ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಗಾಳಿಪಟ ನಾಯಕಿ..!!

28 Mar 2019 3:06 PM | Entertainment
398 Report

ಬಣ್ಣದ ಲೋಕದಲ್ಲಿ ಅದೃಷ್ಟ ಅನ್ನೋದು ಎಲ್ಲರಿಗೂ ಕೂಡ ಒಲಿಯುವುದಿಲ್ಲ. ಒಂದು ವೇಳೆ ಅದೃಷ್ಟ ಒಲಿದರೂ ಬಣ್ಣದ ಜಗತ್ತು ಕೈ ಕೊಟ್ಟು ಬಿಡುತ್ತದೆ.. ಸಾಕಷ್ಟು ನಟ ನಟಿಯರ ಗೋಳಾಟವೇ ಇದಾಗಿದೆ…ಅದೇ ಸಾಲಿಗೆ ಸೇರುವ ನಟಿ ಎಂದರೆ ನೀತು.. ಗಾಳಿಪಟ ಸಿನಿಮಾದಲ್ಲಿ ಪಕ್ಕಾ ಲೋಕಲ್ ಹುಡುಗನ ರೀತಿಯಲ್ಲಿ ಕಾಣಿಸಿಕೊಂಡ ಈಕೆ ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡರು . ದಿಗಂತ್ ಜೋಡಿಯಾಗಿ ನೀತು ಚೆನ್ನಾಗಿ ಚೆನ್ನಾಗಿಯೆ ಅಭಿನಯಿಸಿದ್ದರು.. ಸಾಕಷ್ಟು ಸಿನಿಮಾಗಳಲ್ಲಿ ನೀತು ಅಭಿನಯಿಸಿದ್ದರು ಕೂಡ ಆಕೆ ಅಷ್ಟೊಂದು ಹೆಸರು ತಂದು ಕೊಡಲಿಲ್ಲ.. ಸಿನಿಮಾರಂಗದಿಂದ ದೂರ ಉಳಿದಿದ್ದ ನೀತು ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

 

ತುಂಬಾ ವರ್ಷಗಳ ವಿರಾಮದ ನಂತರ ಕಳೆದ ವರ್ಷ ಮತ್ತೆ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದ ನಟಿ ನೀತು. ವಜ್ರಮುಖಿ ಚಿತ್ರದ ಮೂಲಕ ತಮ್ಮ ಸಿನಿಜರ್ನಿಯಲ್ಲಿ ಹೊಸ ಅಧ್ಯಾಯ ಬರೆಯುವ ಖುಷಿಯಲ್ಲಿದ್ದಾರೆ. ವಜ್ರಮುಖಿ ಸಿನಿಮಾದಲ್ಲಿ ದಿಲೀಪ್ ಪೈ​ ಹಾಗೂ ಸಂಜನಾ ಮುದ್ದಾದ ಜೋಡಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಪಿ.ಕೆ.ಹೆಚ್‌ ದಾಸ್‌ ಛಾಯಾಗ್ರಹಣವಿದೆ. ಈ ಚಿತ್ರದ ಹಾಡುಗಳಿಗೆ ರಾಜ್‌ ಭಾಸ್ಕರ್‌ ಸಂಗೀತ ಸಂಯೋಜನೆಯಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದಾರೆ.

ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇವರೊಂದಿಗೆ ಮತ್ತೊಂದು ಜೋಡಿಯಾದ ಶೋಭಿತಾ ಹಾಗೂ ಪ್ರಕಾಶ್​ ಕೂಡ ಮೋಡಿ ಮಾಡಲು ಸಜ್ಜಾಗಿದ್ದಾರೆ.  ಅಂದ ಹಾಗೆ ಇದೊಂದು ಮಹಿಳಾ ಪ್ರಧಾನ ಥ್ರಿಲ್ಲರ್ ಸಿನಿಮಾ. ನೀತು ಪ್ರಮುಖ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ. ಆದಿತ್ಯ ಕುಣಿಗಲ್ ಈ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ..

Edited By

Manjula M

Reported By

Manjula M

Comments