‘ಹೆಬ್ಬುಲಿ’ ನಾಯಕಿಯ ಮೊದಲ ಗಂಡನ ಜೊತೆ ‘ಫಿದಾ’ ಹುಡುಗಿಯ ಡೇಟಿಂಗ್…!?

28 Mar 2019 1:39 PM | Entertainment
4286 Report

ಫಿದಾ ಹುಡುಗಿ ಸಾಯಿ ಪಲ್ಲವಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ…ತನ್ನ ಅಭೂತ ಪೂರ್ವ ನಟನೆಯಿಂದಲೇ ಎಲ್ಲರ ಮನೆ ಮಾತಾಗಿರುವ ಈ ನಟಿ ನಾಯಕ ನಟನ ಮೇಲೆ ಮುನಿಸಿಕೊಂಡಿದ್ದಾಳಂತೆ.. ಹೌದಾ.. ಅಂತ ಯೋಚನೆ ಮಾಡಬೇಡಿ.. ಈ ನಟಿ ಮುನಿಸಿಕೊಂಡಿರುವುದು ಬೇರೆ ಯಾರ ಮೇಲೂ ಅಲ್ಲ… ಹೆಬ್ಬುಲಿ ನಾಯಕಿ ಅಮಲಾಪೌಲ್ ಮೊದಲ ಗಂಡ ವಿಜಯ್ ಮೇಲೆ…  'ರೌಡಿ ಬೇಬೆ' ಸಾಯಿ ಪಲ್ಲವಿ ಮದುವೆ ವಿಚಾರ ಈಗ ಟಾಕ್ ಆಫ್ ದಿ ಟೌನ್ ಆಗಿದೆ . ಇದಕ್ಕೆ ಗರಂ ಆದ ಪಲ್ಲವಿ ರಿಯ್ಯಾಕ್ಟ್ ಮಾಡಿದ್ದಾರೆ. 

ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸುತ್ತಿರುವ ಸಾಯಿ ಈಗ ಮದುವೆ ವಿಚಾರದ ಬಗ್ಗ ಕೊಂಚ ಬೇಜಾರಿನಲ್ಲಿ ಇದ್ದಾರೆ. ಹಲವು ವರ್ಷಗಳಿಂದ ನಟ ವಿಜಯ್ ಹಾಗೂ ಸಾಯಿ ಪಲ್ಲವಿ ಪ್ರೀತಿಸುತ್ತಿದ್ದಾರೆ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು…, ಇನ್ನೇನು ಕೆಲವು ದಿನಗಳಲ್ಲಿ ಮದುವೆ ಆಗುತ್ತಾರೆಂಬ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ಪಲ್ಲವಿ ಸುಮ್ಮನಿದ್ದರು. ಆದರೆ ಇದೀಗ ಫಿದಾ ಚೆಲುವೆ ಗರಂ ಆಗಿದ್ದಾರೆ.  ಈ ಹಿಂದೆ ನಟ ವಿಜಯ್ 2011ರಲ್ಲಿ 'ಹೆಬ್ಬುಲಿ' ನಟಿ ಅಮಲಾ ಪೌಲರನ್ನು ಮದುವೆ ಆಗಿದ್ದರು. ಕೆಲವು ವಿಚಾರಗಳ ಮೇಲೆ ಈ ಸಂಬಂಧ 2017ರಲ್ಲಿಯೇ ಮುರಿದು ಬಿದ್ದಿತ್ತು.

ಅದೇ ಟೈಮಲ್ಲಿ ಇತ್ತ ಪ್ರೇಮಂ ಚಿತ್ರದಿಂದ ಸಾಯಿ ಪಲ್ಲವಿಯೂ ಪ್ರಸಿದ್ಧರಾಗಿದ್ದರು. ವಿಜಯ್ ಅವರು ನಟಿಸಿರುವ ಬಹುತೇಕ ಚಿತ್ರಗಳು ಫ್ಲಾಪ್ ಆದವು. ಸೋಲಿನಿಂದ ಬೇಸತ್ತ ವಿಜಯ್, ತಮ್ಮ ಕರಿಯರ್‌ನಲ್ಲಿ ಬಿಗ್ ಹಿಟ್ ಬೇಕೇ ಬೇಕು. ಅದಕ್ಕೆ ಸಾಯಿ ಪಲ್ಲವಿ ತಮ್ಮ ಚಿತ್ರಕ್ಕೆ ನಟಿ ಆದರೆ ಮಾತ್ರ ಸಾಧ್ಯ,' ಎಂದು ವಿಜಯ್ ನಿರ್ದೇಶರ ಬಳಿ ಕೇಳಿ ಕೊಂಡಿದ್ದಾರೆ.  ಈ ವಿಷಯಕ್ಕಾಗಿ ಸಾಯಿ ಪಲ್ಲವಿ ಗರಂ ಆಗಿದ್ದರು. ಈ ಬೇಡಿಕೆಯಿಂದ ವಿಜಯ್ ಮೇಲೆ ಸಾಯಿ ಮುನಿಸಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದನ್ನೂ ನಿಲ್ಲಿಸಿ ಬಿಟ್ಟಿದ್ದಾರಂತೆ..ಒಟ್ಟಿನಲ್ಲಿ ಮದುವೆಯ ವಿಚಾರಕ್ಕೆ ಸಾಯಿ ಪಲ್ಲವಿ ಬ್ರೇಕ್ ಆಗಿರೋದು ಸ್ಪಷ್ಟವಾಗಿ ತಿಳಿಯುತ್ತದೆ.

Edited By

Manjula M

Reported By

Manjula M

Comments