'ಆ' ಪಕ್ಷದಿಂದ ಟಿಕೆಟ್ ಸಿಗದೇ ಇದ್ರೂ ಕ್ಯಾಂಪೇನ್ ಮಾಡ್ತಾರಾ ಬಿಗ್ ಬಾಸ್ ಶಶಿ...?!!!

28 Mar 2019 10:17 AM | Entertainment
1417 Report

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ  ಒಂದಷ್ಟು ಜನ ಸೆಲೆಬ್ರಿಟಿಗಳ ಹೆಸರು ಹಾಗೇ ಸದ್ದು ಮಾಡಿತ್ತು. ಅದರಲ್ಲಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ಮಾರ್ಡನ್ ರೈತ ಶಶಿ ಕುಮಾರ್ ಕೂಡ ಒಬ್ಬರು. ಈ ಸಲ ಚುನಾವಣೆಗೆ ಶಶಿ ನಿಲ್ತಾರೆ, ಜನ ಸಪೋರ್ಟ್ ಇದೆ. ಖಂಡಿತಾ ನಮ್ಮ ಪಕ್ಷದಿಂದ ಅವರನ್ನು ನಿಲ್ಲಿಸಿದ್ರೆ ಖಂಡಿತಾ ಗೆಲ್ತಾರೆ ಎನ್ನೋ ವಿಶ್ವಾಸವನ್ನು   ಕೂಡ  ಆ ಪಕ್ಷ ನಿರ್ಧರಿಸಿಬಿಟ್ಟಿತ್ತು. ಆದರೆ ಶಶಿ ಕುಮಾರ್ ಚುನಾವಣೆಗೆ ನಿಲ್ಲಲಿಲ್ಲ ನಿಜ, ಆದರೆ ಕ್ಯಾಂಪೇನ್ ಯಾರ ಪರ ಮಾಡ್ತಾರೆ ಗೊತ್ತಾ..? ಪಾಲಿಟಿಕ್ಸ್ ಬಗ್ಗೆ ಶಶಿ ಹೇಳೋದೇನು ಗೊತ್ತಾ..?

Image result for bigg boss shashi kumar

ಹೌದು, ಒಂದು ಪ್ರಭಾವಿ ಪಕ್ಷದ ಕಡೆಯಿಂದ ಶಶಿ ಕುಮಾರ್ ಹೆಸರು ಪ್ರಬಲವಾಗಿಯೇ ಕೇಳಿ ಬಂದಿತ್ತು. ಶಶಿ ಕುಮಾರ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ನನಗೆ ಪಾರ್ಟಿ ಅನ್ನೋದಕ್ಕಿಂದ , ಸರ್ವೀಸ್ ನ್ನು ತಲೆಯಲ್ಲಿ ಇಟ್ಕೊಂಡವನು. ಸದ್ಯ ನಾನು ಎಲೆಕ್ಷನ್ ನಿಲ್ತಿಲ್ಲವಾದ್ರೂ, ನನ್ನ ಹೆಸರು ಲೋಕಸಬೆ ಚುನಾವಣೆಯಲ್ಲಿ ಕೇಳಿಬಂದಿದ್ದೇ ನನಗೆ ಹೆಚ್ಚು ಖುಷಿ ಎಂದಿದ್ದಾರೆ. ಅಂದಹಾಗೇ ಶಶಿ ಕುಮಾರ್ ಹೆಸರು ಕೇಳಿ ಬಂದಿದ್ದು ಜೆಡಿಎಸ್ ಪಕ್ಷದಿಂದ . ಶಶಿಗೆ ಟಿಕೆಟ್ ಸಿಕ್ಕೇ ಬಿಡುತ್ತೆ ಎನ್ನುವರ ಮಟ್ಟಿಗೆ ಪಬ್ಲಿಸಿಟಿ ಕೂಡ ಆಯ್ತು. ಆ ನಂತರ ಚುನಾವಣೆಗೆ ನಿಲ್ಲಲಿಲ್ಲ.  ಆದರೆ ಅವರು ಕ್ಯಾಂಪೇನ್’ಗೆ ಬರುತ್ತಾರೆ ಎಂದು ಸುದ್ದಿಯೂ ಕೇಳಿ ಬಂದಿತ್ತು.ಆದರೆ ನನಗೆ ಬದಲಾವಣೆ ತರ ಬೇಕು. ನಮ್ಮಂತಹ ಯುವಕರು ಕೈ ಜೋಡಿಸ ಬೇಕು ಎಂದು ಹೇಳಿದ್ದಾರೆ. ಸದ್ಯದ ರಾಜಕೀಯಕ್ಕೆ ಬರೋಕೆ ನನಗೆ ಫೈನಾನ್ಸಿಯಲ್ ಬ್ಯಾಕ್ ಅಪ್ ಇಲ್ಲ. ಇಷ್ಟವಿದೆ ಅಂತಾನೂ ಇಲ್ಲ. ಇಷ್ಟ ಅಂತಾನೂ ಅಲ್ಲ. ಅದಕ್ಕೆಲ್ಲಾ ತುಂಬಾ ಟೈಂ ಹಿಡಿಯುತ್ತೆ. ಜನ್ರ ಸಪೋರ್ಟ್ ಇದ್ರೆ ಖಂಡಿತತಾ ಬರ್ತಿನಿ. ಮುಂದೆ ನೋಡೋಣ. ಆದ್ರೆ, ಈ ಸದ್ಯದ ರೀತಿಯ ರಾಜಕೀಯಕ್ಕೆ ಖಂಡಿತ ಬರೋಲ್ಲ’ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ.

