ಜಗ್ಗೇಶ್ ಎಂಟು ಬೆರಳುಗಳಿಗೆ ತೊಡುವ ಉಂಗುರುಗಳ ರಹಸ್ಯ ಗೊತ್ತಾ..?

28 Mar 2019 4:54 PM | Entertainment
302 Report

ನವರಸ ನಾಯಕ ಜಗ್ಗೇಶ್’ರನ್ನ ನೀವ್ ಏನಾದ್ರೂ ಗಮನಿಸಿದ್ದೀರಾ..? ಅವರ ಎರಡೂ ಕೈಗಳಲ್ಲಿಯೂ ಎಂಟು ಬೆರಳುಗಳಲ್ಲಿಯೂ ಉಂಗುರ ಸದಾ ಇರುತ್ತವೆ. ಅಂದಹಾಗೇ ಹೆಣ್ಣು ಮಕ್ಕಳಿಗೆ ಆಭರಣಗಳು ಎಂದರೆ ಇಷ್ಟ ಹಾಗೇ ಜಗ್ಗೇಶ್'ಗೂ ಆಭರಣಗಳ ಮೇಲೆ ವ್ಯಾಮೋಹ ಏನಾದ್ರು ಇದೆಯಾ…ಅಥವಾ ಅವರು ಧರಿಸೋ ಉಂಗುರುಗಳ ಹಿಂದಿದ್ಯಾ ರಹಸ್ಯ..?ಯೋಚಿಸ್ತಿದ್ದೀರಾ ಸದಾ ಅವರ ಕೈ ಬೆರಳುಗಳಲ್ಲಿ ಕಾಣೋ ದಪ್ಪ ದಪ್ಪ ಉಂಗುರಗಳಿಂದ ಅದೆಷ್ಟೋ ಮಂದಿ ಜಗಣ್ಣ ಬೆರಳಿಗೆ ಧರಿಸೋ ಉಂಗುರುಗಳಿಂದೆ ಇಂಟ್ರೆಸ್ಟಿಂಗ್ ಕಥೆ ಇದ್ಯಾ ಎಂದು ಯೋಚಿಸಿರುತ್ತಾರೆ….ತಾನ್ಯಾಕೆ ಉಂಗುರಗಳನ್ನು ಸದಾ ಕಾಲ ಧರಿಸ್ತೀನಿ ಎಂಬುದನ್ನು ಬಿಚ್ಚಿಟ್ಟಿದ್ದಾರೆ ಸರ್ವರ್ ಸೋಮಣ್ಣ.

ಜಗ್ಗೇಶ್ ಬಂಗಾರ ಹಾಕುವುದನ್ನು ಕಲಿತಿದ್ದು, ಅವರ ತಾಯಿಯನ್ನು ನೋಡಿ ಅಂತೆ. ಅವರ ತಾಯಿ ನಂಜಮ್ಮ ಅವರಿಗೆ ಬಂಗಾರ ಅಂದರೆ ಬಹಳ ಇಷ್ಟವಂತೆ. ನಂಜಮ್ಮ ಕೂಡ ಹೆಚ್ಚು ಆಭರಣ ಧರಿಸುತ್ತಿದ್ದರಂತೆ. ಇದನ್ನು ನೋಡುತ್ತಾ ನೋಡುತ್ತಾ ಜಗ್ಗೇಶ್'ಗೂ ಉಂಗುರುಗಳ ಮೇಲೆ ಕಣ್ಣು ಬಿತ್ತಂತೆ. ಬಂಗಾರ ಹಾಕುವುದನ್ನು ಕಲಿತರಂತೆ. ಒಂದು ದಿನವೂ ಖಾಕಲಿ ಬೆರಳಲ್ಲಿ ಇದ್ದುದ್ದೇ ಇಲ್ಲವಂತೆ ಜಗ್ಗೇಶ್.. ಜಗ್ಗೇಶ್ ಏಳರಿಂದ ಎಂಟು ಉಂಗುರವನ್ನು ಸಾಮಾನ್ಯವಾಗಿ ಹಾಕಿಕೊಳ್ಳುತ್ತಾರೆ. ಅದರಲ್ಲಿ ಸ್ಟಾರ್ ರಿಂಗ್ ಗಳನ್ನು ಸಹ ಇದೆ.   ಇನ್ನೊಂದು ವಿಶೇಷವೇನಪ್ಪಾ ಅಂದ್ರೆ ಆಭರಣ ಎಂದರೆ ಅತಿಯಾದ ಆಸೆ ತೋರುವ ಜಗ್ಗೇಶ್ ಗೆ ವಿರುದ್ಧ ಅವರ ಪತ್ನಿ ಪರಿಮಳ. ಪರಿಮಳಾಗೆ ಆಭರಣಗಳೆಂದರೆ ಇಷ್ಟವಿಲ್ವಂತೆ. ಅಪರೂಪಕ್ಕೆ ಪತಿ ಕೊಡಿಸುವ ಆಭರಣಗಳನ್ನು ತೊಡುವುದಿಲ್ವಂತೆ ಪರಿಮಳ.

Edited By

Kavya shree

Reported By

Kavya shree

Comments