗರದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪಾರ್ಟಿ ನಡೆದರೂ ಅಲ್ಲಿಗೆ ಅಂಚಲ್ ಕೂಡ ಆಗಮಿಸುತ್ತಿದ್ದಳು.

ರಾಯ್‍ಪುರದಿಂದ ದಾಂಥರಿ ನಿವಾಸಕ್ಕೆ ಅಂಚಲ್‍ ಬಂದಿದ್ದರು. ಇದೇ ವೇಳೆ ಆಕೆಗೆ ಒಂದು ಫೋನ್ ಕರೆ ಬಂದಿದ್ದು ಮನೆಯಿಂದ ಹೊರಗೆ ಹೋದ ಅಂಚಲ್ ಶವ ಪತ್ತೆಯಾಗಿದೆ. ಅರ್ಧ ಗಂಟೆಯಲ್ಲಿ ಮನೆಗೆ ಬರುವುದಾಗಿ ತಾಯಿ ಬಳಿ ಅಂಚಲ್ ಹೇಳಿ ಹೋಗಿದ್ದರು.ಆದರೆ ಆಕೆಯ ಕೈ- ಕಾಲು ಹಾಗೂ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಈಕೆಯನ್ನು ಕೊಲೆ ಮಾಡಲಾಗಿದೆ. ಅಂಚಲ್ ಬೇರೆವರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಳು. ಆಕೆಯನ್ನು ದ್ವೇಷದಿಂದ ಕೊಲ್ಲುವವರು ಯಾರಿದ್ದಾರೆ  ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಅಂಚಲ್ ಸ್ನೇಹಿತರು. ಆದರೆ ಕುಟುಂಬಸ್ಥರು ಬೇರೆ ರೀತಿಯಲ್ಲಿಯೇ ಅಂಚಲ್ ಕೊಲೆಯನ್ನು ಅಭಿಪ್ರಾಯಿಸಿದ್ದಾರೆ. ಮಗಳು ಮನೆಯಿಂದ ಹೇಳಿ ಹೋದಳು. ಆದರೆ ಹೆಣವಾಗಿ ಮನೆಗೆ ಬಂದಳು ಎಂದು ರೋಧಿಸುತ್ತಾರೆ. ಇದು ಪರಿಚಯಸ್ಥನಿಂದಲೇ ಆಕೆಯ ಕೊಲೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಇನ್ನು 2014ರಲ್ಲಿ ಬರನಾವಾಪಾರಾದಲ್ಲಿ ಅರಣ್ಯ ಅಧಿಕಾರಿಗೆ ಅಶ್ಲೀಲ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದ ಆರೋಪದ ಅಡಿಯಲ್ಲಿ ಅಂಚಲ್ ಳನ್ನು ಬಂಧಿಸಲಾಗಿತ್ತು.

Edited By

Kavya shree

Reported By

Kavya shree

Comments