Related image

ನನ್ನ ಹೆಸ್ರು ಕೇಳಿಬಂದಿದ್ದೇ ಖುಷಿಯಾಯ್ತು. ಈ ಬಾರಿ ಚುನಾವಣೆಗಾಗಿ ಕೆಲವರಿಂದ ನನ್ನ ಭಾವನಿಗೆ ಕಾಲ್ಸ್ ಬಂದಿತ್ತು. ಯಾರ ಕಡೆಯಿಂದ ನಾನೂ ಕೇಳೋಕೆ ಹೋಗಲಿಲ್ಲ. ಇದನ್ನ ಕೇಳಿಯೇ ಖುಷಿಯಾಯ್ತು. ಮಾತುಕತೆ ಆಗಿದ್ರೆ ಖಂಡಿತ ಖುಷಿಯಾಗ್ತಿತ್ತು. ಆದ್ರೆ, ನನಗೆ ನಮ್ಮ ಹಳ್ಳಿಯಲ್ಲಿ ಕಾರ್ಯಕ್ರಮ ಇದ್ದುದ್ದರಿಂದ ನಾನು ಅಲ್ಲಿಗೆ ಹೋಗಬೇಕಾಯ್ತು.ಇಲ್ಲಾ ಅಂದಿದ್ರೆ ನನಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಸಿಗ್ತಾ ಇತ್ತೇನೋ ಎನ್ನುತ್ತಾರೆ. ಆ ನಂತರ ಕಾಂಗ್ರೆಸ್ ನಿಂದಲೂ ಟಿಕೆಟ್ ಕೊಡ್ತೀವಿ ಎಂದಿದ್ದರಂತೆ ಏನಾಯ್ತೋ ಗೊತ್ತಿಲ್ಲ ಎನ್ನುತ್ತಾರೆ ಬಿಗ್ ಬಾಸ್ ಶಶಿ. ಆದರೆ ಕ್ಯಾಂಪೇನ್ ನ್ನು  ನಾನು ಯಾವ ಪಕ್ಷ ಸರ್ವೀಸ್ ಮಾಡಿದೆ , ಮಾಡುತ್ತದೆ ಎನಿಸುತ್ತದೋ  ಅದಕ್ಕೆ ಹೋಗುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.

Edited By

Kavya shree

Reported By

Kavya shree

Comments