ಕರ್ನಾಟಕದ ಕ್ರಶ್ ‘ಸಿಂಗಲ್ ಫಾರ್ ಎವರ್’ ಎಂದಿದ್ಯಾಕೆ..? ರಶ್ಮಿಕಾ ಇನ್ಮುಂದೆ ಸಿಂಗಲ್ಲಾಗಿ ಇರ್ತಾರ..!!

30 Mar 2019 12:56 PM | Entertainment
193 Report

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗಷ್ಟೇ ಕನ್ನಡಾಭಿಮಾನಿಗಳ ಕೋಪ ತಣ್ಣಗಾಗಿದೆ, ನನ್ನನ್ನು ಕ್ಷಮಿಸಿದ್ದೀರಾ, ನಾನು ನಿಮಗೆ ಥ್ಯಾಂಕ್ಸ್ ಹೇಳುತ್ತೇನೆಂದು ಅಭಿಮಾನಿಗಳ ಕುರಿತಾಗಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದರು. ಆದರೆ ಇತ್ತಿಚಿಗೆ ಅಭಿಮಾನಿಗಳ ಕೆಂಗಣ್ಣಿಗೆ ಮತ್ತೆ ಗುರಿಯಾಗಿದ್ದಾರೆ ಕರ್ನಾಟಕದ ಕ್ರಶ್ ಸಾನ್ವಿ… ಕಿಸ್ಸಿಂಗ್ ಸೀನ್ ಗಳಿಂದಲೇ ಈಕೆ ಹೆಚ್ಚು ಸುದ್ದಿಯಾಗುತ್ತಿದ್ದಾಳೆ…

ನಟಿ ರಶ್ಮಿಕಾ ಮಂದಣ್ಣ ಕನ್ನಡ-ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಡಿಯರ್ ಕಾಮ್ರೆಡ್ ಸಿನಿಮಾದ ಟೀಸರ್ ನಲ್ಲಿ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸೆನ್ಸೇಷನ್ ಆಗಿದ್ದರು. ಇದೀಗ ನೆನ್ನೆ ಸಂಜೆ 6 ಗಂಟೆಗೆ ಪ್ರಕಟಣೆಯೊಂದನ್ನು ಮಾಡಿ ಅಚ್ಚರಿ ಮೂಡಿಸಿದ್ದರು.

ಯಾವ ವಿಷಯದ ಬಗ್ಗೆ ಇರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಕೊಂಚ ಹೆಚ್ಚಾಗಿಯೇ ಇತ್ತು... ಟ್ವೀಟ್ ನಲ್ಲಿ ಸಿಂಗಲ್ ಫಾರ್ ಎವರ್ ಎಂದು ಬರೆದಿದ್ದು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಆದ ನಂತರ ವಿಜಯ್ ದೇವರಕೊಂಡ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಲವ್ ಬ್ರೇಕ್ ಅಪ್ ಆದ ನಂತರ ಸಿಂಗಲ್ ಫಾರ್ ಎವರ್ ಎಂದು ಹಾಕಿರುವುದು ನೋಡಿದರೆ ನಾನಿನ್ನು ಸಿಂಗಲ್ ಆಗಿರುತ್ತೇನೆ ಎಂದಿರಬಹುದಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು.. ಆದರೆ ಇದೀಗ ಅದಕ್ಕೆ ಸ್ಪಷ್ಟನೆ ಸಿಕ್ಕಿದೆ.. ರಶ್ಮಿಕಾ ಮುಂದಿನ ಸಿನಿಮದ ಹೆಸರು ಭೀಷ್ಮ ಅಂತ..  ಆಸಿನಿಮಾದ ಟ್ಯಾಗ್ ಲೈನ್ ಸಿಂಗಲ್ ಫಾರ್ ಎವರ್.. ಈ ಸಿನಿಮಾ ತೆಲಗು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ. ಹಾಗಾಗಿ ರಶ್ಮಿಕಾ ಹಾಗೇ ಬರೆದುಕೊಂಡಿದಷ್ಟೆ.

Edited By

Manjula M

Reported By

Manjula M

Comments