ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಖ್ಯಾತ ನಟಿ…!

26 Mar 2019 12:57 PM | Entertainment
1016 Report

ಸಿನಿಮಾ ಲ್ಯಾಂಡ್’ನ ಕೆಲ ನಾಯಕಿಯರು ರಾಜಕೀಯ ಪಕ್ಷಗಳಿಗೆಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಬಾಲಿವುಡ್’ನ ಖ್ಯಾತ ನಟಿ ಯೊಬ್ಬರುಕಾಂಗ್ರೆಸ್ ಸೇರಲಿದ್ದು, ಅವರನ್ನು ಕಣಕ್ಕಿಳಿಸಲು ಪಕ್ಷ ಈಗಾಗಲೇ ನಿರ್ಧರಿಸಿದೆ. ಈ ಹಿಂದೆ ನಟಿ ಸಪ್ನಾ, ಕಾಂಗ್ರೆಸ್ ಯಾವ ಆಫರ್ ಕೊಟ್ರೂ ನಾನು ಅವರೊಂದಿಗೆ ಕೈ ಜೋಡಿಸಲ್ಲ ಎಂದಿದ್ದರು. ಆದರೆ ಅದೇ ಬಿ ಟೌನ್'ನ ಮತ್ತೊಬ್ಬ ಸುಂದರಿ ಊರ್ಮಿಳಾ ಮಾತೊಂಡ್ಕರ್ ಅವರ ಹೆಸರು  ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆಯೂ ಅನೇಕ ಬಾರಿ ಅವರ ಹೆಸರು ಕೇಳಿದ್ರು ಊರ್ಮಿಳಾ ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಅನುಮಾನವಿತ್ತು. ಆಕೆ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರ ಯಾವುದು ಗೊತ್ತಾ..?

Image result for actress urmila matondkar

ಇದೀಗ ಊರ್ಮಿಳಾ ಮಾತೊಂಡ್ಕರ್ (45) ಅವರ ಹೆಸರು ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಪರಿಗಣನೆಗೆ ಬಂದಿದೆ. ಈ ಕುರಿತು ಅಂತಿಮ ನಿರ್ಧಾರ ಶೀಘ್ರದಲ್ಲಿಯೇ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಊರ್ಮಿಳಾ ಕಾಂಗ್ರೆಸ್'ನಿಂದ ಮುಂಬೇ ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದರ ಬಗ್ಗೆ ಅವರ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕಿರಿಸಿದ್ದಾರೆ. ಸೋಮವಾರವಷ್ಟೇ ಈ ಬಗ್ಗೆ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮಿಲಿಂದ್ ದೇವೊರಾ ಅವರಿಗೆ ಬಿಟ್ಟು ಕೊಟ್ಟ ಸಂಜಯ್ ನಿರುಪಮ್  ಅವರುಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Edited By

Kavya shree

Reported By

Kavya shree

Comments