ಮಹಿಳಾ ಶಿಲೆಯ ಸ್ತನಗಳನ್ನು ಮುಚ್ಚಿ ವಿವಾದಕ್ಕೀಡಾದ ಸರ್ಕಾರ..?!!!

29 Mar 2019 11:15 AM | Entertainment
2406 Report

ಮಹಿಳೆ ಶಿಲ್ಪಗಳನ್ನು ಕಲೆ ಎಂಬ ದೃಷ್ಟಿಯಿಂದಲೇ ವೀಕ್ಷಿಸಿ ಜನರು ಖುಷಿ ಪಡುತ್ತಾರೆ. ಆದರೆ ಇಲ್ಲೊಂದು ಸರ್ಕಾರ ಸುಮಾರು ವರ್ಷದಿಂದ ಇದ್ದ ಸುಂದರವಾದ ಮಹಿಳಾ ಶಿಲ್ಪವೊಂದರ ಎದೆ ಭಾಗವನ್ನು ಮುಚ್ಚಿ ವಿವಾದಕ್ಕೀಡಾಗಿದೆ.  ಶಿಲ್ಪ ಕ್ಕೆ ಅಪಚಾರವೆಂಬಂತೆ ಇಂಡೋನೇಷ್ಯಾದ ಸರ್ಕಾರ ಶಿಲೆಯ ಎದೆಭಾಗವನ್ನು ಮುಚ್ಚಿದ್ದರಿಂದ ಜನರ ವಿರೊಧ ಕಟ್ಟಿಕೊಳ್ಳ ಬೇಕಾಗಿ ಬಂದಿದೆ.  

ಇಂಡೋನೇಷ್ಯಾದ ಥೀಮ್ ಪಾರ್ಕ್ ಒಂದರಲ್ಲಿ 15 ವರ್ಷಗಳಿಂದಲೂ ಮಹಿಳೆಯ ಸುಂದರ ಶಿಲ್ಪವೊಂದಿದೆ. ಈ ಶಿಲ್ಪ ಇದುವರೆಗೆ ಬೆತ್ತಲಾಗಿಯೇ ಇತ್ತು. ಆದರೆ ಈಗ ಸರ್ಕಾರ ಇದ್ದಕ್ಕಿದ್ದ ಹಾಗೆ ಶಿಲ್ಪದ ಸ್ತನದ ಭಾಗಕ್ಕೆ ಚಿನ್ನದ ಬಣ್ಣದ ಬಟ್ಟೆ ಮುಚ್ಚಿ ಟೀಕೆಗೆ ಗುರಿಯಾಗಿದೆ. ಅಂದಹಾಗೇ ಈ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ. ಕುಟುಂಬದವರೊಂದಿಗೆ  ಬರುವವರಿಗೆ ಈ ಶಿಲ್ಪಕಲೆ ಮುಜುಗರ ತರಬಹುದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಅಂದಹಾಗೇ ಇದೂವರೆಗೂ ಕಲೆಯ  ದೃಷ್ಟಿಯಿಂದ ನೋಡುತ್ತಿದ್ದ ಜನರಿಗೆ ಇದೀಗ ಶಿಲ್ಪವನ್ನು ಮುಚ್ಚಿದ್ದರಿಂದ ಈಗ ಮುಜುಗರವಾಗ್ತಿದೆ. ಸುಮ್ಮನೇ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ, ಹೀಗೆ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇಷ್ಟು ದಿನ ಇಲ್ಲದ ಮುಜುಗರ ಈಗ ಹೇಗೆ ಸೃಷ್ಟಿಯಾಗುತ್ತದೆ? ಇದುವರೆಗೆ ಈ ಶಿಲ್ಪವನ್ನು ಕಲೆಯ ದೃಷ್ಟಿಯಿಂದಲೇ ನೋಡುತ್ತಿದ್ದೆವು ಹೊರತು, ಅಶ್ಲೀಲ ದೃಷ್ಟಿಯಿಂದ ಅಲ್ಲ ಎನ್ನುವುದು ಜನರ ವಾದವಾಗಿದೆ. ಅಂತೂ ಎದೆ ಭಾಗಕ್ಕೆ ಬಟ್ಟೆ ಮುಚ್ಚಿ ಸರ್ಕಾರ ವಿವಾದಕ್ಕೆ ಗುರಿಯಾಗಿದೆ.

Edited By

Kavya shree

Reported By

Kavya shree

Comments