'ನನ್ನ ಸಹಾಯಕ್ಕೆ ಯಾರು ಬಂದಿಲ್ಲ' ಎಂಬ ವಿಜಯಲಕ್ಷ್ಮಿ ಹೇಳಿಕೆಗೆ : ಖಡಕ್ ರಿಯಾಕ್ಟ್ ಮಾಡಿದ ಹ್ಯಾಟ್ರಿಕ್ ಹೀರೋ..?!!!

25 Mar 2019 10:13 AM | Entertainment
8746 Report

ರಾಜ್ ಕುಮಾರ್ ಅಪ್ಪಾಜಿ ಇದ್ದಿದ್ರೆ ನನಗೆ ಈ ಸ್ಥಿತಿ ಬರ್ತಾಯಿರಲಿಲ್ಲ. ನಾನು ಏನಂಥಾ ತಪ್ಪು ಮಾಡಿದ್ದೀನಿ, ಗೊತ್ತಾಗ್ತಿಲ್ಲ. ಸುದೀಪ್ ಬಿಟ್ಟರೆ ಯಾರೂ ನನ್ನ ಮೇಲೆ ಕರುಣೆ ತೋರುತ್ತಿಲ್ಲ ಯಾಕೆ...? ಶಿವಣ್ಣ, ಅಪ್ಪು, ಯಶ್, ದರ್ಶನ್ ಯಾಕೆ ನನಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ ಎಂದು ಕಣ್ಣೀರು ಸುರಿಸಿ ವಿಡಿಯೋ ಮಾಡಿ ನೆರವು ನೀಡಲು ಸಹಾಯ ಹಸ್ತ ಚಾಚಿದ ನಟಿ ವಿಜಯಲಕ್ಷ್ಮಿ ಗೆ ಇದೀಗ ಶಿವರಾಜ್’ಕುಮಾರ್ ಖಡಕ್ ಆಗಿ ಉತ್ತರ ನೀಡಿದ್ದಾರೆ. ಅವರ ಶಾಕಿಂಗ್ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಇಲ್ಲಿಯವರೆಗೂ ಈ ವಿಚಾರ ಸಂಬಂಧ ಮಾತನಾಡದ ಶಿವಣ್ಣ  ಮೈಸೂರಿನಲ್ಲಿ ಸದ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾನು ವಿಜಯಲಕ್ಷ್ಮಿ ಒಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಸಾಧ್ಯವಿಲ್ಲ. ಏಕೆಂದರೆ ನಾನು ಎಲ್ಲರಿಗೂ ಸಹಾಯ ಮಾಡುತ್ತಿರುತ್ತೇನೆ. ನಾವು ಮಾಡಿದ ಸಹಾಯ ಬೇರೆಯವರ ಬಾಯಿಂದ  ಪಬ್ಲಿಸಿಟಿ ಪಡೆಯೋ ಅಗತ್ಯವಿಲ್ಲ. ಅವರಿಗೆ ಸಹಾಯ ಮಾಡೋ ಅನಿವಾರ್ಯತೆ ನನಗಿಲ್ಲ. ಅವರ ಮನಸ್ಸಿಗೆ ಏನೇನೋ ಬರುತ್ತಾ ಅವರು ಬೇಕಾದ ಹಾಗೇ ಮಾತನಾಡಲೀ,  ಅವರು ಕೇಳಿರುವುದಲ್ಲಿ ನ್ಯಾಯ ಇದೆಯೋ ಇಲ್ಲವೋ ನೋಡಬೇಕು. ನಾವು ಸರಿನೋ ಅವರು ಸರಿನೋ ದೇವರೇ ನೋಡಬೇಕು” ಎಂದರು. ಕಷ್ಟ ಬರುತ್ತೆ ನಿಜ. ಆದರೆ ಎಲ್ಲಾ ಇದ್ದು ಬೇಡೋದು ಸರಿಯಲ್ಲ. ಅಂದಹಾಗೇ ಸಮಸ್ಯೆಯಿಂದ ಹೊರ ಬರುವಲ್ಲಿ ಪ್ರಯತ್ನಿಸ ಬೇಕು. ಅದೂ ಬಿಟ್ಟು ಪ್ರಚಾರ ಮಾಡಿಕೊಂಡು   ಸಹಾಯ ಮಾಡಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಹೇಳಿ.

Image result for vijayalakshmi with shivarajkumarಚಾಮುಂಡಿ ಬೆಟ್ಟದಲ್ಲಿ ಕುಂಟನಿಗೂ ನಾನು 2 ಸಾವಿರ ರೂ. ಸಹಾಯ ಮಾಡಿದೆ. ಎಷ್ಟೋ ಹೆಣ್ಣುಮಕ್ಕಳು ಗಾರ್ಮೆಂಟ್ಸ್ ನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಅವರನ್ನು ನೋಡಿದಾಗ ಹೆಮ್ಮ ಅನ್ನಿಸುತ್ತೆ, ಕೈ ಮುಗಿಯಬೇಕು ಅನ್ನಿಸುತ್ತೆ ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ. ಅನಿವಾರ್ಯವಾಗಿ ಬೇಡಿದವರಿಗೆ ಸಹಾಯ ಮಾಡಬೇಕಾಗುತ್ತದೆ. ಆದರೆ ಎಲ್ಲಾ ಇದ್ದು ಕೊಂಡು ಬೇಡುವುದು ಸರಿಯಲ್ಲ ಎಂದು ನಟಿ ವಿಜಯಲಕ್ಷ್ಮಿಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ನಟಿ ವಿಜಯಲಕ್ಷ್ಮಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು ಆ ಸಮಯದಲ್ಲಿ ಸುದೀಪ್ ಬಿಟ್ಟರೆ ಶಿವಣ್ಣನಿಗೆ, ಅಪ್ಪುಗೆ ನನ್ನ ಬಗ್ಗೆ ಕರುಣೆ ಇಲ್ಲ. ನಾನೇನು ಮಾಡಿದ್ದೀನಿ ಅಂತಾ ಗೊತ್ತಾಗ್ತಿಲ್ಲ ಎಂಬ ಹೇಳಿಕೆ ಶಿವಣ್ಣ ಉತ್ತರ ನೀಡಿದ್ದಾರೆ.

Edited By

Kavya shree

Reported By

Kavya shree

Comments