ನಟಿ ಐಶ್ವರ್ಯ ರೈ ಗರ್ಭಿಣಿ…?!!!

25 Mar 2019 10:39 AM | Entertainment
2280 Report

ಮಾಜಿ ವಿಶ್ವ ಸುಂದರಿ ನಟಿ ಐಶ್ವರ್ಯ ರೈಗೆ ಈಗಾಗಲೇ ಒಂದಾದ ಮುದ್ದಾದ ಹೆಣ್ಣು ಮಗಳಿದ್ದಾಳೆ. ಅಮಿತಾಬ್ ಬಚ್ಚನ್ ಮನೆಯ ಮುದ್ದಿನ ಸೊಸೆಯಾಗಿ, ಅಭಿಷೇಕ್ ಬಚ್ಚನ್ ಅವರ ಪ್ರೀತಿಯ ಮಡದಿಯಾಗಿ ಸಂಸಾರ ನಡೆಸುತ್ತಿರುವ ಐಶ್ವರ್ಯ ಎರಡನೇ ಮಗುವಿಗೆ ತಾಯಿಯಾಗ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂದಹಾಗೇ ಇದನ್ನು ಅವರೇ ಹೇಳಿದ್ದಾರಾ..? ಅಥವಾ ಬೇರೆ ಮೂಲಗಳಿಂದ ಬಂದಿರುವ ಸುದ್ದಿನಾ ಎಂದು  ಅಭಿಮಾನಿಗಳು ಪ್ರಶ್ಮಿಸುತ್ತಿದ್ದಾರೆ.

ಈ ಬಾರಿ ನಟಿ ಐಶ್ವರ್ಯ ರೈ ಅವರ ಫೋಟೋವೊಂದಿಷ್ಟು ಸೋಶಿಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಫೋಟೋ ಹಾಕಿ, ಅಭಿಮಾನಿಗಳು ಎಷ್ಟು ತಿಂಗಳಾಗಿದೆ ಮಾಜಿ ವಿಶ್ವ ಸುಂದರಿಗೆ ಅಂತಾ ಕೇಳಿದ್ದಾರೆ. ಈ ಎಲ್ಲಾ ಫ್ಯಾನ್ಸ್ ಗೆ ಅನುಮಾನ ಬಂದಿರುವುದು ಐಶ್ವರ್ಯ ಅವರ ಗರ್ಭಿಣಿಯಂತೆ ಕಾಣುತ್ತಿರುವ ಫೋಟೋಗಳು. ಇದಾಗಿದ್ದು ಎಲ್ಲಿ ಗೊತ್ತಾ..? ಈ ಪ್ರಶ್ನೆ ಇದೀಗ ಬಿ ಟೌನ್’ನ ತನಕವೂ ಮುಟ್ಟಿದೆ.ಇತ್ತೀಚೆಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಸಮಯ ಕಳೆಯಲು ಗೋವಾ ಬೀಚ್‍ಗೆ ಹೋಗಿದ್ದರು. ಈ ವೇಳೆ ಅವರು ಇಬ್ಬರು ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ.

ಈ ಫೋಟೋ ನೋಡಿದ ಅಭಿಮಾನಿಗಳು ಐಶ್ವರ್ಯ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಅಂದಹಾಗೇ ನಟಿ  ಧರಿಸಿದ ಉಡುಪಿನಲ್ಲಿ ಗರ್ಭಣಿಯಂತೆ ಕಾಣುತ್ತಿದ್ದಾರೆ.ಬೀಚ್‍ನಲ್ಲಿ ಅಭಿಷೇಕ್ ಬಿಳಿ ಬಣ್ಣದ ಶರ್ಟ್ ಹಾಕಿ ಅದಕ್ಕೆ ಶಾರ್ಟ್ಸ್ ಧರಿಸಿದ್ದರು. ಆದರೆ ಐಶ್ವರ್ಯ ಧರಿಸಿದ ಉಡುಪಿನಲ್ಲಿ ಅವರು ಗರ್ಭಿಣಿಯಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದರು. ನಟಿ ಐಶ್ವರ್ಯ ಅವರು ಪ್ರಗ್ನೆಂಟ್ ಆಗಿದ್ದಾರಾ ಎಂದು ಪ್ರಶ್ನಿನಿಸುತ್ತಿದ್ದಾರೆ...? ಅದಕ್ಕೆ ಮತ್ತೊಬ್ಬರು ಇಲ್ಲ ಅವರು ಗರ್ಭಿಣಿ ಆಗಿಲ್ಲ ಎಂದರು. ಇದೇ ವೇಳೆ ಮತ್ತೊಬ್ಬರು ಐಶ್ವರ್ಯ ಮತ್ತೊಂದು ಮಗುವಿಗೆ ಜನ್ಮ ನೀಡಲು ನಾನು ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.2011 ರಲ್ಲಿ ಆರಾಧ್ಯ ಗೆ ತಾಯಿಯಾದ ಐಶ್ವರ್ಯ ರೈ ಮತ್ತೆ ಗರ್ಭಿಣಿಯಾಗೋದನ್ನು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ಬಾರಿ ಆಕೆ ಗರ್ಭಿಣಿಯಾಗಿಲ್ಲ, ತಾವು ಧರಿಸಿದ ಉಡುಪಿನಿಂದ ಹೊಟ್ಟೆ ಉಬ್ಬಿದಂತೆ ಕಾಣುತ್ತಿದೆ ಅಷ್ಟೆ ಎಂದಿರುವ ಕೆಲವರು, ಇಲ್ಲಾ ಐಶ್ವರ್ಯ ಗರ್ಭಿಣಿಯಾಗಿದ್ರೆ ಅದರಲ್ಲಿ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ.

Edited By

Kavya shree

Reported By

Kavya shree

Comments