ದತ್ತು ಪಡೆದ ಶಾಲೆಯನ್ನು ಕಲರ್ ಫುಲ್ ಮಾಡಿದ ನಟಿ…!

26 Mar 2019 3:42 PM | Entertainment
284 Report

ಅದಹಾಗೇ ಇತ್ತೀಚೆಗೆ ಸ್ಯಾಂಡಲ್ವುಡ್  ಸ್ಟಾರ್ ‘ಗಳಲ್ಲಿ ಒಂದು ಅಭಿಯಾನ ಆರಂಭವಾದಂತಿದೆ. ಏಕೆಂದರೆ ಇತ್ತೀಚೆಗೆ ನಟ ಅಕುಲ್ ಬಾಲಾಜಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಸುದ್ದಿಯಾಗಿದ್ರು. ಒಂದು ಕಡೆ ಕೆಲ ಸ್ಟಾರ್ ಗಳು ಕಾಡು, ಕಾಡು ಪ್ರಾಣಿ ಅಂತಾ ಉಳಿವಿಗಾಗಿ ಹೋರಾಡುತ್ತಿದ್ದರೇ ಇತ್ತ, ಇನ್ನು ಕೆಲ ನಟಿಯರು ಶಾಲೆಗಳನ್ನು ದತ್ತು ಪಡೆದು ಮಕ್ಕಳ  ಶಿಕ್ಷಣಕ್ಕೆ ಬೇರೆ ರೀತಿಯಲ್ಲಿ ಹೋರಾಡುತ್ತಿದ್ದಾರೆ. ಅವರಲ್ಲಿ ನಟಿ ಪ್ರಣಿತಾ ಕೂಡ ಒಬ್ಬರು.

ಪ್ರಣೀತಾ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಒಂದಷ್ಟು ಸಮಯ ಶಾಲೆಗಳಲ್ಲಿ ಮಕ್ಕಳ ಜೊತೆ ಕಾಲ ಕಳೆಯೋದು ಸುದ್ದಿಯನ್ನು ನಾವು ನೋಡಿದ್ದೀವಿ. ಆದರೆ ಈ ಬಾರಿ ಆಕೆ ಹೋಳಿಯನ್ನು ಹೇಗೆ ಆಚರಿಸಿದ್ದಾರೆ ಗೊತ್ತಾ...? ಕೆಲ ತಿಂಗಳ ಹಿಂದೆ ನಟಿ ಪ್ರಣಿತಾ ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದರು. ಸಾಮಾಜಿಕ ಕಳಕಳಿಯ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಕೇವಲ ದತ್ತು ತೆಗೆದುಕೊಂಡು ಸುಮ್ಮನಾಗದೇ ಶಾಲೆಯೆಡೆ ತಮ್ಮ ನಿಜವಾದ ಕಾಳಜಿ ತೋರಿಸಿ ಅದರ ಅಭಿವೃದ್ಧಿಯಲ್ಲೂ ತೊಡಗಿಕೊಂಡಿದ್ದಾರೆ. ಈ ಬಾರಿಯ ಹೋಳಿಯನ್ನ ಬರೀ ಬಣ್ಣ ಎರಚಿ ಮೋಜು ಮಸ್ತಿ ಮಾಡದೇ ಈ ಶಾಲೆಯ ಗೋಡೆಗಳ ಮೇಲೆ ವಿವಿಧ ಬಣ್ಣಗಳಿಂದ ತಾವೇ ಸ್ವತಃ ಪೇಯಿಂಟ್ ಮಾಡಿ ಮಾದರಿಯಾಗಿದ್ದಾರೆ.ಪರಿಸರ ಜಾಗೃತಿಯ ಕೆಲ ಚಿತ್ರಣಗಳನ್ನು ಗೋಡೆಯ ಮೇಲೆ ಬಿಟ್ಟು ಜಾಗೃತಿ ಮೂಡಿಸಿದ್ದಾರೆ.

 ಈ ಮೂಲಕ ಹೋಳಿ ಹಬ್ಬವನ್ನು ಶಾಲೆಯ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಕಳೆದಿದ್ದಾರೆ. ಮಕ್ಕಳ ಶಿಕ್ಷಣದ ಬಗ್ಗೆ ಆಗಾಗ್ಗ ಕೇರ್ ತೆಗೆದುಕೊಂಡು ಶಾಲೆಗೆ ಬಂದು  ಹೋಗುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಶಾಲೆಗೆ ವಿಸಿಟ್ ಮಾಡುತ್ತಾರೆ. ಈ ಸಲ 5 ಲಕ್ಷದ ಚೆಕ್ ನೀಡಿ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಪಡೆಯುವಲ್ಲಿ ನೆರವನ್ನು ನೀಡಿದ್ದಾರೆ.

Edited By

Kavya shree

Reported By

Kavya shree

Comments