ಖ್ಯಾತ ನಟಿಯ ಮೇಲೆ ವಂಚನೆ ಆರೋಪ…!!!

30 Mar 2019 11:38 AM | Entertainment
762 Report

ಕೆಲ ಸಿನಿಮಾ ನಟಿಯರು ಕಾರ್ಯಕ್ರಮಗಳಿಗ ಬರುತ್ತೇವೆ, ಅಥವಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇವೆಂದು ಮುಂಚೆಯೇ ಹಣ ತೆಗತೆದುಕೊಂಡಿರುತ್ತಾರೆ. ಆದರೆ ಸರಿಯಾದ ದಿನಾಂಕಕ್ಕೆ, ಟೈಮಿಗೆ ಬರದೇ ಕೈ ಕೊಟ್ಟಿರುವ ನಾನಾ ಉದಾಹರಣೆಗಳಿವೆ. ಇದು ಹೊಸ ವಿಷ್ಯ ಏನಲ್ಲಾ. ಏಕೆಂದರೇ ಅದೆಷ್ಟೋ ಕಂಪನಿಗಳು ಕೆಲ ಸ್ಟಾರ್ ಹೀರೋಯಿನ್ ನಂಬಿಕೊಂಡು ಕೋಟಿಗಟ್ಟಲೇ ಪ್ರೋಗ್ರಾಂ ಗೆ ಹಣ ಸುರಿದಿರುತ್ತಾರೆ. ಆದರೆ ಅವರು ಬರದೇ ಕೋಟಿ ಕೋಟಿ ಹಣ ನಷ್ಟವಾಗಿದೆ ಎಂದು ಅವರ ವಿರುದ್ಧ ವಂಚನೆ ಪ್ರಕರಣದಡಿ ಕೆಲವರು ದೂರು ಕೊಡಲು ಮುಂದಾಗಿದ್ದಾರೆ. ಇದೀಗ ಅಂತಹದ್ದೇ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಬಾಲಿವುಡ್ನ ಖ್ಯಾತ ನಟಿ.

Image result for actress amisha patel

ಬಾಲಿವುಡ್ ನ ನಟಿ ಅಮಿಷಾ ಪಟೇಲ್ 2.5 ಕೋಟಿ ರೂ. ವಂಚನೆ ಎಸಗಿದ್ದಾರೆ ಎನ್ನುವ‌ ಗಂಭೀರ ಆರೋಪವನ್ನು ನಿರ್ದೇಶಕರೊಬ್ಬರು ಮಾಡಿದ್ದು, ಇದೀಗ ಆಕೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಚಿತ್ರ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಈ ಆರೋಪ ಮಾಡಿದ್ದಾರೆ‌. ಅಮೀಶಾ ಪಟೇಲ್ ಹಾಗೂ ಆಕೆಯ ಪಾಲುದಾರ ಕುನಾಲ್ ಗ್ರೂಮರ್ ಇಬ್ಬರು ನನ್ನಿಂದ ಚಿತ್ರವೊಂದಕ್ಕೆ ಹೂಡಿಕೆ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Image result for actress amisha patel

ಚಿತ್ರ ನಿರ್ಮಾಣವೊಂದಕ್ಕೆ 2.5 ಕೋಟಿ ರೂ. ಹೂಡಿಕೆ ಮಾಡುವಂತೆ ಒತ್ತಾಯಿಸಿದರು. ಕಳೆದ ವರ್ಷ ತೆರೆ ಕಾಣಬೇಕಿದ್ದ ಚಿತ್ರ ಇಲ್ಲಿಯವರೆಗೆ ತೆರೆ ಕಂಡಿಲ್ಲ. ಸಿನಿಮಾ ಆಗ ರಿಲೀಸ್ ಆಗುತ್ತದೆ, ಈಗ ರಿಲೀಸ್ ಆಗುತ್ತದೆ ಎಂಬು ಸಬೂಬು ಹೇಲುತ್ತಲೇ ಇದ್ದಾರೆ. ಜೊತೆಗೆ ನನಗೆ ನಂಬಿಕೆ ಬರೋ ತರ ಅವರು ನಡೆದುಕೊಳ್ಳುತ್ತಿಲ್ಲ. ನನಗೆ ಇವರಿಬ್ಬರ ಮೇಲೆ ಅನುಮಾನ  ಬರುತ್ತಿದೆ. ನನ್ನ ಹಣ ವಾಪಸ್ ಬರ ಬೇಕಾಗಿದೆ. ಇವರು ನನ್ನ ಬಳಿ ಹಣ ಪಡೆದು ವಂಚಿಸಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದು, ಇದೀಗ ಬಿ ಟೌನ್ ನಲ್ಲಿ ನಟಿಯ ಮೇಲಿರುವ ಆರೋಪ ವಿವಾದ ಹುಟ್ಟುಹಾಕಿದೆ

 

Edited By

Manjula M

Reported By

Kavya shree

Comments