ಮತ್ತೆ ಒಟ್ಟಿಗೆ ಸಿನಿಮಾ ಮಾಡ್ತಾರಂತೆ ರಾಕಿಂಗ್ ಜೋಡಿ..!!

01 Apr 2019 9:55 AM | Entertainment
132 Report

ರಾಕಿಂಗ್ ಜೋಡಿ ತೆರೆ ಮೇಲೆ ಬಂದರೆ ಸಾಕು ಅಭಿಮಾನಿಗಳು ಪುಲ್ ಖುಷಿಯಾಗುತ್ತಿದ್ದರು.. ತೆರೆಮೇಲೆ ಯಶ್ ಮತ್ತು ರಾಧಿಕ ಜೋಡಿ ಮೋಡಿ ಮಾಡಿದ್ದಂತೂ ಸುಳ್ಳಲ್ಲ…  ಇಬ್ಬರ ಕಾಂಬೀನೇಷನ್ ನಲ್ಲಿ ಮೂಡಿ ಬಂದ ಸಿನಿಮಾವನ್ನು ನೋಡೋಕ್ಕೆ ಒಂದು ಚಂದ.. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿದವರು ಮೇಡ್ ಫಾರ್ ಈಚ್ ಅದರ್ ಅಂದ್ರು… ತದ ನಂದರ ಬಂದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್.. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ,ಸಂತೂ ಸ್ಟ್ರೈಟ್ ಫಾರ್ವಡ್ ಹೀಗೆ ಸಿನಿಮಾಗಳು ಅವರಿಬ್ಬರ ಪಾಲಿಗೆ ಯಶಸ್ಸನ್ನು ತಂದು ಕೊಟ್ಟವು.. ಮಗು ಆದ ಮೇಲೆ ಸ್ಯಾಂಡಲ್ ವುಡ್ ನಿಂದ ದೂರ ಉಳಿದಿರುವ  ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ಮತ್ತೆ ಬಣ್ಣ ಹಚ್ಚುತ್ತಾರಂತೆ…

ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿದ್ದು ಒಂದೇ ಸಿನಿಮಾ. ಅದೂ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಪತಿ ಯಶ್ ಜತೆಗೆ ರಾಧಿಕಾರನ್ನು ಇನ್ನು ತೆರೆ ಮೇಲೆ ನೋಡಬೇಕು ಎನ್ನುವ ಅಭಿಮಾನಿಗಳ ಹಂಬಲ ಕಡಿಮೆಯಾಗಿಲ್ಲ. ಮಗಳು ಹುಟ್ಟಿದ ಮೇಲೆ ಸಂಪೂರ್ಣವಾಗಿ ಕೆಲವು ಕಾಲ ಚಿತ್ರರಂಗದಿಂದ ದೂರವಿರುವ ರಾಧಿಕಾ ಇದೀಗ ನಿನ್ನೆ ನಡೆದ ಕೆಜಿಎಫ್ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಮಾಧ್ಯಮಗಳಿಗೆ ಎದುರಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮತ್ತೆ ಯಶ್ ಜತೆಗೆ ನಟಿಸ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ 'ಖಂಡಿತಾ. ಅಂತಹದ್ದೊಂದು ಸ್ಕ್ರಿಪ್ಟ್ ಬಂದು ಅದಕ್ಕೆ ನಮ್ಮ ಅಗತ್ಯವಿದೆ ಎನಿಸಿದರೆ ನಟಿಸುತ್ತೇವೆ. ಇದುವರೆಗೆ ಹಲವು ಅಂತಹ ಆಫರ್ ಗಳು ಬಂದಿವೆ. ಆದರೆ ಕತೆ ನಮಗೆ  ಒಪ್ಪಿಗೆಯಾಗದೇ ಬೇಡ ಅಂತ ಬಿಟ್ಟಿದ್ದೀವಿ' ಎಂದು ರಾಧಿಕಾ ತಿಳಿಸಿದ್ದಾರೆ.   ಮುಂದೊಂದು ದಿನ ರಾಕಿಂಗ್ ಜೋಡಿಯನ್ನು ತೆರೆ ಮೇಲೆಯ ನೋಡಿ ಅಭಿಮಾನಿಗಳು ಖುಷಿ ಪಡಬಹುದು.

Edited By

Manjula M

Reported By

Manjula M

Comments