ವೃತ್ತಿಯಲ್ಲಿ ಆ್ಯಂಕರ್..​.ಆದರೆ ಈಕೆ ಕಾಲ್​ಶೀಟ್​ಗಾಗಿ ಸ್ಟಾರ್​ ನಟರೇ ಕಾಯ್ತಿರ್ತಾರಂತೆ..!! ಯಾರಿವಳು..!!!

30 Mar 2019 9:24 AM | Entertainment
355 Report

ಮಾಡೋದು ನಿರೂಪಕಿ ಕೆಲಸ.. ಆದರೆ ಈಕೆಯ ಜೊತೆ ನಟನೆ ಮಾಡುವುದಕ್ಕೆ ಸ್ಟಾರ್ ನಟರು ಕಾಯುತ್ತಿರುತ್ತಾರಂತೆ.. ಅರೇ ಯಾರಪ್ಪ ಅದು ಅಂತಾ ನಿರೂಪಕಿ ಯಾರ್ ಇದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ.. ಈಕೆ ಹೈಟ್​, ವೇಟ್​’ನಲ್ಲಿ ಫರ್ಪೆಕ್ಟ್.. ಮಾತಿನಲ್ಲಿಯೆ ಎಲ್ಲರನ್ನೂ ಮೋಡಿ ಮಾಡಿಬಿಡುತ್ತಾಳೇ .. ಈಕೆಯ ಹೆಸರು ಅನಸೂಯಾ ಭಾರದ್ವಾಜ್​. ಗೂಗಲ್​ನ 2018ರಲ್ಲಿ ದಕ್ಷಿಣ ಭಾರತದ ಸೆಲೆಬ್ರಿಟಿಗಳಲ್ಲಿ ಈಕೆ 5ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.. ಅನಸೂಯಾ ಭಾರದ್ವಾಜ್ ತೆಲುಗು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನದೇ ಚಾಪು ಮೂಡಿಸಿಕೊಂಡಿರುವ ನಟಿ.

ಮಾಡರ್ನ್, ಟ್ರೆಡಿಶನಲ್​ ಎರಡು ಲುಕ್​ನಲ್ಲೂ ಸಖತ್ ಆಗಿಯೇ ಕಾಣುತ್ತಾರೆ ಅನಸೂಯಾ ಭಾರದ್ವಾಜ್…ಅನುಗೆ ಸೀರೆ ಅಂದ್ರೆ ತುಂಬಾ ಪ್ರೀತಿ.ನಿಜ ಹೇಳಬೇಕು ಎಂದರೆ ಉಳಿದ ನಟಿಯರಿಗೆ ಮಾದರಿಯಾಗುತ್ತೆ ಈಕೆಯ ನಟನೆ.. ಕಾಲೇಜ್​’ನಲ್ಲಿಯೇ ಲವ್’ನಲ್ಲಿ ಬಿದ್ದ ಈಕೆ ಲವ್ ಮಾಡಿದ್ದ ಹುಡುಗನನ್ನೆ ಮದುವೆಯಾದರು. 32 ವರ್ಷದ ಈ ಚೆಲುವೆ ಶಶಾಂಕ ಭಾರದ್ವಾಜ್​ ಎಂಬುವರನ್ನು ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ಈಕೆ ಕೇವಲ ನಿರೂಪಕಿ ಅಷ್ಟೆ ಅಲ್ಲ.. ಸಿನಿಮಾದಲ್ಲಿಯೂ ಕೂಡ ಅಭಿನಯಿಸುತ್ತಾಳೆ… ಅದಕ್ಕಾಗಿ ಸುಖಾಸುಮ್ಮನೆ ಯಾವುದೇ ಸಿನಿಮಾಗೆ ಈಕೆ ಓಕೆ ಎನ್ನುವುದಿಲ್ಲ… ವಿಶೇಷ ಏನಪ್ಪಾ ಅಂದ್ರೆ ಈಕೆ ಯಾವುದೇ ಚಿತ್ರ ಒಪ್ಪಿಕೊಂಡರು ಕೂಡ ಅದು ಆ ವರ್ಷ ಸೂಪರ್​ ಹಿಟ್​ ಆಗುವುದು ಪಕ್ಕಾ ಎಂಬುದು ಟಾಲಿವುಡ್​ ಮಂದಿ ಮಾತಾಗಿದೆ. ಇತ್ತೀಚೆಗೆ ನಟ ರಾಮ್​ ಚರಣ್​ ಅಭಿನಯದ 1985ರ ಕಾಲಘಟ್ಟದ ರಂಗಸ್ಥಳಂ ಚಿತ್ರದಲ್ಲೂ ಈಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು.

