ಈ ಹೀರೋ ಕಮ್ ಖಳನಾಯಕನ ಮಗನ 8 ಪ್ಯಾಕ್ ನೋಡಿ ದರ್ಶನ್ ಶಾಕ್‌ ಆಗಿದ್ರಂತೆ..!

27 Mar 2019 10:17 AM | Entertainment
430 Report

ಸ್ಯಾಂಡಲ್ದವುಡ್ ಅನ್ನು ಒಂದು ಕಾಲದಲ್ಲಿ ಆಳಿದ ಸ್ಟಾರ್ ನಟರ ಪೈಕಿ ಟೈಗರ್ ಪ್ರಭಾಕರ್ ಕೂಡ ಒಬ್ಬರು.. ಪ್ರಭಾಕರ್ ಕೇವಲ ಹೀರೋ ಮಾತ್ರ ಆಗಿರಲಿಲ್ಲ… ಖಳನಾಯಕನು ಕೂಡ ಆಗಿದ್ದರು.. ಸ್ಯಾಂಡಲ್​ವುಡ್​ನಲ್ಲಿ  ಒಂದು ಕಾಲದಲ್ಲಿ ಖಳನಟರಾಗಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರೋ ಸ್ಟಾರ್​ಗಳಂದ್ರೆ ಅವರೇ ಟೈಗರ್ ಪ್ರಭಾಕರ್ ಮತ್ತು ತೂಗುದೀಪ್ ಶ್ರೀನಿವಾಸ. ಬಹುತೇಕ ಸಿನಿಮಾಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.. ಇವರಿಬ್ಬರು ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ ನಲ್ಲಿಯೂ ಕೂಡ ಒಳ್ಳೆಯ ಗೆಳೆಯರಾಗಿದ್ದರು… ಉತ್ತಮ ಬಾಂಧವ್ಯವನ್ನು ಹೊಂದಿದ್ದರು..

ಅಪ್ಪನಂತೆ ಅವರ ಮಕ್ಕಳು ಕೂಡ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮರಿ ಟೈಗರ್ ವಿನೋದ್ ಪ್ರಭಾಕರ್ ಕೂಡ ಒಂದಾಗಿದ್ದು ಇಬ್ರು ಕುಚಿಕು ದೋಸ್ತಿಗಳು ಅನ್ನೋದು ಎಲ್ಲರಿಗೂ ಕೂಡ ಗೊತ್ತಾಗಿದೆ.  ಇತ್ತೀಚಿಗೆ ಬರುತ್ತಿರುವ ಎಲ್ಲಾ ಯುವ ಸ್ಟಾರ್​ಗಳಿಗೆ ಸಾಥ್ ನೀಡೋ ‘ಯಜಮಾನ’ ದರ್ಶನ್‌, ವಿನೋದ್ ಪ್ರಭಾಕರ್​ ನಟನೆಯ ಬಹುತೇಕ ಸಿನಿಮಾಗಳಿಗೆ ಜೊತೆಯಾಗಿ ನಿಂತಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಕೈಯಲ್ಲಿ ಫೈಟರ್, ಶ್ಯಾಡೋ, ರಗಡ್​ನಂತಹ ಬಿಗ್ ಸಿನಿಮಾಗಳಿದ್ದು, ರಗಡ್​ ಸಿನಿಮಾ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ..  

ರಗಡ್‌ ಸಿನಿಮಾಗಾಗಿ ವರ್ಕೌಟ್ ಮಾಡೀರೊ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿದ್ದೆ. ಆದ್ರೆ ಅವರ ಕಣ್ಣಿಗೆ ನಾಲ್ಕು ತಿಂಗಳವರೆಗೂ ಕಾಣಿಸಿಕೊಂಡಿರಲಿಲ್ಲ. ಆದಾದ ನಂತರ ದರ್ಶನ್ ಹುಟ್ಟುಹಬ್ಬದ ದಿನ ಅವರ ಮನೆಗೆ ಹೋದಾಗ 8 ಪ್ಯಾಕ್ ನೋಡಿ ಶಾಕ್ ಆದ್ರು. ನಾನು ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದರೂ ಕೂಡ ಕೈಯಲ್ಲಿ ಹಣ ಇರ್ತಾಯಿರಲಿಲ್ಲ. ಆವಾಗ ನಿನಗೆ ಏನು ಸಹಾಯ ಬೇಕಾದ್ರು ಕೇಳು ಅಂತಾ ಆತ್ಮ ಸ್ಥೈರ್ಯ ತುಂಬಿದವರು ಡಿಬಾಸ್ ಅಂತಾ ಮರಿ ಟೈಗರ್ ಹೇಳಿಕೊಂಡಿದ್ದಾರೆ. ವಿನೋದ್ ಪ್ರಭಾಕರ್ ಗೆ ಬಣ್ಣದ ಲೋಕ ಕೈ ಹಿಡಿದಾಗೆ ಕಾಣಿಸುತ್ತಿಲ್ಲ.. ಮಾಡಿದ ಯಾವ ಸಿನಿಮಾವೂ ಕೂಡ ದೊಡ್ಡ ಮಟ್ಟಿಗೆ ಯಶಸ್ಸನ್ನು ಕಾಣುತ್ತಿಲ್ಲ.. ಮುಂದೆ ಬರುವ ಸಿನಿಮಾಗಳಾದರೂ ಅವರಿಗೆ ಯಶಸ್ಸು ತಂದುಕೊಡುತ್ತದ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments