ಜಯಲಲಿತಾ ಥರಾ ಆ್ಯಕ್ಟ್ ಮಾಡೋಕೆ ಈ ನಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ...?

26 Mar 2019 4:14 PM | Entertainment
433 Report

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಕುರಿತು ಸಿನಿಮಾ ಮಾಡ್ತಿದ್ದಾರೆ ಎಂದಾಗ ಸಾಕಷ್ಟು ವೈಯಕ್ತಿಕ ಅಭಿಪ್ರಾಯಗಳೇ ಹರಿದು ಬಂದವು. ಜಯಲಲಿತಾ ಅವರ ಬಯೋಪಿಕ್ ಗೆ ‘ತಲೈವಿ’ ಎಂದು ಹೆಸರಿಡೋದರ ಮೂಲಕ ಭಾರೀ ಸುದ್ದಿಯಾಗಿತ್ತು. ಚಿತ್ರ ಮಾಡೋ ಕುರಿತಾಗಿನಿಂದ   ನಾಯಕಿಯ ಹುಡುಕಾಟದ ತನಕವೂ ಸೌಂಡು ಮಾಡಿತ್ತು. ಆಗ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ಬಾಲಿವುಡ್ನ ನಟಿ ಕಂಗನಾ ರಣಾವತ್. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಜನಪ್ರಿಯ ರಾಜಕಾರಣಿ ಜಯಲಲಿತಾ ಜೀವನವನ್ನು ತೆರೆಗೆ ತರೋದಿಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ.

Image result for kangana ranaut with jayalalithaಜಯಲಲಿತಾ ಪಾತ್ರ ಮಾಡೋಕೆ ಈಕೆಯೇ ಸರಿಯಾದವಳೆಂದು ನಟಿ ಕಂಗನಾ ಅವರನ್ನು ಆಯ್ಕೆ ಮಾಡಲಾಗಿದೆ.ಈ ಚಿತ್ರಕ್ಕೆ ನಟಿ ಕಂಗನಾ ಅವರು ಬರೋಬ್ಬರಿ 24 ಕೋಟಿ ರೂ.ಗಳ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿನಿಮಾ ಈಗಾಗಲೇ ಎರಡು ಭಾಷೆಗಳಲ್ಲಿ ತಯಾರಾಗುತ್ತಿದ್ದು ತಲೈವಿ  ಎಂದು ತಮಿಳಲ್ಲಿ, ಹಿಂದಿಯಲ್ಲಿ ಜಯಾ ಎಂಬ ಹೆಸರಿನ ಮೂಲಕ ಸಿನಿಮಾ ರೆಡಿಯಾಗ್ತಿದೆ.  ಪಾತ್ರ ಮಾಡಲು ಕಂಗನಾ ಒಪ್ಪಿಗೆ ಸೂಚಿಸಿದ್ದು ಅವರು ಪಡೆಯುವ ಸಂಬಾವನೆ ಬರೋಬ್ಬರಿ 24 ಕೋಟಿಯಂತೆ. ಅವರು ಇಷ್ಟೇ ಸಂಭಾವನೆ ಪಡೆಯುವುದು ನಿಜವಾದರೇ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಕಂಗನಾ ರಣಾವತ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.ಈ ಸಿನಿಮಾವನ್ನು ಕೆ ವಿ ವಿಜಯೇಂದ್ರ ಅವರು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಕ್ವೀನ್ ಕಂಗನಾಗೆ ಹಿಂದಿಯಲ್ಲಿ ಭರ್ಜರಿ ಡಿಮ್ಯಾಂಡ್. ಅಮ್ಮನಾಗಿ ಜಯಲಲಿತಾ ಬಯೋಪಿಕ್ ಕ್ಲಿಕ್ ಆದರೆ ಕಂಗನಾ ಹಿಡಿಯೋರು ಯಾರಿದ್ದಾರೆ ನೀವೆ ಹೇಳಿ.

Edited By

Kavya shree

Reported By

Kavya shree

Comments