ಅಯ್ಯೋ..!! ಮದುವೆಗೆ ಮೊದಲೇ ತಾಯಿಯಾಗುತ್ತಿರುವ ‘ದಿ ವಿಲನ್’ ನಾಯಕಿ..!!

01 Apr 2019 9:45 AM | Entertainment
2916 Report

ಸ್ಯಾಂಡಲ್ ವುಡ್ ನಲ್ಲಿ ತುಂಬಾ ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿದ ಚಿತ್ರ ಎಂದರೆ ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್.. ದಿ ವಿಲನ್ ಸಿನಿಮಾವನ್ನು ನೋಡಲು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದರು. ಬಿಡುಗಡೆಯಾದ ಮೇಲೆ ಅದ್ಯಾಕೋ ಗೊತ್ತಿಲ್ಲ ಆ ಸಿನಿಮಾ ಅಷ್ಟು ಸುದ್ದಿನೂ ಮಾಡಿಲ್ಲ, ಸದ್ದುನೂ ಮಾಡಿಲ್ಲ…  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿರುವ 'ದಿ ವಿಲನ್' ಚಿತ್ರದ ನಾಯಕಿ ಆಮಿ ಜಾಕ್ಸನ್ ಇದೀಗ ಗರ್ಭಿಣಿಯಾಗಿದ್ದಾರೆ.

ಅಯ್ಯೋ ಅವರಿಗೆ ಮದುವೆ ಆಗೋಯ್ತ, ಯಾವಾಗ ಆಯ್ತು ಅಂತಿದ್ದೀರಾ…? ಮದುವೆಯ ಮೊದಲೇ ಆಕೆ ಗರ್ಭಿಣಿಯಾಗಿರುವುದು ಅಭಿಮಾನಿಗಳ ತಲೆ ಸುತ್ತುವಂತೆ ಮಾಡಿದೆ. ತಾಯಂದಿರ ದಿನವೇ ಗರ್ಭಿಣಿಯಾಗಿರುವುದು ನನಗೆ ತಿಳಿಯಿತು. ನಮ್ಮ ಮಗುವಿನೊಂದಿಗೆ ನಿಮ್ಮ ಎದುರು ಕಾಣಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಹಾಲಿವುಡ್ ಮೂಲದ ನಟಿ ಅಮಿ ಜಾಕ್ಸನ್ ಭಾರತದಲ್ಲಿ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ದಿ ವಿಲನ್' ತಮಿಳಿನ 'ಐ', '2.0' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಜಾಲತಾಣದಲ್ಲಿ ಹಾಕಿದ್ದ ಹಂಚಿಕೊಂಡಿದ್ದರು. . 2020 ರಲ್ಲಿ ಅವರು ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು.. ಆದರೆ, ದಿಢೀರ್ ಆಗಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್’ವೊಂದನ್ನು ಕೊಟ್ಟಿದ್ದಾರೆ. ಅದೃಷ್ಟ ಎನ್ನುವಂತೆ ತಾಯಂದಿರ ದಿನವೇ ನಾನು ಗರ್ಭಿಣಿಯಾಗಿರುವುದು ನನಗೆ ತಿಳಿದು ಬಂದಿದೆ. ಆದಷ್ಟು ಬೇಗ ನಮ್ಮ ಮಗುವಿನೊಂದಿಗೆ ನಿಮ್ಮ ಎದುರು ಬರುತ್ತೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಮದುವೆಗೆ ಮೊದಲೇ ತಾಯಿಯಾಗುತ್ತಿರುವದನ್ನು ಕೆಲವರು ಟೀಕಿಸುತ್ತಿದ್ದಾರೆ.

Edited By

Manjula M

Reported By

Manjula M

Comments