ಶತದಿನಗಳ ಸಂಭ್ರಮದಲ್ಲಿ ಕೆಜಿಎಫ್ .....

30 Mar 2019 4:55 PM | Entertainment
271 Report

ಕನ್ನಡ ಚಿತ್ರೋದ್ಯಮವನ್ನು ರಾಷ್ಟ್ರ ಮಟ್ಟದಲ್ಲಿ ಗುರಿತಿಸಿಕೊಳ್ಳುವಂತೆ ಮಾಡಿದ್ದು ಯಶ್ ಅವರ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ.   ಬೇರೆ ಭಾಷೆಯವರು ಕನ್ನಡತ್ತ ತಿರುಗಿ ನೋಡುವಂತೆ ಮಾಡಿದ್ದು  ಕೆಜಿಎಫ್ ಸಿನಿಮಾ.ಕನ್ನಡಿಗರ ಐಡೆಂಟಿಟಿ ಕಾರ್ಡ್ ಎಂದರೂ ತಪ್ಪಾಗಲಾರದು. ಇಂದಿಗೆ ಶತದಿನಗಳನ್ನು ಪೂರೈಸಿ  ಮುನ್ನುತ್ತಿರುವ ಕೆಜಿಎಫ್, ಚಿತ್ರತಂಡದೊಂದಿಗೆ ಸಂಭ್ರಮವನ್ನಾಚರಿಸಿಕೊಳ್ತಿದೆ.

ಕೆಜಿಎಫ್ ಸಿನಿಮಾ, ಬಜೆಟ್ ನಲ್ಲಿ ತಯಾರಾಗಿ   ಅತೀ ಹೆಚ್ಚುಗಳಿಸಿದ ಕೀರ್ತಿಯು ಕೂಡ ಕೆಜಿಎಫ್'ಗೆ ಸಲ್ಲುತ್ತದೆ. ಟಾಲಿವುಡ್ ನ ಬಾಹುಬಲಿಯನ್ನ ಮೀರಿಸಿದ್ಯಂತೆ ನಮ್ಮ ಕನ್ನಡ ಸಿನಿಮಾ. ಸುಮಾರು ಎರಡು ವರ್ಷಗಳ ಕಾಲ ಸಿನಿಮಾಗೆ ಪರಿಶ್ರಮ ಪಟ್ಟ ಯಶ್ ಆದಿಯಾಗಿ ಇನ್ನಿತರೆ ಕಲಾವಿದರು ಚಿತ್ರತಂಡದವರಿಗೆ ಲಕ್ ಖುಲಾಯಿಸಿದೆ. ಕೆಜಿಎಫ್ ಭಾಗ-2 ಮತ್ತೆ  ಬರುತ್ತಿದೆ. ಸಿನಿಮಾ ಶೂಟಿಂಗ್ ಕೂಡ ಭರ್ಜರಿಯಾಗಿಯೇ ತಯಾರಾಗ್ತಿದೆ.

Image result for KGf

ಕೆಜಿಎಫ್ ಇದೀಗ ಶತದಿನವನ್ನು ಪೂರೈಸುವ ಮೂಲಕ ಗೆಲುವಿನ ನಗೆ ಬೀರಿದೆ. ಹೀಗೆ ಬಂದು ಹಾಗೆ ಹೋಗುವ ನೂರಾರು ಚಿತ್ರಗಳ ಮಧ್ಯೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿ ಕನ್ನಡಿಗರ ಹೃದಯ ಗೆದ್ದ ಕೆಜಿಎಫ್ ಶತದಿನದ ಸಂಭ್ರಮವನ್ನು ಕಾಣುತ್ತಿದೆ. ಬರೋಬ್ಬರಿ 950 ಪರದೆಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಬಹುಮಟ್ಟಿನ ನಿರೀಕ್ಷೆಯನ್ನು ಭರಪೂರ ಸ್ವಾಗತವನ್ನೂ ಪಡೆದಿತ್ತು.  ಇಂದಿಗೂ ಕೆಜಿಎಫ್ ಅಬ್ಬರ ಕಡಿಮೆಯಾಗಿಲ್ಲ. ಕೆಜಿಎಫ್ ಭಾಗ- 1 ರ ಯಶಸ್ಸಿನ ಜೊತೆ ಬಾಗ-2 ಕೂಡ ಅಷ್ಟೇ ವೇಗವಾಗಿ ಮುನ್ನುಗ್ಗುತ್ತಿದೆ.

Edited By

Manjula M

Reported By

Kavya shree

Comments