‘ಮೀಟೂ’ ನಾಯಕನ ವಿರುದ್ಧ ತಿರುಗಿ ಬಿದ್ದಳು ಸ್ಟಾರ್ ಹೀರೋಯಿನ್ ಸಮಂತಾ..!!!

28 Mar 2019 1:16 PM | Entertainment
211 Report

ತನ್ನ ಮೇಲೆ ಮೀಟೂ ಆರೋಪ ಮಾಡಿದ್ರು ಎಂದು  ಗಾಯಕಿ ಚಿನ್ಮಯಿ ಶ್ರೀಪಾದರನ್ನು ಡಬ್ಬಿಂಗ್ ಗ್ರೂಪ್ ನಿಂದ ತೆಗೆದು ಹಾಕಿದ ನಟ, ಡಿಎಂಕೆ ಪಕ್ಷದದಲ್ಲಿದ್ದ ರಾಧಾ ರವಿಯ ವಿರುದ್ಧ  ಇದೀಗ ಅಕ್ಕಿನೇನಿ ಮನೆಯ ಸೊಸೆ ಸಮಂತಾ ರಾಂಗ್ ಆಗಿದ್ದಾರೆ. ಇತ್ತೀಚೆಗೆ ಇಡೀ ಟಾಲಿವುಡ್ ನಲ್ಲಿ ಭಾರೀ ಟಾಕ್ ಆದ ವಿಚಾರ ಅಂದ್ರೆ ರಾಧಾ ರವಿ, ಖ್ಯಾತ ನಾಯಕಿ ನಯನಾ ತಾರರನ್ನು ದೆವ್ವ ಎಂದು ಕರೆದು ಅಶ್ಲೀಲವಾಗಿ ಮಾತನಾಡಿದ್ದು.  ನಯನಾ ತಾರರ ವಿರುದ್ಧವಾಗಿ ಮಾತನಾಡಿದ ನಟ ರಾಧಾ ರವಿ ವಿರುದ್ಧ ಭಾರೀ ಆಕ್ರೊಶ ವ್ಯಕ್ತವಾಯ್ತು. ಪಕ್ಷದಿಂದಲೂ ಅವರನ್ನು ಉಚ್ಚಟಿಸುವಂತೆ ಆಗ್ರಹ ಕೂಡ ವ್ಯಕ್ತವಾಯ್ತು. ನಯನಾ ತಾರರನ್ನು ಪ್ರೇತವೆಂದು ಉಲ್ಲೇಖಿಸುವಂತೆ ಅವರ ನಟನೆಯ ವಿರುದ್ಧ ಮಾತನಾಡಿದ ರಾಧಾ ರವಿ ಕುರಿತಾಗಿ ಇದೀಗ ಸಮಂತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Related image

ರಾಧಾ ರವಿಯವರೇ ಸದ್ಯ ನೀವು ಈಗ ಸಿಕ್ಕಾಪಟ್ಟೆ ಬೇಜಾರಿನಲ್ಲಿದ್ದೀರಿ. ನಿಮಗೆ ಅಪಾರ ದು:ಖವಾಗಿದೆ. ನಾವೆಲ್ಲರೂ ಅದಕ್ಕಾಗಿ ವಿಷಾಧಿಸುತ್ತೇವೆ.ನಿಮ್ಮ ಮನಸ್ಸಿನಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಶಾಂತಿಯನ್ನು ಕಂಡುಕೊಳ್ಳಲು ನಾನು ನಿಮಗೆ ಸಲಹೆ ಒಂದನ್ನು ನೀಡುತ್ತೇನೆ. ನಟಿ ನಯನಾತಾರರ ಮುಂದಿನ ಸೂಪರ್ ಹಿಟ್ ಸಿನಿಮಾಗಳನ್ನು ನೋಡಲು ನಾನು ನಿಮಗೆ ಟಿಕೆಟ್ ಗಳನ್ನು ಕಳುಹಿಸುತ್ತೇನೆ. ಪಾಪ್ ಕಾರ್ನ್, ತೆಗೆದುಕೊಂಡು ತಿನ್ನುತ್ತಾ ಸಿನಿಮಾ ನೋಡಿ ಎನ್ನುವ ರೀತಿಯಲ್ಲಿ ವ್ಯಂಗ್ಯವಾಗಿ ರಾಧಾ ರವಿಯ ಬಗ್ಗೆ ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ ನಟಿ  ಸಮಂತಾ.

ನಯನಾತಾರಾ ಯಾವ ಪಾತ್ರವಾದರೂ ಕಲಾವಿದೆಯಾಗಿ ಮಾಡಲೇ ಬೇಕು. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿಯ ಬಗ್ಗೆ ದೆವ್ವ ಅಥವಾ ಪ್ರೇತದ ರೀತಿಯಲ್ಲಿ ಮಾತನಾಡಬಾರದು, ಎಂದಿದ್ದಾರೆ.

Edited By

Kavya shree

Reported By

Kavya shree

Comments