ನಂತರ ಟಾಲಿವುಡ್​ನ ಎಲ್ಲ ಅವಾರ್ಡ್ ಫಂಕ್ಷನ್​ಗಳಲ್ಲಿ ನಿರೂಪಕಿಯಾಗಿ ಇಂದಿಗೂ ಈ ಚೆಲುವೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ ಜೊತೆಗೆ ಅದೇ  ವರ್ಷ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕೂಡ ಈಕೆಯ ಪಾಲಾಯಿತು .. ಚಿತ್ರದಲ್ಲಿ ಈಕೆಯ ನೆಗೆಟಿವ್​ ಶೇಡ್​ ರೋಲ್,​ ನೋಡುಗರಿಗೆ ಇಷ್ಟವಾಗಿದ್ದಂತೂ ಸುಳ್ಳಲ್ಲ…

2016ರಲ್ಲಿ ತೆಲುಗು ಸಿನಿಮಾ ಕ್ಷಣಂ ಚಿತ್ರದಲ್ಲಿ ಈಕೆಯ ನಟನೆ ಕಂಡು ಇಡೀ ಟಾಲಿವುಡ್​ ಚಿತ್ರರಂಗವೇ ಬೆರಗಾಗಿತ್ತು.. ಜಬರ್​ದಸ್ತ್​ ಎಂಬ ಕಾಮಿಡಿ ಶೋ ನಿರೂಪಕಿಯಾಗಿ ಆರಂಭವಾದ ಈಕೆಯ ಜರ್ನಿ ಈಗ ಟಾಪ್​ ಹೀರೋಗಳ ಜೊತೆ ನಟಿಸುವ ಮಟ್ಟಿಗೆ ಬೆಳೆದಿದೆ ಎಂದರೆ ಸುಳ್ಳಾಗುವುದಿಲ್ಲ.. ಹುಡುಗಿಯರ ಲಿಸ್ಟ್​ನಲ್ಲಿ ರಶ್ಮಿಕಾ ಬಿಟ್ರೆ ಇವಳೇ ನೆಕ್ಸ್ಟ್​ ಅನ್ನೋದು ಇನ್ನೂ ವಿಶೇಷ.. ಸದ್ಯ ಮುಮ್ಮುಟ್ಟಿ ಅಭಿನಯದ ದಿ.ವೈ​.ಎಸ್​. ರಾಜಶೇಖರ ರೆಡ್ಡಿ ಜೀವನಾಧಾರಿತ ಚಿತ್ರ ’ಯಾತ್ರಾ’ದಲ್ಲಿ ವಿಶೇಷ ಪಾತ್ರವೊಂದು ಈಕೆಯನ್ನು ಹುಡುಕಿಕೊಂಡು ಬಂದಿದೆ. ಒಟ್ಟಿನಲ್ಲಿ ಆಗಿದ್ದು ಆ್ಯಂಕರ್ ಆದ್ರೂ ಕೂಡ ಸಿನಿಮಾದಲ್ಲಿ ಸಖತ್ತಾಗಿಯೇ ಮಿಂಚುತ್ತಿದ್ಧಾರೆ .

Edited By

Manjula M

Reported By

Manjula M

Comments